ಭಾವಗೀತೆಗಳು ಅಂದರೆ ಕನ್ನಡಿಗರೆಲ್ಲರೂ ” ಹಾಂ ಗೊತ್ತು” ಅನ್ನುತ್ತಾರೆ. ಆದರೆ ಭಾವನೃತ್ಯ ಎಂಬುದು ಹೆಚ್ಚು ಜನರು ಬಳಸುವ ಪದ ಅಲ್ಲ. ಭಾವಗೀತೆಯೊಂದಕ್ಕೆ ನಾಟ್ಯ ಸಂಯೋಜನೆ ಮಾಡಿದರೆ ಅದು ಭಾವನೃತ್ಯ. ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ ಯಾವುದೇ ಆಗಬಹುದು ; ಭಾವವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಭಾವನೃತ್ಯವು ಪರಿಣಾಮಕಾರಿಯಾಗಿ ಮಾಡುತ್ತದೆ. ಕುವೆಂಪು, ಬೇಂದ್ರೆ, ಪುತಿನ, ಕೆಎಸ್ ನ, ಹೆಚ್.ಎಸ್.ವಿ., ಜಿ.ಎಸ್.ಶಿವರುದ್ರಪ್ಪ ….ಇಂತಹ ಕವಿಗಳ ರಚನೆಗಳು ಭಾವನೃತ್ಯಕ್ಕೆ ಬಹುವಾಗಿ ಒಪ್ಪುತ್ತವೆ. ಉದಾಹರಣೆಗೆ ಕುವೆಂಪು ಅವರ ‘ಬೃಂದಾವನಕೆ ಹಾಲನು ಮಾರಲು […]
ಎಕ್ಸ್ಪಾನ್ಶನ್, ಥರ್ಮಲ್ – ತಾಪಮಾನೀಯ ವಿಸ್ತರಣೆ ಅಥವಾ ಉಷ್ಣತಾ ವಿಸ್ತರಣೆ – ಉಷ್ಣತೆಯು ಹೆಚ್ಚಾದಾಗ ಘನ, ದ್ರವ ಅಥವಾ ಅನಿಲರೂಪದ ವಸ್ತು, ಗಾತ್ರಗಳು ಹೆಚ್ಚುವ ಪ್ರಕ್ರಿಯೆ.
ಎಕ್ಸ್ ಪಾನ್ಶನ್ ಕ್ಲೌಡ್ ಛೇಂಬರ್ – ವಿಸ್ತರಣಾ ಮೋಡ ಕೋಣೆ ಅಥವಾ ವಿಸ್ತರಣಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥವು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.
ಎಕ್ಸೋಸ್ಫಿಯರ್ – ಹೊರಗೋಳ – 400 ಕಿಲೋಮೀಟರುಗಳ ದೂರದಲ್ಲಿ ಇರುವಂತಹ, ಭೂಮಿಯ ಅತ್ಯಂತ ಹೊರಗಿರುವ ವಾತಾವರಣ ಪದರ.
ಎಕ್ಸೋಎರ್ಜಿಕ್ – ಶಕ್ತಿದಾಯಕ ಪ್ರಕ್ರಿಯೆ – ಶಕ್ತಿಯನ್ನು ಹೊರಸೂಸುವ ಬೀಜಕೇಂದ್ರದ ಪ್ರಕ್ರಿಯೆಯನ್ನು ಸೂಚಿಸುವ ಪದ.
ಎಕ್ಸಿಟೆನ್ಸ್ – ಕಾಂತಿ ಸೂಸುವಿಕೆ – ಒಂದು ಮೇಲ್ಮೈಯ ಏಕಘಟಕ ವಿಸ್ತೀರ್ಣದ ಪ್ರದೇಶವು ಹೊರಸೂಸುವ ಪ್ರಕಾಶಮಾನವಾದ ಅಥವಾ ಹೊಳೆಯುವ ಬೆಳಕು. ಮುಂಚೆ ಇದನ್ನು emittance (ಎಮಿಟೆನ್ಸ್) ಎಂದು ಕರೆಯುತ್ತಿದ್ದರು.
Like us!
Follow us!