Free oscillation

ಫ್ರೀ ಆಸ್ಸಿಲೇಷನ್ –  ಮುಕ್ತ ಆವರ್ತನ –  ಒಂದು ವ್ಯವಸ್ಥೆ ಅಥವಾ ವಸ್ತುವಿನ ಸಹಜ ಆವರ್ತನದಲ್ಲಿ ಇರುವ ಆಂದೋಲನ.‌ ಲೋಲಕವೊಂದರ  ಈ ಮುಕ್ತ ಆಂದೋಲನವು ಅದರ ಉದ್ದ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.

Free energy

ಫ್ರೀ ಎನರ್ಜಿ – ಮುಕ್ತ ಶಕ್ತಿ – ಉಪಯುಕ್ತ ಕೆಲಸ ಮಾಡಲು ಒಂದು ವ್ಯವಸ್ಥೆಗೆ  ಇರುವ ಸಾಮರ್ಥ್ಯ.

Fraunhofer lines 

ಫ್ರಾನ್ ಹಾಫರ್ ಲೈನ್ಸ್ – ಫ್ರಾನ್ ಹಾಫರ್ ಗೆರೆಗಳು – ಸೂರ್ಯನ ಬೆಳಕಿನಿಂದ ಉಂಟಾಗುವ ವರ್ಣಪಟಲದಲ್ಲಿನ ಗಾಢ ಕಪ್ಪು ಗೆರೆಗಳು. ಈ ಗೆರೆಗಳ ತರಂಗಾಂತರಗಳನ್ನು, ತರಂಗಾಂತರಗಳೊಂದಿಗೆ ಬದಲಾಗುವ ಪರಿಮಾಣಗಳನ್ನು ಗುರುತಿಸಲು ಪರಾಮರ್ಶನ‌ ಮಾನದಂಡಗಳಾಗಿ ಬಳಸುತ್ತಾರೆ. ‌ಉದಾಹರಣೆಗೆ, ವಕ್ರೀಭವನ ಸ್ಥಿರಾಂಕಗಳು.‌

Frame of reference

ಫ್ರೇಮ್ ಆಫ್ ರೆಫರೆನ್ಸ್ – ಪರಾಮರ್ಶನ ಚೌಕಟ್ಟು – ಇದು ನಿರ್ದೇಶಕ ಅಕ್ಷರೇಖೆಗಳ ಒಂದು ಚೌಕಟ್ಟು. ಇದರ ಸಹಾಯದಿಂದ ಸಮಯದೊಂದಿಗೆ ಬದಲಾಗುವ ವಸ್ತುವಿನ ಸ್ಥಾನವನ್ನು ಗುರುತಿಸಬಹುದು. 

 Fovea ( yellow spot)

ಫೋವಿಯಾ ( ಯೆಲ್ಲೋ‌ ಸ್ಪಾಟ್) – ಕುಳಿ ( ಹಳದಿ ಕುಳಿ) – ಅಕ್ಷಿ ಪರದೆಯ (ರೆಟಿನಾ) ಮೇಲೆ ಶಂಕುಗಳು ಅತಿ ಹೆಚ್ಚಾಗಿ, ಒತ್ತೊತ್ತಾಗಿ ಸಂಗ್ರಹಿತವಾಗಿರುವ ಒಂದು ಚಿಕ್ಕ ಪ್ರದೇಶ ಇದು (ಕಾಲು ಮಿಲಿಮೀಟರ್ ). ಕಣ್ಣಿನಲ್ಲಿ ದೃಷ್ಟಿಯು ಅತ್ಯಂತ ತೀಕ್ಷ್ಣ ವಾಗಿರುವ ಸ್ಥಳವೆಂದರೆ ಇದೇ. 

ಕನ್ನಡ ಗಾದೆಮಾತು – ಉಪ್ಪು ಸಿಕ್ರೆ ತುಪ್ಪದ ಚಿಂತೆ, ತುಪ್ಪ‌ ಸಿಕ್ರೆ ಕೊಪ್ಪರಿಗೆ ಚಿಂತೆ.

ಮನುಷ್ಯನ ಆಸೆಗೆ ಮಿತಿ ಇಲ್ಲ. ಉಪ್ಪು ಸಿಗುವವರೆಗೂ ಅದರ ಚಿಂತೆ ಮಾಡುವ ಮನುಷ್ಯ ಅದು ಸಿಕ್ಕಿದ ತಕ್ಷಣ ತುಪ್ಪದ ಚಿಂತೆ ಮಾಡುತ್ತಾನೆ. ಇನ್ನು ತುಪ್ಪ ಸಿಕ್ಕಿದರೆ ಅವನಿಗೆ ತೃಪ್ತಿ ಆಗುತ್ತದೆಯೇ? ಇಲ್ಲ.‌ ಮುಂದೆ ಅವನಿಗೆ ಕೊಪ್ಪರಿಗೆ ಹೊನ್ನಿನ ಚಿಂತೆ ಶುರುವಾಗುತ್ತದೆ! ಒಟ್ಟಿನಲ್ಲಿ ಎಷ್ಟಿದ್ದರೂ ಇನ್ನಷ್ಟಕ್ಕೆ ಆಸೆ ಪಡುವುದೇ ಮನುಷ್ಯನ ಸ್ವಭಾವ.‌ ಪುರಂದರದಾಸರು ಸಹ ‘ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ’ ಎಂದು ಮನುಷ್ಯನ ಈ ಸ್ವಭಾವವನ್ನು ಬಯಲಿಗೆಳೆದಿದ್ದಾರೆ.‌ ಈ ಗಾದೆಮಾತನ್ನು ಅರ್ಥ ಮಾಡಿಕೊಂಡರೆ ಬಹುಶಃ […]

ಕನ್ನಡ ಸಂಸ್ಕೃತಿಯ ಹೆಮ್ಮೆಯಾದ ಯಕ್ಷಗಾನವನ್ನು ಹಿಂದಿ ನಾಡಿಗೆ ಕೊಂಡೊಯ್ದ ಪ್ರತಿಭಾವಂತ ಕಲಾವಿದೆ – ಶ್ರೀಮತಿ  ವಿದ್ಯಾ ಕೋಳ್ಯೂರು

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ‘ಸಾಹಿತಿ ಹಾಗೂ ಕಲಾವಿದರ ಸಮಾವೇಶ’ದಲ್ಲಿ ಒಬ್ಬ ವಿಶಿಷ್ಟ ಕಲಾವಿದೆ – ಸಂಘಟಕಿಯನ್ನು ಭೇಟಿ ಆಗುವ ಸದವಕಾಶ ಬಂತು ನನಗೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಶ್ರೀಮತಿ‌ ವಿದ್ಯಾ ಕೋಳ್ಯೂರು ಎಂಬ ಮಹಿಳೆ ಅವರು. ಊಟದ ಬಿಡುವಿನಲ್ಲಿ ಹೀಗೆಯೇ ಪರಸ್ಪರ  ಪರಿಚಯಿಸಿಕೊಂಡು  ಲೋಕಾಭಿರಾಮವಾಗಿ ಮಾತಾಡುತ್ತಾ ಇದ್ದಾಗ ಅವರ ವಿಶಿಷ್ಟ ಕಲಾಕೈಂಕರ್ಯದ ಬಗ್ಗೆ ತಿಳಿದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ಆದವು. ಏಕೆ ಗೊತ್ತೇ? ಕಾಸರಗೋಡಿನ ಬಳಿ ಇರುವ ಕೋಳ್ಯೂರಿನ ಹಿರಿಯ […]

Fourth dimension

ಫೋರ್ತ್ ಡೈಮೆನ್ಶನ್ – ನಾಲ್ಕನೆಯ ಆಯಾಮ   – ಅವಕಾಶ ಮತ್ತು ಸಮಯದ ನಿರಂತರತೆಯ ಒಂದು ಆಯಾಮ ಇದು. ಉದ್ದ, ಅಗಲ, ದಪ್ಪಗಳನ್ನು ಹೊರತು ಪಡಿಸಿದ ಒಂದು ಆಯಾಮ.‌

Fourier series

ಫೋರಿಯರ್ ಸೀರೀಸ್ – ಫೋರಿಯರ್ ಸರಣಿ – ನಿಯತಕಾಲಿಕ ಗುಣಕವನ್ನು ತ್ರಿಕೋನಮಿತಿಯ (ಟ್ರಿಗೋನೋಮೆಟ್ರಿ) ಗುಣಕಗಳಾಗಿ‌ ವಿಸ್ತರಿಸಿ ಬರೆಯುವುದು.  ಇದನ್ನು ಮೊದಲು‌ ಫ್ರಾನ್ಸ್ ದೇಶದ ಗಣಿತಜ್ಞರಾದ ಜೆ.ಬಿ.ಜೆ. ಫೋರಿಯರ್‌ ( 1768 – 1830) ಅವರು ಸಂಕೀರ್ಣ ಅಲೆಯ ಸುಸಂಬದ್ಧ ಅಂಗಗಳನ್ನು ಕಂಡುಹಿಡಿಯಲು ಬಳಸಿದರು.

Foucault pendulum

ಫ್ಯೂಕೋ ಪೆಂಡ್ಯುಲಮ್  –  ಫ್ಯೂಕೋರ ಲೋಲಕ –  

ಭೂಮಿಯ ಸುತ್ತುವಿಕೆಯಿಂದಾಗಿ ನಿಧಾನವಾಗಿ ತಿರುಗುವ ಮೇಲ್ಮೈ ಹೊಂದಿರುವ ಒಂದು ಸರಳ ಲೋಲಕ ಇದು‌‌. 1851 ರಲ್ಲಿ ಫ್ರೆಂಚ್ ಭೌತವಿಜ್ಞಾನಿಯಾದ  ಜೀನ್ ಬರ್ನಾರ್ಡ್ ಲಿಯೋನ್ ಫ್ಯೂಕೋರು  ಇದನ್ನು ಕಂಡುಹಿಡಿದರು. ‌ಭೂಮಿಯ ಸುತ್ತುವಿಕೆಗೆ ಮೊದಲ ನೇರ ಸಾಕ್ಷಿ ಕೊಟ್ಟದ್ದು ಈ ಲೋಲಕ.

Page 1 of 3

Kannada Sethu. All rights reserved.