ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ. ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು […]
ವಿದ್ಯುತ್ಕಾಂತೀಯ ವರ್ಣಪಟಲ – ಒಂದು ವಿಸ್ತಾರವಾದ ಹರಹಿನಲ್ಲಿ ಕ್ರಮವಾಗಿ ಇರಿಸಿದ ವಿದ್ಯುತ್ಕಾಂತೀಯ ವಿಕಿರಣಗಳು. ಇದರಲ್ಲಿ ಅತಿನೇರಳೆ, ಅಧೋಕೆಂಪು, ಕಣ್ಣಿಗೆ ಕಾಣುವ ಅಲೆಗಳೇ ಮುಂತಾದ ವಿವಿಧ ರೀತಿಯ ಅಲೆಗಳು ಇರುತ್ತವೆ.
ವಿದ್ಯುತ್ ಕಾಂತೀಯ ವಿಕಿರಣ ಅಥವಾ ವಿದ್ಯುತ್ಕಾಂತೀಯ ಅಲೆ – ವಿದ್ಯುತ್ ಕ್ಷೇತ್ರ ಹಾಗೂ ಕಾಂತಕ್ಷೇತ್ರಗಳನ್ನು ಒಳಗೊಂಡಿರುವ ಮತ್ತು ಚಲಿಸಲು ಯಾವ ಮಾಧ್ಯಮವೂ ಬೇಕಿಲ್ಲದ ಅಲೆಗಳು. ಬೆಳಕು ಸಹ ಇಂತಹ ಒಂದು ಅಲೆಯಾಗಿದೆ.
ವಿದ್ಯುತ್ಕಾಂತೀಯ ರೇಚಕ ಯಂತ್ರ( ಪಂಪು) – ದ್ರವರೂಪೀ ಲೋಹಗಳನ್ನು ಕೊಳವೆಯ ಮೂಲಕ ಮೇಲೆತ್ತಲು ಬಳಸುವ ಒಂದು ಉಪಕರಣ.
ವಿದ್ಯುದಯಸ್ಕಾಂತ - ಮೃದು ಕಬ್ಬಿಣದ ಸುತ್ತ ಒಂದು ತಂತಿಯನ್ನು ಸುತ್ತುವ ಮೂಲಕ ರೂಪಿಸಿದಂತಹ ಒಂದು ಅಯಸ್ಕಾಂತ. ಎಲ್ಲಿಯವರೆಗೆ ತನ್ನಲ್ಲಿ ವಿದ್ಯುತ್ ಹರಿಯುತ್ತದೋ ಅಲ್ಲಿಯವರೆಗೆ ಅದು ಅಯಸ್ಕಾಂತದಂತೆ ವರ್ತಿಸುತ್ತದೆ.
ವಿದ್ಯುತ್ ವಿಭಜಕ – ತನ್ನೊಳಗಿನ ಪರಮಾಣುಗಳನ್ನು ಧನ ಹಾಗೂ ಋಣ ವಿದ್ಯುದಂಶದ ಅಣುಗಳಾಗಿ ವಿಭಜಿತಗೊಳಿಸುವ ಮೂಲಕ ವಿದ್ಯುತ್ತನ್ನು ತನ್ನೊಳಗೆ ಹರಿಯಿಸುವ ವಸ್ತು
Like us!
Follow us!