Electrostatics

ಎಲೆಕ್ಟ್ರೋಸ್ಟ್ಯಾಟಿಕ್ಸ್ – ಸ್ಥಾಯೀವಿದ್ಯುತ್ ವಿಜ್ಞಾನ  – ವಿಶ್ರಾಂತಿಯಲ್ಲಿರುವ ‌ ವಿದ್ಯದಂಶಗಳನ್ನು, ಅವುಗಳ ನಡುವಿನ ಬಲಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯುತ್ ಕ್ಷೇತ್ರಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.

Ellipsoid

ಎಲಿಪ್ಸಾಯ್ಡ್ –  ಅಂಡಾಕೃತಿ‌ ಘನ‌- ಮೂರು ಆಯಾಮಗಳ ಒಂದು‌ ಘನಾಕೃತಿ ಇದು, ಮೊಟ್ಟೆಯಂತೆ ಇರುತ್ತೆ.

Elementary particles

ಎಲಿಮೆಂಟರಿ ಪಾರ್ಟಿಕಲ್ಸ್ – ಮೂಲಭೂತ ಕಣಗಳು – ಈ ವಿಶ್ವದ ಎಲ್ಲ ವಸ್ತುಗಳನ್ನು ರೂಪಿಸಿರುವ ಆದರೆ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವ ಕಣಗಳು. ಇವು ಪರಮಾಣುವಿನ ಒಳಗೆ ಇರುತ್ತವೆ. 

Electrostatic induction 

ಎಲೆಕ್ಟ್ರೋಸ್ಟ್ಯಾಟಿಕ್ ಇಂಡಕ್ಷನ್ – ಸ್ಥಾಯೀವಿದ್ಯುತ್ ಆವಾಹನೆ – ಒಂದು ವಿದ್ಯುತ್ ಕ್ಷೇತ್ರದ ಯಾವುದಾದರೊಂದು ಬಿಂದುವಿನಲ್ಲಿ ಧನ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಮೂಲಕ ವಿದ್ಯುತ್ತನ್ನು ಉತ್ಪಾದಿಸುವುದು.

Electrostatic precipitation

ಎಲೆಕ್ಟ್ರೋಸ್ಟ್ಯಾಟಿಕ್ ಪ್ರಿಸಿಪಿಟೇಷನ್ – ಸ್ಥಾಯೀವಿದ್ಯುತ್ ಅವಪತನ – ಒಂದು ಅನಿಲದಲ್ಲಿ‌ ತೇಲಾಡುತ್ತಿರುವ ಸ್ಥಿತಿಯಲ್ಲಿರುವ ಘನವಸ್ತು ಅಥವಾ ದ್ರವವಸ್ತುವಿನ ಕಣಗಳನ್ನು ಬೇರೆಮಾಡುವ ಅಥವಾ ತೆಗೆದು ಹಾಕುವ ಒಂದು ವಿಧಾನ.

Electrostatic generator

ಎಲೆಕ್ಟ್ರೋಸ್ಟ್ಯಾಟಿಕ್ ಜೆನರೇಟರ್ – ಸ್ಥಾಯೀವಿದ್ಯುತ್ತಿನ ಮೂಲಕ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ವಿನ್ಯಾಸಗೊಳಿಸಿದ ಒಂದು ಉಪಕರಣ. 

Electrostatic field

ಎಲೆಕ್ಟ್ರೋಸ್ಟ್ಯಾಟಿಕ್ ಫೀಲ್ಡ್ – ಸ್ಥಾಯಿ (ಚಲಿಸದಿರುವ)ವಿದ್ಯುದಂಶದಿಂದ ಉತ್ಪತ್ತಿಯಾದ ವಿದ್ಯುತ್ ಕ್ಷೇತ್ರ.

Electroscope 

ಎಲೆಕ್ಟ್ರೋಸ್ಕೋಪ್ – ವಿದ್ಯುತ್ ಸಾಮರ್ಥ್ಯ ಶೋಧಕ – ವಿದ್ಯುತ್ ಅಂತಃ ಸಾಮರ್ಥ್ಯವ್ಯತ್ಯಾಸವನ್ನು ಪತ್ತೆ ಮಾಡುವ ಉಪಕರಣ.

Electroplating

ಎಲೆಕ್ಟ್ರೋಪ್ಲೇಟಿಂಗ್ – ವಿದ್ಯುಲ್ಲೇಪನ – ಒಂದು ಘನವಸ್ತುವಿನ ಮೇಲ್ಮೈಗೆ ವಿದ್ಯುದ್ವಿಭಜನೆಯ ಮೂಲಕ ಒಂದು ಲೋಹವನ್ನು ಲೇಪಿಸುವುದು‌.

Electro optical effect 

ಎಲೆಕ್ಟ್ರೋಆಪ್ಟಿಕಲ್ ಎಫೆಕ್ಟ್ – ವಿದ್ಯುತ್ ದೃಶ್ಯ ಬೆಳಕು ಪರಿಣಾಮ – ಯಾವುದಾದರೊಂದು ಪಾರದರ್ಶಕ‌ ವಿದ್ಯುತ್ ನಿರೋಧಕ ವಸ್ತುವೊಂದನ್ನು ತುಂಬ ಬಲವತ್ತರವಾದ ವಿದ್ಯುತ್ ಕ್ಷೇತ್ರದಲ್ಲಿರಿಸಿದಾಗ ಆ ಕ್ಷೇತ್ರದ ಹಾಗೂ ಆ ವಸ್ತುವಿನ ವಕ್ರೀಭವನದ ಗುಣಲಕ್ಷಣಗಳ ನಡುವೆ ಉಂಟಾಗುವ ಅಂತರ್ ಕ್ರಿಯೆ. 

Page 2 of 2

Kannada Sethu. All rights reserved.