ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್ – ಎಲೆಕ್ಟ್ರಾನು ಗಿರಕಿ ಅನುರಣನ – ವರ್ಣಪಟಲ ದರ್ಶಕ ವ್ಯವಸ್ಥೆ ( spectroscopy) ಯಲ್ಲಿ ಬಳಸುವ ಒಂದು ಕಾರ್ಯವಿಧಾನ ಇದು. ಎಲೆಕ್ಟ್ರಾನಿನ ಗಿರಕಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಕಾಂತೀಯ ತಿರುಗುಬಲವನ್ನು ಆಧರಿಸಿ, ಅಣು ವೊಂದರಲ್ಲಿ ಎಲೆಕ್ಟ್ರಾನೊಂದು ಎಲ್ಲಿದೆ ಎಂದು ತಿಳಿಯುವಲ್ಲಿ ಈ ವಿಧಾನವು ಸಹಾಯ ಮಾಡುತ್ತದೆ.
ಎಲೆಕ್ಟ್ರೋಸ್ಟ್ಯಾಟಿಕ್ ಯೂನಿಟ್ – ಸ್ಥಾಯಿ ವಿದ್ಯುತ್ ಮೂಲಮಾನ – ಸಿಜಿಎಸ್( ಸೆಂಟಿಮೀಟರ್, ಗ್ರಾಂ, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿನ ಸ್ಥಾಯಿವಿದ್ಯುತ್ ಮೂಲಮಾನಗಳು. ಉದಾಹರಣೆಗೆ ಸ್ಟ್ಯಾಟ್ ಕೂಲಂಬ್, ಸ್ಟ್ಯಾಟ್ ವೋಲ್ಟ್.
ಎಸ್ಕೇಪ್ ವೆಲಾಸಿಟಿ – ಒಂದು ಉಪಗ್ರಹ ಅಥವಾ ಚಂದ್ರದ ಮೇಲ್ಮೈ ಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೋಗಲು ಒಂದು ವಸ್ತುವು ಹೊಂದಿರಬೇಕಾದ ಕನಿಷ್ಠ ವೇಗ.
ಎರ್ಗೋಮೀಟರ್ – ಶಕ್ತಿಮಾಪಕ – ಯಾವುದೇ ಉಪಕರಣವು ಮಾಡಿದ ಕೆಲಸದಿಂದ ಉತ್ಪನ್ನವಾದ ಶಕ್ತಿಯನ್ನು ಅಳೆಯುವ ಉಪಕರಣ.
ಎರಿಯೋಮೀಟರ್ – ಕಿರು ವ್ಯಾಸಮಾಪಕ – ಬೆಳಕಿನಲೆಯ ಹಬ್ಬುವಿಕೆ
(ಡಿಫ್ರ್ಯಾಕ್ಷನ್) ಯನ್ನು ಬಳಸಿಕೊಂಡು ಅತಿ ಚಿಕ್ಕ ವ್ಯಾಸವನ್ನು ಅಳೆಯಲು ಉಪಯೋಗಿಸುವಂತಹ ಉಪಕರಣ.
ಎರೆಕ್ಟ್ – ನೆಟ್ಟಗೆ ನಿಂತ, ಸೀದಾ – ವಸ್ತು ಹೇಗೆ ನಿಂತಿದೆಯೋ ಅದೇ ರೀತಿಯಲ್ಲೇ ನಿಂತ ಬಿಂಬವನ್ನು ವರ್ಣಿಸುವ ರೀತಿ.
ಈಕ್ವಿವೇಲೆಂಟ್ ಫೋಕಲ್ ಲೆಂಗ್ತ್ – ಸಮಸಮಾನ ಸಂಗಮ ದೂರ – ಪ್ರಧಾನ ಬಿಂದುವಿನಿಂದ ಅದರ ತತ್ಸಂಬಂಧಿತ
(corresponding) ಪ್ರಧಾನ ಸಂಗಮ ಬಿಂದುವಿಗೆ ಇರುವಂತಹ ದೂರ.
Like us!
Follow us!