ಭಾಷೆಗಳು ಬೇರೆ ಭಾಷೆಯ, ಸಂಸ್ಕೃತಿಯ ಪದಗಳನ್ನು ತಮ್ಮದಾಗಿಸಿಕೊಳ್ಳುವ ರೀತಿ ತುಂಬ ಕುತೂಹಲ ಹುಟ್ಟಿಸುವಂಥದ್ದು. ನಮ್ಮ ಕನ್ನಡವು ಎರಡು ನಿರ್ದಿಷ್ಟ ಇಂಗ್ಲಿಷ್ ಪದಗಳನ್ನು ತನ್ನದಾಗಿಸಿಕೊಂಡ ಅಥವಾ ಕನ್ನಡದಲ್ಲಿ ಅದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತಿರುವ ಪದಗಳ ಬಗ್ಗೆ ಈಗ ಚರ್ಚಿಸಲಿದ್ದೇನೆ. ಹೊಸ ಪೀಳಿಗೆಯ ಮಕ್ಕಳಿಗೆ, ಆಧುನಿಕ (ಇಂಗ್ಲಿಷ್ ಮಾಧ್ಯಮ ಎಂದು ಅರ್ಥೈಸಿಕೊಳ್ಳಬೇಕು) ಶಾಲೆಗಳಲ್ಲಿ ಶಿಶುವಿಹಾರದಿಂದಲೂ, ‘excuse me , please, sorry, thank you’ ಮುಂತಾದ ‘ಮ್ಯಾಜಿಕ್ ವರ್ಡ್ಸ್’ ಗಳನ್ನು, ಜನರೊಡನೆ ವ್ಯವಹರಿಸುವಾಗ ಬಳಸಬೇಕು, ಅದು ನಾಗರಿಕತೆ, ಸೌಜನ್ಯಗಳ ಸಂಕೇತ’ ಎಂಬ […]
ಫ್ರಾತ್ ಪ್ಲೊಟೇಷನ್ – ನೊರೆಯ ತೇಲುವಿಕೆ – ಬೇಡದಿರುವ ಮಲಿನ ಪದಾರ್ಥಗಳಿಂದ ಲೋಹದ ಅದಿರನ್ನು ಬೇರ್ಪಡಿಸಲು ಕೈಗಾರಿಕೆಗಳಲ್ಲಿ ಬಳಸುವ ಒಂದು ವಿಧಾನ. ಇದರಲ್ಲಿ, ಒಟ್ಟು ಮಿಶ್ರಣವನ್ನು ಪುಡಿ ಮಾಡಿ ನೀರು, ಮತ್ತು, ನೊರೆ ಬರಿಸುವಂತಹ ಒಂದು ವಸ್ತುವನ್ನು ಸೇರಿಸಿ, ಇದರ ಮೂಲಕ ಗಾಳಿಯನ್ನು ನುಗ್ಗಿಸುತ್ತಾರೆ. ಬರುವಂತಹ ನೊರೆಗುಳ್ಳೆಗಳು ಲೋಹದ ಅದಿರಿನ ಕಣಗಳಿಗೆ ಅಂಟಿಕೊಂಡು ಅವುಗಳನ್ನು ಮೇಲೆ ತರುತ್ತವೆ. ಬೇಡದ ಮಲಿನ ಪದಾರ್ಥಗಳು ಕೆಳಗೇ ಉಳಿಯುತ್ತವೆ.
ಫ್ರಿಂಜಸ್ – ಕಪ್ಪು ಬಿಳುಪು ಪಟ್ಟಿಗಳು – ಬೆಳಕಿನಲೆಯ ಹಬ್ಬುವಿಕೆ ಅಥವಾ ಅಡ್ಡ ಹಾಯುವಿಕೆಯಿಂದ ಉಂಟಾದ ಸಮಾನಾಂತರ ಕಪ್ಪು ಬಿಳುಪು ಪಟ್ಟಿಗಳು( ಪಟ್ಟಿಯಂತಹ ಪ್ರದೇಶಗಳು).
ಫ್ರಿಕ್ಷನ್ – ಘರ್ಷಣೆ ( ತಿಕ್ಕಾಟ) – ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳ ಸಂಬಂಧಿತ ( ರಿಲೇಟಿವ್) ಚಲನೆಯನ್ನು ವಿರೋಧಿಸುವ ಬಲ.
ಫ್ರೀಕ್ವೆನ್ಸಿ ಮೀಟರ್ – ಆವರ್ತನ ಮಾಪಕ – ಪರ್ಯಾಯ ವಿದ್ಯುತ್ತಿನ ಆವರ್ತನವನ್ನು ಅಳೆಯುವ ಒಂದು ಉಪಕರಣ.
ಫ್ರೀಕ್ವೆನ್ಸಿ ಡಿವೈಡರ್ – ಆವರ್ತನ ವಿಭಾಜಕ – ತಾನು ಪಡೆಯುತ್ತಿರುವ ಆವರ್ತನದ ನಿಖರ ಉಪಗುಣಕವಾಗಿರುವಂತಹ ಆವರ್ತನವನ್ನು ಕೊಡುವಂತಹ ಒಂದು ವಿದ್ಯುತ್ ಉಪಕರಣ.
ಫ್ರೀಕ್ವೆನ್ಸಿ – ಆವರ್ತನ – ಒಂದು ನಿಯತರೀತಿಯ ಘಟನೆಯ ಪುನರಾವರ್ತನೆಯ ಗತಿಲೆಕ್ಕ. ಸೆಕೆಂಡೊಂದಕ್ಕೆ ಅಲೆ ಅಥವಾ ಇನ್ಯಾವುದಾದರೂ ಆಂದೋಲನ ಅಥವಾ ಕಂಪನಗಳ ಸುತ್ತುಗಳ ಸಂಖ್ಯೆ.
ಫ್ರೆಂಕೆಲ್ ಡಿಫೆಕ್ಟ್ – ಫ್ರೆಂಕೆಲ್ ದೋಷ – ಒಂದು ಹರಳಿನ ರಚನೆಯಲ್ಲಿ ಒಂದು ಪರಮಾಣು ಅಥವಾ ಒಂದು ವಿದ್ಯುದಣು ತನ್ನ ಸಾಮಾನ್ಯ ಸ್ಥಾನದಿಂದ ತೆಗೆದುಹಾಕಲ್ಪಟ್ಟು, ಪರಮಾಣು ಸಾಲು ಮತ್ತು ವಿದ್ಯುದಣುಗಳ ಸಾಲಿನ ಮಧ್ಯೆ ಸ್ಥಿತಗೊಳ್ಳುವಂಥದ್ದು.