ಫರ್ಮಿ ಅನಿಲ ಮಾದರಿ – ಇದು ಪರಮಾಣು ಬೀಜಕೇಂದ್ರದ ಒಂದು ವಿನ್ಯಾಸ ಮಾದರಿ. ಇದರಲ್ಲಿ ನ್ಯೂಟ್ರಾನು ಮತ್ತು ಪ್ರೋಟಾನುಗಳನ್ನು ಫರ್ಮಿ-ಡೆರಾಕ್ ಸಂಖ್ಯಾಶಾಸ್ತ್ರವನ್ಜು ಪಾಲಿಸುವ ಮತ್ತು ಬೀಜಕೇಂದ್ರದ ಅಳತೆಯ ಘನಾಕೃತಿಯೊಳಗೆ, ಹೊರಗೆ ಬರದಂತೆ ಬಂಧಿಸಿ ಇಡಲ್ಪಟ್ಟ ಸ್ವತಂತ್ರ ಕಣಗಳು ಎಂದು ನೋಡಲಾಗುತ್ತದೆ.
ಫರ್ಮಿ ಡೆರಾಕ್ ಸ್ಟ್ಯಾಟಿಸ್ಟಿಕ್ಸ್ – ಫರ್ಮಿ ಡೆರಾಕ್ ಸಂಖ್ಯಾಶಾಸ್ತ್ರ – ಸಂಖ್ಯಾಶಾಸ್ತ್ರದ ಒಂದು ಶಾಖೆ ಇದು. ಇದನ್ನು ಏಕರೂಪೀ ಕಣಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಬಳಸುತ್ತಾರೆ. ಎನ್ರಿಕೊ ಫರ್ಮಿ ಮತ್ತು ಪಿ.ಎ.ಎಂ. ಡೆರಾಕ್ ಅವರ ನೆನಪಿನಲ್ಲಿ ಈ ಹೆಸರು.
ಫೀಡ್ ಬ್ಯಾಕ್ – ಹಿಮ್ಮರಳಿಕೆ – ಒಂದು ಉಪಕರಣ( ಉದಾ : ಶಕ್ತಿ ವರ್ಧಕ)ದಿಂದ ಹೊರಬೀಳುವ ಶಕ್ತಿಯ ಒಂದು ಭಾಗವನ್ನು ಮೂಲ ಆಕಾರಕ್ಕೆ ಹಿಮ್ಮರಳಿಸುವುದು.
Like us!
Follow us!