ನಾವು ಕನ್ನಡಿಗರು ನಮ್ಮ ಮಕ್ಕಳಿಗೆ ಹೆಸರಿಡುವ ರೀತಿಯ ಬಗ್ಗೆ ನನಗೆ ತುಂಬ ಕುತೂಹಲ ಇದೆ. ಮನೆದೇವರ ಹಸರು, ಬಾಳಿ ಬದುಕಿದ ಮನೆಹಿರಿಯರ ಹೆಸರು, ತಮ್ಮ ಅಭಿಮಾನ ಗಳಿಸಿದ ರಾಜಕೀಯ ನಾಯಕರ, ಕವಿಗಳ, ಸಿನಿಮಾನಟರ ಹೆಸರು, ಸ್ನೇಹಿತರ ಹೆಸರು, ಅಪ್ಪ ಅಮ್ಮನ ಹೆಸರಿನ ಮೊದಲಕ್ಷರಗಳನ್ನು ಸೇರಿಸಿದ ಹೆಸರು, ಇನ್ನು ಮುಂದೆ ಹೆಣ್ಣುಮಗು ಹುಟ್ಟಬಾರದು ಎಂದು ಬಯಸಿ ಇಟ್ಟಂತಹ ಸಾಕಮ್ಮ ಎಂಬ ಹೆಸರು!!!…..ಈ ನಡುವೆ ಗೂಗಲ್ ನಲ್ಲಿ ನೋಡಿ ಅರ್ಥ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತೂ ಇಟ್ಟ ಚಿತ್ರವಿಚಿತ್ರ ಹೆಸರು…ಒಂದೇ ಎರಡೇ….ನಮ್ಮ […]
ಗ್ಯಾಲ್ವನೋಮೀಟರ್ – ಗ್ಯಾಲ್ವನೋಮೀಟರು ಅಥವಾ ಕಿರುವಿದ್ಯುತ್ ಪತ್ತೆಯಂತ್ರ – ತುಂಬ ಕಡಿಮೆ ಪ್ರಮಾಣದ ವಿದ್ಯುತ್ತನ್ನು ಕಂಡು ಹಿಡಿಯಲು ಬಳಸುವ ಒಂದು ಉಪಕರಣ.
ಗ್ಯಾಲ್ವನೈಝ್ಡ್ ಐರನ್ – ಲೋಹ ಲೇಪಿತ ಕಬ್ಬಿಣ – ತುಕ್ಕು ಹಿಡಿಯದಂತೆ, ಸತುವಿನ ಪದರವೊಂದನ್ನು ಲೇಪಿಸಿರುವ ಕಬ್ಬಿಣ ಅಥವಾ ಉಕ್ಕು.
ಗ್ಯಾಲ್ವಾನಿಕ್ ಸೆಲ್ ಆರ್ ವೋಲ್ಟಾಯಿಕ್ ಸೆಲ್ – ಗ್ಯಾಲ್ವನಿ ವಿದ್ಯುತ್ ಕೋಶ ಅಥವಾ ವೋಲ್ಟಾ ವಿದ್ಯುತ್ ಕೋಶ – ಇದು ಒಂದು ಆದಿಮ ವಿದ್ಯುತ್ ವಿಭಜಕ ಕೋಶ. ಇದರಲ್ಲಿ ಎರಡು ಬೇರೆ ಬೇರೆ ಲೋಹದ ಹಾಳೆಗಳನ್ನು ಒಂದು ವಿದ್ಯುತ್ ವಿಭಜಕ ದ್ರಾವಣದಲ್ಲಿ ಮುಳುಗಿಸಿ ಇಟ್ಟಿರುತ್ತಾರೆ.
ಗೆಲೆಲಿಯನ್ ಟೆಲಿಸ್ಕೋಪ್ – ಗೆಲೆಲಿಯವರ ದೂರದರ್ಶಕ – ನೇರ ಬಿಂಬವನ್ನು ಉಂಟುಮಾಡುವ, ಬೇರೆ ಬೇರೆ ಸಂಗಮದೂರಗಳನ್ನು ಹೊಂದಿರುವ ಎರಡು ಮಸೂರಗಳನ್ನು ಹೊಂದಿರುವ, ಗೆಲಿಲಿಯೋ ಗೆಲಿಲಿ ಎಂಬ ವಿಜ್ಞಾನಿಯು ಕಂಡುಹಿಡಿದಿರುವ ದೂರದರ್ಶಕ ಇದು.
ಗೆಲಿಲಿಯನ್ ಇನ್ವೇರಿಯನ್ಸ್ – ಗೆಲಿಲಿಯವರ ನಿತ್ಯಸತ್ಯ ಸಿದ್ಧಾಂತ - ಒಂದು ಇನ್ನೊಂದಕ್ಕೆ ಸಂಬಂಧಿಸಿದಂತೆ, ಏಕರೂಪವಾದ ವೇಗದಲ್ಲಿ ಚಲಿಸುತ್ತಿರುವ ಎರಡು ವಸ್ತುಗಳ ಮಟ್ಟಿಗಿನ ಭೌತಶಾಸ್ತ್ರದ ನಿಯಮಗಳು ಎಲ್ಲಾ ಪರಾಮರ್ಶನ ವ್ಯವಸ್ಥೆಗಳಲ್ಲೂ ಒಂದೇ ಆಗಿರುತ್ತವೆ, ಬದಲಾಗುವುದಿಲ್ಲ.
Like us!
Follow us!