Geisser’s tube

ಗೀಸರ್ಸ್ ಟ್ಯೂಬ್ – ಗೀಸರ್ ಕೊಳವೆ – ಪಾದರಸದ ಒತ್ತಡವು 1 ಮಿಲಿಮೀಟರ್ ನಷ್ಟು ಇರುವಂತೆ ತಯಾರಿಸಿದ ಒಂದು ನಿರ್ವಾತ ಕೊಳವೆ‌. ಇದರಲ್ಲಿನ ವಿಸರ್ಜನವು ಹೆಚ್ಚು ಉಜ್ವಲವಾಗಿರಬೇಕೆಂದು ಒಂದು ಕಿರಿದಾದ ಜಾಗದಲ್ಲಿ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಈ ಕೊಳವೆಯನ್ನು ಅನಿಲದ ವರ್ಣಪಟಲಗಳನ್ನು ಅಧ್ಯಯನ ಮಾಡಲಿಕ್ಕೋಸ್ಕರ ಬಳಸುತ್ತಾರೆ.

Geiger counter( Geiger – Muller counter)

ಗೀಗರ್ ಕೌಂಟರ್ ( ಗೀಗರ್ ಮುಲ್ಲರ್ ಕೌಂಟರ್) – ಬಿಡಿಕಣಗಳು ಮತ್ತು ಬೆಳಕು ಕಣಗಳು ( ಫೋಟಾನ್) ಗಳನ್ನು ಲೆಕ್ಕ ಮಾಡುವುದಕ್ಕೋಸ್ಕರ ಅಯಾನೀಕರಿಸುವ ವಿಕಿರಣದ ಪತ್ತೆಯಲ್ಲಿ ಬಳಸುವ ಉಪಕರಣ.

Gate

ಗೇಟ್- ವಿದ್ಯುತ್ ಸಂಕೇತ/ದ್ವಾರ – ವಿದ್ಯುನ್ಮಂಡಲವನ್ನು ಚಾಲೂ ಮಾಡುವ ಒಂದು ವಿದ್ಯುತ್ ಸಂಕೇತ.

Gassing

ಗ್ಯಾಸಿಂಗ್ – ಅನಿಲೋತ್ಪಾದನೆ – ಒಂದು ವಿದ್ಯುತ್ ಕೋಶದ ವಿದ್ಯುತ್ ಪೂರಣವು ಮುಗಿದ ಮೇಲೂ ವಿದ್ಯುತ್ ಪೂರಣವನ್ನು ಮುಂದುವರಿಸಿದಾಗ ಆ ವಿದ್ಯುತ್ ಕೋಶದಿಂದ ಸಣ್ಣ ಸಣ್ಣ ಗುಳ್ಳೆಗಳು ಏಳುವ ಕ್ರಿಯೆ.

Gas turbine

ಗ್ಯಾಸ್ ಟರ್ಬೈನ್ – ಹವೆ ಯಂತ್ರ – ದ್ರವರೂಪೀ ಇಂಧನದ ರಾಸಾಯನಿಕ ಶಕ್ತಿಯು ಯಂತ್ರಚಾಲನಾ ಶಕ್ತಿಯಾಗಿ ಪರಿವರ್ತಿತವಾಗುವ ಒಂದು ಚಾಲಕ ಯಂತ್ರ. ಇದನ್ನು ವಿಮಾನ, ರೈಲು ಹಾಗೂ ಮೋಟಾರು ಕಾರುಗಳಲ್ಲಿ ಬಳಸುತ್ತಾರೆ.

ಕನ್ನಡ ಗಾದೆಮಾತು – ಊರಿಗೆ ಆಳಲ್ಲ, ಮಸಣಕ್ಕೆ ಹೆಣ ಅಲ್ಲ.

ಮನುಷ್ಯನ ಇರವು ಹೇಗಿರಬೇಕು ಅಂದರೆ ಅದರಲ್ಲಿ ಒಂದು ದೃಢತೆ, ಸ್ಥಿರತೆ, ವಿಶ್ವಾಸನೀಯತೆ ಇರಬೇಕು.‌ ಅವುಗಳಿಂದ ಜನರು ಆ ವ್ಯಕ್ತಿಯನ್ನು ಗೌರವಿಸುವಂತೆ ಆಗಬೇಕು. ಇದು ಬಿಟ್ಟು ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಊರಿನವರ ಕಣ್ಣಲ್ಲಿ ಬೆಲೆ ಕಳೆದುಕೊಂಡರೆ, ಅಂತಹ ವ್ಯಕ್ತಿಯ ಬಗ್ಗೆ ಜನರು ಮೇಲ್ಕಂಡ ಗಾದೆಮಾತನ್ನು ಬಳಸಿ ನಿಂದನೆಯ ನುಡಿಗಳನ್ನಾಡುತ್ತಾರೆ – “ಛೆ, ಏನು ಬಾಳು ಅವನದ್ದು! ಊರಿಗೆ ಆಳಲ್ಲ, ಮಸಣಕ್ಕೆ ಹೆಣ ಅಲ್ಲ.‌ ಯಾವುದಕ್ಕೂ ಪ್ರಯೋಜನ ಇಲ್ಲ ಬಿಡಪ್ಪ” ಎನ್ನುತ್ತಾರೆ.‌ ನಾವು ಎಂದಿಗೂ ಜನರ ಬಾಯಿಂದ ಇಂತಹ […]

 “ಅಯ್ಯೋ…. ಅನ್ನ ಮುಳ್ಳಕ್ಕಿ ಆಗ್ಹೋಯ್ತು ಅಮ್ಮ….”

ಈಚೆಗೆ  ಒಂದು ಸಲ ನಮ್ಮನೆಯಲ್ಲಿ ಅನ್ನ ಮಾಡಲಿಕ್ಕಾಗಿ ಕುಕ್ಕರ್ ಇಟ್ಟು ಕೂಗಿಸಿ, ಅದು ಆರಿದ ಮೇಲೆ ಮುಚ್ಚಳ ತೆಗೆದಾಗ ನಡೆದ ಪ್ರಸಂಗ ಇದು‌.‌ ಆಗ ಅಡಿಗೆಮನೆಯಲ್ಲಿ ನಾನು, ಯಲ್ಲಮ್ಮ (ನನ್ನ ಮನೆವಾಳ್ತೆ ಸಹಾಯಕಿ) ಇಬ್ಬರೂ ಇದ್ದೆವು‌. ಕುಕ್ಕರ್ ಮುಚ್ಚಳ ತೆಗೆದು ಅನ್ನ ಸರಿಯಾಗಿದೆಯೇ ಎಂದು ಗಮನಿಸಿದಾಗ ಅದು ಗಟ್ಟಿ ಗಟ್ಟಿಯಾಗಿಯೇ ಇತ್ತು, ಅಕ್ಕಿ ಕಾಳುಗಳು ಅರಳದೆ ಇನ್ನೂ ಬಿರುಸಾಗಿಯೇ ಇದ್ದವು‌. ಬಹುಶಃ ನೀರಿಟ್ಟಿದ್ದು ಕಡಿಮೆ ಆಯಿತೋ ಏನೋ. ಆ ಗಟ್ಟಿ ಗಟ್ಟಿ ಅಗುಳುಗಳನ್ನು ಯಲ್ಲಮ್ಮನೂ ಗಮನಿಸಿ ”ಅಯ್ಯೋ…. […]

Gas thermometer

ಗ್ಯಾಸ್ ಥರ್ಮೋಮೀಟರ್ – ಅನಿಲ ತಾಪಮಾಪಕ – ಒಂದು ರೀತಿಯ ತಾಪಮಾಪಕ – ಇದರಲ್ಲಿ ತಾಪದ ಉತ್ಪನ್ನವಾಕ್ಯ(ಫಂಕ್ಷನ್)ವಾಗಿ ಅನಿಲದ ಗುಣಗಳ ಬದಲಾವಣೆಯನ್ನು ಗಮನಿಸಿ ತಾಪಮಾನದ ಅಳತೆ ಮಾಡಲಾಗುತ್ತದೆ. 

Gas oil

ಗ್ಯಾಸ್ ಆಯಿಲ್ – ಅನಿಲ ಎಣ್ಣಿ ಅಥವಾ ಡೀಸೆಲ್ ಎಣ್ಣೆ – ಕಚ್ಚಾ ಪೆಟ್ರೋಲಿಯಂನಿಂದ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಭಟ್ಟಿ ಇಳಿಸಿ‌ ತೆಗೆದ ನಂತರ ಉಳಿಯುವ ಎಣ್ಣೆ. ಇದನ್ನು ಡೀಸಲ್ ಚಾಲಿತ  ಚಾಲಕಯಂತ್ರಗಳಲ್ಲಿ ಇಂಧನವಾಗಿ ಬಳಸುತ್ತಾರೆ, ಮತ್ತು ಅಶ್ರುವಾಯು ತಯಾರಿಸುವಾಗಿನ ಇಂಗಾಲ ಮಿಶ್ರಣವನ್ನು ಮಾಡುವಲ್ಲಿ ಬಳಸುತ್ತಾರೆ.

Gas maser

ಗ್ಯಾಸ್ ಮೇಸರ್ – ಅನಿಲ‌ ಬಲವರ್ಧಕ – ಮೈಕ್ರೋ ಅಲೆಗಳ ವಿಕಿರಣವು ಅನಿಲದ ಅಣುಗಳೊಂದಿಗೆ ಅಂತರ್ ಕ್ರಿಯೆ ನಡೆಸುವ ಒಂದು ಬಲವರ್ಧಕ.

Page 1 of 3

Kannada Sethu. All rights reserved.