ಕೆಲವು ವರ್ಷಗಳ ಹಿಂದೆ, ನಮ್ಮ ಬೀದಿಯಲ್ಲಿ ಹೂವಾಡಗಿತ್ತಿಯೊಬ್ಬಳು ದಿನಾಲೂ “ಹೂ ಬೇಕೇ ಹೂವು….” ಎಂದು ಕೂಗುತ್ತಾ ಬರುತ್ತಿದ್ದಳು. ನಾನು ಒಮ್ಮೊಮ್ಮೆ ಅವಳ ಹತ್ತಿರ ಮಲ್ಲಿಗೆ, ಕನಕಾಂಬರ, ಮೊಲ್ಲೆ.. ಹೀಗೆ ಯಾವುದಾದರೂ ಪರಿಮಳಯುತ ಹೂವನ್ನು ಕೊಳ್ಳುತ್ತಿದ್ದೆ. ಪ್ರತಿ ಸಲ ನಾನು ಹೂ ಕೊಂಡಾಗಲೂ ಅವಳು “ಅಮ್ಮಾ…ವರ್ತ್ನೇಗ್ ಹಾಕ್ಸ್ಕೊಳೀ…” ಅನ್ನುತ್ತಿದ್ದಳು. ನಮ್ಮ ಅಕ್ಕಪಕ್ಕದವರು ಮತ್ತು ಈ ಹೂವಾಡಗಿತ್ತಿ ಆಗಾಗ ಈ ‘ವರ್ತ್ನೆ’ ಪದವನ್ನು ಬಳಸುವುದನ್ನು ಕೇಳಿಸಿಕೊಂಡಿದ್ದೆ ನಾನು. ದಿನಾಲೂ ಒಬ್ಬರ ಹತ್ತಿರವೇ ಹೂ ಪಡೆದು ತಿಂಗಳ ಕೊನೆಯಲ್ಲಿ ಅದರ ಹಣದ ಲೆಕ್ಕ ಚುಕ್ತಾ […]