ಫೆಟೀಗ್ – ವೈಫಲ್ಯ ( ಮುರಿದು ಬೀಳುವಿಕೆ ) – ಮತ್ತೆ ಮತ್ತೆ ಬೀಳುವ ಒತ್ತಡದಿಂದಾಗಿ ಒಂದು ವಸ್ತುವು ಮುರಿದು ಬಿದ್ದು ತನ್ನ ಕೆಲಸದಲ್ಲಿ ವಿಫಲಗೊಳ್ಳುವುದು.
ಫಾಸ್ಟ್ ರಿಯಾಕ್ಟರ್ – ವೇಗದ ಅಣುಸ್ಥಾವರ – ವೇಗ ನಿರೋಧಕವನ್ನು ಬಳಸದಿರುವ ಅಥವಾ ತುಸು ಪ್ರಮಾಣದಲ್ಲಷ್ಟೇ ಬಳಸುವ ಅಣುಸ್ಥಾವರ.
ಫಾಸ್ಟ್ ನ್ಯೂಟ್ರಾನ್ – ವೇಗದ ನ್ಯೂಟ್ರಾನು – ಅಣುಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾದ ಹೆಚ್ಚಿನ ಶಕ್ತಿ ಹೊಂದಿರುವ ನ್ಯೂಟ್ರಾನು.
ಫಾರ್ ಪಾಯಿಂಟ್ – ತುಟ್ಟತುದಿಯ ಬಿಂದು – ಕಣ್ಣಿನ ಅಕ್ಷಿಪಟಲದ ಮೇಲೆ ಬಿಂಬವು ರೂಪುಗೊಳ್ಳಲು ಸಾಧ್ಯ ಇರುವ ಅತ್ಯಂತ ದೂರದ ಬಿಂದು ಇದು.
ಫಾರ್ ಇನ್ ಫ್ರಾರೆಡ್ – ತುಟ್ಟತುದಿಯ ಅಧೋಕೆಂಪು -ವಿದ್ಯುತ್ಕಾಂತೀಯ ವರ್ಣಪಟಲದಲ್ಲಿನ ಅಧೋಕೆಂಪು ಅಲೆಪ್ರದೇಶದ ಅತ್ಯಂತ ಉದ್ದದ ತರಂಗಾಂತರವುಳ್ಳ ಭಾಗಗಳು.
ಫ್ಯಾಕ್ಟೋರಿಯಲ್ – ಆದಿಗುಣಕ – ಒಂದು ದತ್ತ ಸಂಖ್ಯೆ ಹಾಗೂ ಅದರ ಕೆಳಗಿರುವ ಎಲ್ಲ ಪೂರ್ಣಾಂಕಗಳ ಗುಣಲಬ್ಧ. ಸಾಮಾನ್ಯವಾಗಿ ಇದನ್ನುN! ಎಂದು ಬರೆಯುತ್ತಾರೆ.
ಫ್ಯಾರಡ್( F) – ಫ್ಯಾರಡ್( F) – ವಿದ್ಯುತ್ ಸಾಮರ್ಥ್ಯದ ಎಸ್.ಐ.ಮೂಲಮಾನ. ಭೌತವಿಜ್ಞಾನಿ ಮೈಕೆಲ್ ಫ್ಯಾರಡೆಯ( ಕಾಲ 1791-1867) ನೆನಪಿನಲ್ಲಿ ಇಟ್ಟ ಹೆಸರು ಇದು.
ಫಾಲ್ ಔಟ್ – ವಿಕಿರಣ ಪಾತ – ಅಣು ಸ್ಥಾವರಗಳು ಸ್ಫೋಟಗೊಂಡಾಗ ವಾತಾವರಣಕ್ಕೆ ಬಂದು ಸೇರಿಕೊಳ್ಳುವ ವಿಕಿರಣ ವಸ್ತುಕಣಗಳು. ಇವು ಮನುಷ್ಯನ ಹಾಗೂ ಪ್ರಾಣಿಗಳ ದೇಹಕ್ಕೆ ತುಂಬ ಅಪಾಯವನ್ನುಂಟುಮಾಡುತ್ತವೆ.
 
								 Like us!
 Like us! Follow us!
 Follow us!