ಮೊದಲು ಕಟ್ಟಬೇಕು ಸೇತುವೆ ಮನಗಳಿಗೆ ಇಲ್ದಿದ್ರೆ ಹೇಗೆ ತಲುಪುತ್ತೆ ಕನ್ನಡ‌ ಪಾಠ ಮಕ್ಕಳಿಗೆ?

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪಾಠ ಮಾಡಿರುವ ನನ್ನಂತಹ ಕನ್ನಡ ಅಧ್ಯಾಪಕರಿಗೆ ಒಂದು ವಿಷಯ ಚೆನ್ನಾಗಿ ಮನದಟ್ಟಾಗಿರುತ್ತದೆ, ಎಂಬುದು ನನ್ನ ಅನಿಸಿಕೆ. ಅದೇನೆಂದರೆ, ಪ್ರಾಥಮಿಕ-ಪ್ರೌಢ-ಪದವಿಪೂರ್ವ- ಪದವಿ …. ಯಾವುದೇ ಹಂತವಾಗಲಿ, ಉತ್ತಮವಾಗಿ ಪಾಠ ಮಾಡುವ ಆಸೆಯುಳ್ಳ ಕನ್ನಡ ಅಧ್ಯಾಪಕರು ಮೊದಲು ವಿದ್ಯಾರ್ಥಿಗಳ ಮನವನ್ನು ಮುಟ್ಟುವ ಸೇತುವೆ ಕಟ್ಟಿಕೊಳ್ಳಬೇಕು; ಆಮೇಲಷ್ಟೇ ಪಾಠ ಮಾಡಬೇಕು.  ‘ಈ ಅಧ್ಯಾಪಕರು ಸಹ ನನ್ನಂತೆ ಒಬ್ಬ ಮನುಷ್ಯರು, ಭಾವನೆಗಳಿರುವವರು, ಜೀವನದೊಂದಿಗಿನ ಹೋರಾಟದಲ್ಲಿ ನನ್ನ ಪಯಣಕ್ಕೆ ಅರ್ಥಪೂರ್ಣ ಬೆಂಬಲ ನೀಡಬಲ್ಲವರು’ ಎಂಬ ಮನೋಭಾವವು ವಿದ್ಯಾರ್ಥಿಗಳಲ್ಲಿ […]

Exhaust velocity 

ಎಕ್ಸ್ ಹಾಸ್ಟ್ ವೆಲಾಸಿಟಿ – ಹೊರಚಿಮ್ಮುವ ವೇಗ – ರಾಕೆಟ್ಟಿನಲ್ಲಿನ ಉರಿದ ಅನಿಲಗಳು ಹೊರಕ್ಕೆ ಚಿಮ್ಮುವ ವೇಗ.

Exclusion principle ( Pauli’s )

ಎಕ್ಸ್ ಕ್ಲೂಷನ್ ಪ್ರಿನ್ಸಿಪಲ್ (ಪೌಲೀಸ್) –  (ಪೌಲಿಯವರ) ಬೇರೆಗೊಳಿಸುವ ಸಿದ್ಧಾಂತ – ಒಂದು ವ್ಯವಸ್ಥೆಯಲ್ಲಿನ‌ ಯಾವ ಎರಡು ಕಣಗಳೂ, ಉದಾಹರಣೆಗೆ ಒಂದು ಪರಮಾಣುವಿನಲ್ಲಿನ‌ ಎರಡು ಎಲೆಕ್ಟ್ರಾನುಗಳು ಏಕರೂಪಿಯಾದ (ಒಂದೇ ಅಂದರೆ ಅದದೇ) ಕ್ವಾಂಟಂ ಸಂಖ್ಯೆಗಳನ್ನು ಹೊಂದಿರಲು ಸಾಧ್ಯ ಇಲ್ಲ ಎಂಬ ಸಿದ್ಧಾಂತ ಇದು. 

Exciton 

ಎಕ್ಸೈಟಾನ್ – ಉತ್ತೇಜಿತ ಪರಮಾಣುವಿನಂತೆ ವರ್ತಿಸುವಂತಹ ಒಂದು ಎಲೆಕ್ಟ್ರಾನು‌ ಹಾಗೂ ಒಂದು ರಂಧ್ರಗಳ ಕಣಜೋಡಿ.

Excitation 

ಎಕ್ಸೈಟೇಷನ್ – ಉತ್ತೇಜನ‌ – ಒಂದು ಬೀಜಕೇಂದ್ರ/ ಎಲೆಕ್ಟ್ರಾನು/ ಅಣು/ವಿದ್ಯುದಂಶವು ಶಕ್ತಿಯನ್ನು ಪಡೆದುಕೊಂಡು ತಾನು ಇರುವ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಶಕ್ತಿಯ (ಕ್ವಾಂಟಂ -ಶಕ್ತಿ ಪೊಟ್ಟಣ) ಸ್ಥಿತಿಗೆ ಏರುವುದು.

Exchange force 

ಎಕ್ಸ್ ಚೇಂಜ್ ಫೋರ್ಸ್ – ವಿನಿಮಯ ಬಲ – ಎರಡು ಅಣುಗಳ ನಡುವೆ ಕಣಗಳ ವಿನಿಮಯದಿಂದ ಉತ್ಪತ್ತಿಯಾಗುವ ಬಲ.‌ ಈ ಬಲದಿಂದಾಗಿ ಆ ಅಣುಗಳ ನಡುವೆ ಬಂಧವೊಂದು‌ ಸಾಧ್ಯವಾಗುತ್ತದೆ.

ಕನ್ನಡ ಗಾದೆಮಾತು – ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ.

ಕನ್ನಡದ ಹತ್ತು ಅತ್ಯಂತ ಜನಪ್ರಿಯ ಗಾದೆ ಮಾತುಗಳನ್ನು ಪಟ್ಟಿ ಮಾಡುವುದಾದರೆ ಆ ಪಟ್ಟಿಯಲ್ಲಿ  ಈ ಗಾದೆ ಮಾತು ಕೂಡ ಸೇರುತ್ತದೆ ಅನ್ನಿಸುತ್ತೆ; ಏಕೆಂದರೆ ಕನ್ನಡಿಗರು ಮತ್ತೆ ಮತ್ತೆ ಬಹುವಾಗಿ ಬಳಸುವ ಒಂದು ಗಾದೆ ಮಾತಿದು. ಹಿಂಸೆ ಕೊಡುತ್ತಿದ್ದ ಪಿಶಾಚಿಯೊಂದು ಬಾಗಿಲಿಂದ ಹೋಯಿತಪ್ಪ, ಸದ್ಯ! ಅಂದುಕೊಳ್ಳುವಷ್ಟರಲ್ಲಿ ಅದು ಗವಾಕ್ಷಿಯಿಂದ (ವೆಂಟಿಲೇಟರ್) ವಾಪಸ್ಸು ಬಂದರೆ, ಅದರಿಂದ ತೊಂದರೆ ಅನುಭವಿಸುತ್ತಿರುವವರಿಗೆ ಹೇಗಾಗಬೇಡ!  ಇದೇ ರೀತಿಯಲ್ಲಿ,  ನಮಗೆ ಸದಾ ಕಿರಿಕಿರಿ, ತೊಂದರೆ ಮಾಡುತ್ತಿದ್ದ ಸಂಗತಿಯೊಂದು ನಮ್ಮ ಬದುಕಿನಿಂದ ಹೋಯಿತು, ಮರೆಯಾಯಿತು ಅಂದುಕೊಳ್ಳುವಷ್ಟರಲ್ಲಿ, ಅದು […]

Evaporation

ಎವಾಪೊರೇಷನ್ – ಆವಿಯಾಗುವಿಕೆ – ಘನ‌ ಅಥವಾ ದ್ರವ ಸ್ಥಿತಿಯಿಂದ ವಸ್ತುವು ಅನಿಲ ಸ್ಥಿತಿಗೆ ಬದಲಾಗುವ ಪ್ರಕ್ರಿಯೆ.

Euler force

ಯೂಲರ್ ಫೋರ್ಸ್ – ಎರಡೂ ಪಕ್ಕಗಳಲ್ಲೂ ಎರಡು ಕಂಬಗಳ ಆಧಾರದ ಮೇಲೆ ನಿಂತಿರುವಂತಹ ತೊಲೆಯನ್ನು ಬಗ್ಗಿಸಲು ಬೇಕಾದ ನಿರ್ಣಾಯಕ ಬಲ.‌

Ether

ಈಥರ್ – ಒಂದು ಕಾಲ್ಪನಿಕ ದ್ರವ. ಮುಂಚಿನ ಕಾಲದಲ್ಲಿ,  ಇದು ಇಡೀ ಖಗೋಳ ವಿಶ್ವವನ್ನು ವ್ಯಾಪಿಸಿದೆ ಮತ್ತು ವಿದ್ಯುತ್ ಕಾಂತೀಯ ಅಲೆಗಳ ಚಲನೆಗೆ ಮಾಧ್ಯಮವಾಗಿದೆ  ಎಂದು ತಿಳಿಯಲಾಗಿತ್ತು.

Page 1 of 4

Kannada Sethu. All rights reserved.