ಗ್ಯಾಲಕ್ಸಿ – ಆಕಾಶಗಂಗೆ – ನಕ್ಷತ್ರಗಳು, ಧೂಳು ಮತ್ತು ಅನಿಲಗಳ ಒಂದು ಬೃಹತ್ ಮೊತ್ತವಿದು. ಇವೆಲ್ಲವೂ ತಮ್ಮಲ್ಲಿನ ಪರಸ್ಪರ ಗುರುತ್ವಾಕರ್ಷಣ ಬಲದಿಂದಾಗಿ ಒಟ್ಟಿಗೆ ಇರುತ್ತವೆ.
ಗೈನ್ – ಲಾಭ – ಬಲವರ್ಧಕವೊಂದರಲ್ಲಿ ಒಳಹಾಕುವ ವಿದ್ಯುತ್ತಿಗೂ ಹೊರಬರುವ ವಿದ್ಯುತ್ತಿಗೂ ಇರುವ ಅನುಪಾತ.
ಫ್ಯೂಷನ್ ರಿಯಾಕ್ಟರ್ – ಸಂಯೋಗ ಪರಮಾಣು ಸ್ಥಾವರ – ಬೀಜಕೇಂದ್ರಗಳ ಸಂಯೋಗದಿಂದ ಉಂಟಾಗುವ ಉಷ್ಣತೆ/ಶಕ್ತಿಯನ್ನು ಉತ್ಪಾದಿಸುವ ಉಪಕರಣಗಳು. ಈ ಶಕ್ತಿಯನ್ನು ಬಳಸಿ ವಿದ್ಯುಚ್ಛಕ್ತಿಯನ್ನು ತಯಾರಿಸುತ್ತಾರೆ.
ಪ್ಯೂಷನ್ – ಬೆರೆಯುವಿಕೆ (ಸಂಯೋಗ) – ಎರಡು ಪರಮಾಣು ಬೀಜಕೇಂದ್ರಗಳು ಸಂಯೋಗಗೊಂಡು ಒಂದು ದೊಡ್ಡ ಬೀಜಕೇಂದ್ರವಾಗುವುದು.
ಫ್ಯೂಸಿಬಲ್ ಅಲ್ಲೋಯ್ಸ್ – ಕರಗುವ ಮಿಶ್ರಲೋಹಗಳು – ಕಡಿಮೆ ಉಷ್ಣತೆ ( ಸುಮಾರು ನೂರು ಡಿಗ್ರಿ ಸೆಂಟಿಗ್ರೇಡ್) ಯಲ್ಲಿ ಕರಗುವ ಮಿಶ್ರಲೋಹಗಳು. ಬೆಂಕಿ ಆರಿಸುವ ಕೊಳವೆಗಳು ಮುಂತಾದ ಅನೇಕ ವಸ್ತುಗಳ ತಯಾರಿಕೆಯಲ್ಲಿ ಇವನ್ನು ಉಪಯೋಗಿಸುತ್ತಾರೆ. ಬಿಸ್ಮತ್, ತವರ, ಸೀಸ ಮತ್ತು ಕ್ಯಾಡ್ಮಿಯಂಗಳ ‘ಉತ್ತಮ ಕರಗು ಮಿಶ್ರಣ’ದಿಂದ ಸಾಮಾನ್ಯವಾಗಿ ಇವನ್ನು ತಯಾರಿಸಲಾಗುತ್ತದೆ.
ಫ್ಯೂಸ್ ಎಲೆಕ್ಟ್ರಿಕಲ್ – ವಿದ್ಯುತ್ ತಂತಿತುಂಡು – ಒಂದು ವಿದ್ಯುನ್ಮಂಡಲದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ತು ಹರಿಯುವುದನ್ನು ತಡೆಯುವ ಒಂದು ತುಂಡುತಂತಿ ಇದು. ಇದು, ಕಡಿಮೆ ಕರಗುಬಿಂದುವುಳ್ಳ ವಾಹಕದ ಒಂದು ತಂತಿಯ ತುಂಡು. ತುಂಬ ಹೆಚ್ಚು ವಿದ್ಯುತ್ ಹರಿದಾಗ ಈ ತಂತಿತುಂಡಿನ ತಾಪಮಾನವು ಹೆಚ್ಚುವುದರಿಂದ ಇದು ಕರಗಿ, ವಿದ್ಯುನ್ಮಂಡಲ ಮುರಿಯುತ್ತದೆ.
ಫಂಡಮೆಂಟಲ್ ಫ್ರೀಕ್ವೆನ್ಸಿ – ಮೂಲಭೂತ ಕಂಪನ – ಒಂದು ವಸ್ತುವು ಕಂಪಿಸಬಲ್ಲ ಅತ್ಯಂತ ಸರಳ ರೀತಿ ಇದು. ಈ ಕಂಪನದ ಆವರ್ತನವೇ ಮೂಲಭೂತ ಆವರ್ತನ.
ಫ್ಯೂಸ್ ಅಲಾರ್ಮ್ – ರಕ್ಷಕ ತಂತಿ ಎಚ್ಚರಗಂಟೆ – ರಕ್ಷಕ ತಂತಿಯು ಸುಟ್ಟುಹೋದಾಗ ಶ್ರವ್ಯ ಅಥವಾ ದೃಶ್ಯ ಸಂಕೇತವನ್ನು ಕೊಡುವಂತಹ ವಿದ್ಯುನ್ಮಂಡಲ.