ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ, ಯಾವುದಾದರೂ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಅದೇ ವಿಭಾಗದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಕೊಡುವುದು ವಾಡಿಕೆ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಆ ವಿಭಾಗದ ಹಿರಿಯ ವಿದ್ಯಾರ್ಥಿಗಳು ಸ್ವಾಗತ ಸಮಾರಂಭ ಏರ್ಪಡಿಸುವುದೂ ಸಾಮಾನ್ಯ ಅನ್ನಿ. ನಮ್ಮ ಕಾಲೇಜಿನ ಸಭಾಂಗಣವು ಕನ್ನಡ ವಿಭಾಗದ ಪಕ್ಕವೇ ಇದೆ. ಹೀಗಾಗಿ ನಮಗೆ ಈ ಸ್ವಾಗತ ಸಮಾರಂಭ, ಬೀಳ್ಕೊಡುಗೆಗಳಾಗುವಾಗ ಚಂದಚಂದದ ಬಟ್ಟೆ ತೊಟ್ಟ ವಿದ್ಯಾರ್ಥಿನಿಯರ ಸರಬರ ಓಡಾಟ, ಅವರ ಖುಷಿಖುಷಿ ಹಾಡು, ನೃತ್ಯ, ಅಧ್ಯಾಪಕರ ಹಾರೈಕೆಯ ನುಡಿ…ಇತ್ಯಾದಿಗಳಿಗೆ […]
ಫೆರ್ರೋಮ್ಯಾಗ್ನೆಟಿಸಂ – ಪ್ರಬಲ ಅಯಸ್ಕಾಂತತೆ – ಕಬ್ಬಿಣ, ಕೊಬಾಲ್ಟ್ ಮತ್ತು ನಿಕ್ಕಲ್ ನಂತಹ ಕೆಲವು ವಸ್ತುಗಳು ಹೆಚ್ಚಿನ ಪ್ರಮಾಣದ ಕಾಂತೀಯತೆಯನ್ನು ಹೊಂದಿರುತ್ತವೆ, ಅಂದರೆ, ಬಹಳ ಬೇಗ ಕಾಂತಗಳಾಗುವ ಗುಣವುಳ್ಳ ವಸ್ತುಗಳು ಇವು. ಇಂತಹ ವಸ್ತುಗಳನ್ನು ಪ್ರಬಲ ಅಯಸ್ಕಾಂತೀಯತೆ ಹೊಂದಿರುವವು ಅನ್ನಲಾಗುತ್ತದೆ.
ಫೆರ್ರೋಎಲೆಕ್ಟ್ರಿಕಲ್ಸ್ – ವಿದ್ಯುತ್ ಕಾಂತಗಳು – ಪ್ರಬಲ ಅಯಸ್ಕಾಂತ ವಸ್ತುಗಳು ಹೊಂದಿರುವ ವಿದ್ಯುತ್ತೀಯ ಗುಣಲಕ್ಷಣಗಳನ್ನು ಹೊಂದಿರುವ ಅವಾಹಕ ವಸ್ತುಗಳು.
ಫೆರೈಟ್ಸ್ – ದುರ್ಬಲ ಕಾಂತಗಳು – ಇವು ಕಬ್ಬಿಣಯುತ ಸಂಯುಕ್ತವಸ್ತುಗಳ ಒಂದು ಗುಂಪು. ಇವುಗಳಿಗೆ ದುರ್ಬಲ ಆದರೆ ಶಾಶ್ವತ ಅಯಸ್ಕಾಂತ ಗುಣ ಇರುತ್ತದೆ.
ಫೆರ್ರಿ ಮ್ಯಾಗ್ನೆಟಿಸಂ – ದುರ್ಬಲ ಅಯಸ್ಕಾಂತತೆ – ಕೆಲವು ವಸ್ತುಗಳಲ್ಲಿ ಅಸಮಾನ ಕಾಂತೀಯ ತಿರುಗುಬಲಗಳು ಪರ್ಯಾಯ ವಿರುದ್ಧ ನೆಲೆಯಲ್ಲಿ ನೆಲೆ ನಿಂತಿದ್ದು, ಇವುಗಳ ಒಟ್ಟು ಫಲಿತವು ದುರ್ಬಲ ಅಯಸ್ಕಾಂತ ಗುಣವನ್ನು ಉಂಟುಮಾಡುತ್ತದೆ. ಇಂತಹ ವಸ್ತುಗಳನ್ನು ದುರ್ಬಲ ಅಯಸ್ಕಾಂತಗುಣೀಯ ವಸ್ತುಗಳು ಎನ್ನುತ್ತಾರೆ.
ಫರ್ಮಿಯಂ- ಫರ್ಮಿಯಂ – ಒಂದು ಯುರೇನಿಯಮೋತ್ತರ( ಟ್ರ್ಯಾನ್ಸ್ ಯುರೇನಿಕ್ -ನಿಯತಕಾಲಿಕ ಕೋಷ್ಟಕದಲ್ಲಿ ಯುರೇನಿಯಂನ ನಂತರ ಬರುವ) ಮೂಲವಸ್ತು. ಇದರ ಪರಮಾಣು ಸಂಖ್ಯೆ 100.
ಫರ್ಮಿ ಲೆವೆಲ್ – ಫರ್ಮಿ ಮಟ್ಟ – ಪರಮಶೂನ್ಯದಲ್ಲಿ ವಾಸ್ತವ್ಯವು ಸಾಧ್ಯವಾಗಬಹುದಾದ ಅತಿ ಹೆಚ್ಚಿನ ಮಟ್ಟ. ಇದು ವಾಹಕಗಳಲ್ಲಿ ವಾಹಕತಾ ಪಟ್ಟಿಯಲ್ಲಿ, ಅವಾಹಕಗಳಲ್ಲಿ ಅಂಚಿನ ಪಟ್ಟಿಯಲ್ಲಿ ಮತ್ತು ಅರೆವಾಹಕಗಳಲ್ಲಿ ನಿಷೇಧಿತ ಬಿರುಕುಪಟ್ಟಿಯಲ್ಲಿ ಇರುತ್ತದೆ.
ಫರ್ಮಿಯಾನ್ಸ್ – ಫರ್ಮಿಯಾನುಗಳು – ಫರ್ಮಿ ಡೆರಾಕ್ ಅಂಕಿಅಂಶಗಳನ್ನು ಪಾಲಿಸುವ ಕಣಗಳು.
Like us!
Follow us!