ಪ್ಲೋರೋಸೆಂಟ್ ಲ್ಯಾಂಪ್ – ಬಹಿರ್ ಪ್ರಕಾಶ ಬೀರುವ ವಸ್ತುವೊಂದನ್ನು ಒಂದು ಗಾಜಿನ ಕೊಳವೆಯ ಒಳಭಾಗಕ್ಕೆ ಹೆಚ್ಚಿದ್ದು, ಇದು ಬೆಳಕಿನ ಆಕರದಂತೆ ಕೆಲಸ ಮಾಡುವ ವ್ಯವಸ್ಥೆ.
ಫ್ಲೋರೋಸೆನ್ಸ್ – ಬಹಿರ್ ಪ್ರಕಾಶ – ಕೆಲವು ವಸ್ತುಗಳು ಒಂದು ತರಂಗಾಂತರದ ಬೆಳಕನ್ನು ಹೀರಿಕೊಂಡು ಇನ್ನೊಂದು ತರಂಗಾಂತರದ ಬೆಳಕನ್ನು ಹೊರಚೆಲ್ಲುತ್ತವೆ. ಇದು ಒಂದು ರೀತಿಯ ಸ್ವಯಂಪ್ರಕಾಶವಾಗಿರುತ್ತದೆ.
ಫ್ಲುಯಿಡಿಟಿ- ಪ್ರವಾಹಿ ಗುಣ( ದ್ರವತ್ವ) – ಸ್ನಿಗ್ಧತೆಯ ವಿರುದ್ಧ ಗುಣ ( ಸ್ನಿಗ್ಧತೆ = ಜಿಡ್ಡು, ಮಂದ).
ಫ್ಲುಯಿಡ್ – ದ್ರವ( ಪ್ರವಾಹಿ) – ಪ್ರವಹಿಸಬಲ್ಲ ಅಂದರೆ ಹರಿಯುವ ಸಾಮರ್ಥ್ಯವಿರುವ ವಸ್ತುವಿಗೆ ಬಳಸುವ ಪದ. ಇದು ಅನಿಲವೂ ಆಗಿರಬಹುದು.
ಫ್ಲೊಟೇಷನ್ ಲಾ – ತೇಲುವಿಕೆಯ ನಿಯಮ – ಒಂದು ದ್ರವದಲ್ಲಿ ತೇಲುತ್ತಿರುವ ವಸ್ತುವು ಸ್ಥಳಪಲ್ಲಟಿಸುವ ಆ ದ್ರವದ ದ್ರವ್ಯರಾಶಿಯು ಆ ವಸ್ತುವಿನ ದ್ರವ್ಯರಾಶಿಗೆ ಸಮವಾಗಿರುತ್ತದೆ.
ಫ್ಲಿಂಟ್ ಗ್ಲಾಸ್ – ಚಕಮಕಿ ಗಾಜು – ಸೀಸದ ಸಿಲಿಕೇಟ್ ಹೊಂದಿರುವ ಒಂದು ಬಗೆಯ ಗಾಜು. ಇದನ್ನು ಮಸೂರಗಳು, ಪಟ್ಟಕಗಳು ಮುಂತಾದವನ್ನು ತಯಾರು ಮಾಡುವ ಬೆಳಕುವಿಜ್ಞಾನದ ಗಾಜಾಗಿ ಬಳಸುತ್ತಾರೆ.
ಫ್ಲಿಕ್ಕರ್ ಫೋಟೋಮೀಟರ್ – ಮಿಣುಕು ಬೆಳಕುಮಾಪಕ – ಬೇರೆ ಬೇರೆ ಬೆಳಕಿನ ಆಕರಗಳ ಬೆಳಕನ್ನು ಹೋಲಿಸಲು ಬಳಸುವ ಬೆಳಕುಮಾಪಕ.
Like us!
Follow us!