ಫ್ಯಾರಡೆ ಎಫೆಕ್ಟ್ – ಫ್ಯಾರಡೆ ಪರಿಣಾಮ- ಕಾಂತಕ್ಷೇತ್ರದಲ್ಲಿರುವಂತಹ ಒಂದು ಅವಾಹಕ ಮಾಧ್ಯಮವೊಂದರಲ್ಲಿ ವಿಕಿರಣದ ಧ್ರುವೀಕರಣದ ಮೇಲ್ಮೈಯ ಸುತ್ತುವಿಕೆ.
ಫ್ಯಾರಡೆ ಡಿಸ್ಕ್ – ಫ್ಯಾರಡೆ ತಟ್ಟೆ ಅಥವಾ ಫ್ಯಾರಡೆ ಫಲಕ – ನೇರ ವಿದ್ಯುತ್ತನ್ನು ಉತ್ಪಾದಿಸುವ ಒಂದು ಉಪಕರಣ ಇದು. ಏಕಧ್ರುವ ವಿದ್ಯುದುತ್ಪಾದಕ. ಇದರಲ್ಲಿ, ಈ ಉದ್ದೇಶಕ್ಕಾಗಿ, ಕಾಂತಕ್ಷೇತ್ರದಲ್ಲಿ ಸುತ್ತುತ್ತಿರುವ ಲೋಹದ ತಟ್ಟೆಯೊಂದನ್ನು ಬಳಸುತ್ತಾರೆ.
ಐ – ಕಣ್ಣು ( ನೇತ್ರ) – ಒಂದು ಪ್ರಜ್ಞೇಂದ್ರಿಯ – ದೃಶ್ಯಬಿಂಬಗಳನ್ನು ಉತ್ಪತ್ತಿ ಮಾಡಿ ತತ್ಸಂಬಂಧೀ ನರಸಂಕೇತಗಳನ್ನು ಮೆದುಳಿಗೆ ಕಳಿಸುವ ಸಾಮರ್ಥ್ಯವು ಈ ಇಂದ್ರಿಯಕ್ಕೆ ಇರುತ್ತದೆ.
ಐ ಲೆನ್ಸ್ – ನೇತ್ರ ಮಸೂರ – ಮಸೂರಗಳ ಸಂಯೋಜನೆಯಲ್ಲಿ ಕಣ್ಣಿಗೆ ಅತ್ಯಂತ ಹತ್ತಿರ ಇರುವ ಮಸೂರ.
ಎಕ್ಸ್ಟೆನ್ಸೋಮೀಟರ್ – ವಿಸ್ತರಣಾ ಮಾಪಕ – ವಿಸ್ತರಣಾ ಮಾಪಕ – ರೇಖಾತ್ಮಕ ಬಲಪ್ರಯೋಗದಿಂದ ಉಂಟಾಗುವ ವಿಸ್ತರಣೆಯನ್ನು ( ಎಳೆತವನ್ನು) ಅಳೆಯುವ ಉಪಕರಣ.
ಎಕ್ಸ್ಪಾನ್ಸಿವಿಟಿ – ವಿಸ್ತರಣಾ ಸಾಮರ್ಥ್ಯ – ಒಂದು ವಸ್ತುವಿನ ತಾಪಮಾನವನ್ನು ಹೆಚ್ಚಿಸಿದಾಗ ಅದು ಎಷ್ಟು ಹಿಗ್ಗುತ್ತದೆ ಎಂಬುದರ ಅಳತೆ.
ಎಕ್ಸೋಥರ್ಮಿಕ್ – ಬಹಿರುಷ್ಣಕ ಕ್ರಿಯೆ – ಉಷ್ಣತೆಯು ಉತ್ಪತ್ತಿಯಾಗುವಂತಹ ರಾಸಾಯನಿಕ ಕ್ರಿಯೆ. ಉದಾಹರಣೆಗೆ ದಹನ.
Like us!
Follow us!