ಕನ್ನಡ ಪಾಠವನ್ನು ಕುರಿತು ಇಂಗ್ಲಿಷ್ ಲಿಪಿಯಲ್ಲಿನ ಕನ್ನಡದಲ್ಲಿ ಹಿಮ್ಮಾಹಿತಿ‌( feed back) ಬರೆದ ವಿದ್ಯಾರ್ಥಿನಿ!

ಶೈಕ್ಷಣಿಕ ವರ್ಷದ ಅಥವಾ ಅರ್ಧವರ್ಷದ ಕೊನೆಯಲ್ಲಿ ನಾವು ಅಧ್ಯಾಪಕರು ನಮ್ಮ‌ ವಿದ್ಯಾರ್ಥಿಗಳಿಂದ ಹಿಮ್ಮಾಹಿತಿ (ಫೀಡ್ ಬ್ಯಾಕ್) ತೆಗೆದುಕೊಳ್ಳುವುದುಂಟು‌. ‘ನಾವು ಮಾಡಿದ ಪಾಠ ಅವರಿಗೆ ಅರ್ಥವಾಗಿದೆಯೇ?, ನಮ್ಮ ಪಾಠದ ರೀತಿಯಲ್ಲಿ ಬದಲಾವಣೆ ಬೇಕೇ?, ಅವರು ನಮ್ಮ ಪಾಠದಿಂದ ಯಾವ ಹೊಸ ಸಂಗತಿಗಳನ್ನು ಕಲಿತರು?’ …. ಈ ಮುಂತಾಗಿ ಅವರಿಂದ ಅಭಿಪ್ರಾಯ, ಅನಿಸಿಕೆಗಳನ್ನು ಒಂದು ಹಾಳೆಯಲ್ಲಿ ಬರೆದುಕೊಡುವಂತೆ ಹೇಳುತ್ತೇವೆ. ಅವರು ಅದರಲ್ಲಿ ‌ತಮ್ಮ  ಹೆಸರು‌ ಬರೆಯುವುದು ಕಡ್ಡಾಯವೇನಲ್ಲ.‌ ಅಂದ ಹಾಗೆ, ಒಳ್ಳೆಯ ಅಭಿಪ್ರಾಯ ‌ಮಾತ್ರವಲ್ಲ, ಪಾಠದ ವಿಷಯದಲ್ಲಿ ಅವರಿಗೆ ಉಂಟಾದ ಅತೃಪ್ತಿ, […]

Geometric average

ಜಿಯೋಮೆಟ್ರಿಕ್ ಆವರೇಜ್ – ಜ್ಯಾಮಿತೀಯ ಸರಾಸರಿ – n ಸಂಖ್ಯೆಗಳ ಒಂದು ಗಣದ ಜ್ಯಾಮಿತೀಯ ಸರಾಸರಿ ಅಂದರೆ ಅವುಗಳ ಗುಣಲಬ್ಧದ n ನೇ ಘಾತ.

Geometrical resolving power

ಜಿಯೋಮೆಟ್ರಿಕಲ್ ರಿಸಾಲ್ವಿಂಗ್ ಪವರ್ – ಜ್ಯಾಮಿತೀಯ ವಿಂಗಡಣಾ ಸಾಮರ್ಥ್ಯ ‌- ಒಂದು ಸೂಕ್ಷ್ಮ ದರ್ಶಕ ಅಥವಾ ದೂರದರ್ಶಕಕ್ಕೆ ಇರುವ ಒಂದು ಸಾಮರ್ಥ್ಯ ಇದು‌ ; ಎರಡು ತುಂಬ ಹತ್ತಿರ ಇರುವ ಬೇರೆ ಬೇರೆ ವಸ್ತುಗಳನ್ನು ಎರಡು ಪ್ರತ್ಯೇಕ ವಸ್ತುಗಳಾಗಿ ತೋರಿಸುವ ಸಾಮರ್ಥ್ಯ.

Geometrical optics

ಜಿಯೋಮೆಟ್ರಿಕಲ್ ಆಪ್ಟಿಕ್ಸ್ – ಜ್ಯಾಮಿತೀಯ ದೃಶ್ಯಬೆಳಕು ವಿಜ್ಞಾನ –  ದೃಶ್ಯಬೆಳಕು ವಿಜ್ಞಾನದ (optics) ಒಂದು ಶಾಖೆ ಇದು‌. ಬೆಳಕು ಸರಳರೇಖೆಯಲ್ಲಿ  ಪ್ರಯಾಣಿಸುತ್ತದೆ ಎಂಬುದನ್ನು ತಳಹದಿ ಊಹೆಯಾಗಿ ಇರಿಸಿಕೊಂಡು ಬೆಳಕಿನ ಕಿರಣದ ಪ್ರತಿಫಲನ ಹಾಗೂ ವಕ್ರೀಭವನಗಳ ನಿಯಂತ್ರಣದ ಕುರಿತು ಚಿಂತನೆ ನಡೆಸುತ್ತದೆ.

Geodesic (line)

ಜಿಯೋಡೆಸಿಕ್ ಲೈನ್ – ಭೂವಿಭಜನಾ (ರೇಖೆ) – ಬಾಗಿರುವ ಒಂದು ಮೇಲ್ಮೈ ಯಲ್ಲಿ ಎರಡು ಬಿಂದುಗಳಿಗಿರುವ ಅತ್ಯಂತ ಕಡಿಮೆ (ಕನಿಷ್ಠ) ಅಂತರ.

Generator 

ಜೆನರೇಟರ್ – ವಿದ್ಯದುತ್ಪಾದಕ – ಯಂತ್ರಚಲನ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ದೊಡ್ಡ ಗಾತ್ರದ ಯಂತ್ರ.

ಕನ್ನಡ ಗಾದೆಮಾತು – ಮರಕ್ಕಿಂತ ಮರ ದೊಡ್ಡದು.

ಪ್ರಕೃತಿಯ ಒಂದು ವಾಸ್ತವ ಸಂಗತಿಯ ಮೂಲಕ ಅಮೂಲ್ಯವಾದ ಜೀವನ ವಿವೇಕವನ್ನು ಮನದಟ್ಟು ಮಾಡಿಸುವ ಗಾದೆಮಾತು ಇದು‌. ಕಾಡಿನಲ್ಲಿ ಒಂದು ಮರವನ್ನು ನಾವು ಎತ್ತರ ಎಂದು ಭಾವಿಸುವಷ್ಟರಲ್ಲಿ ಅದಕ್ಕಿಂತ ಎತ್ತರವಾದ ಇನ್ನೊಂದು ಮರ ಕಾಣಿಸುತ್ತದೆ. ‘ಓಹ್ ಇದೇ ಎಲ್ಲಕ್ಕಿಂತ ಎತ್ತರವಾದ ಮರ’ ಎಂದು ಅಂದುಕೊಳ್ಳುವಷ್ಟರಲ್ಲಿ ಅದಕ್ಕಿಂತ ಇನ್ನಷ್ಟು ಎತ್ತರವಾದ ನಮ್ಮ ಕಣ್ಣಿಗೆ ಬೀಳಬಹುದು. ಹೀಗೆಯೇ  ಜೀವನದಲ್ಲಿ ನಾವೇ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುತ್ತಿರುವಾಗ ನಮಗಿಂತ ಹತ್ತು ಪಟ್ಟು ಹೆಚ್ಚು ಸಾಧನೆ ಮಾಡಿದವರು ಇದ್ದಾರೆ ಎಂದು ಗೊತ್ತಾದಾಗ ನಮ್ಮ […]

 “ಅಮ್ಮಾ….ವರ್ತ್ನೇಗ್ ಹಾಕ್ಸ್ಕೊಳೀ……”

ಕೆಲವು ವರ್ಷಗಳ ಹಿಂದೆ, ನಮ್ಮ ಬೀದಿಯಲ್ಲಿ ಹೂವಾಡಗಿತ್ತಿಯೊಬ್ಬಳು ದಿನಾಲೂ “ಹೂ ಬೇಕೇ ಹೂವು….” ಎಂದು ಕೂಗುತ್ತಾ ಬರುತ್ತಿದ್ದಳು. ನಾನು ಒಮ್ಮೊಮ್ಮೆ ಅವಳ ಹತ್ತಿರ ಮಲ್ಲಿಗೆ, ಕನಕಾಂಬರ, ಮೊಲ್ಲೆ.. ಹೀಗೆ ಯಾವುದಾದರೂ ಪರಿಮಳಯುತ ಹೂವನ್ನು ಕೊಳ್ಳುತ್ತಿದ್ದೆ. ಪ್ರತಿ ಸಲ ನಾನು ಹೂ ಕೊಂಡಾಗಲೂ ಅವಳು “ಅಮ್ಮಾ…ವರ್ತ್ನೇಗ್ ಹಾಕ್ಸ್ಕೊಳೀ…” ಅನ್ನುತ್ತಿದ್ದಳು. ನಮ್ಮ ಅಕ್ಕಪಕ್ಕದವರು ಮತ್ತು ಈ ಹೂವಾಡಗಿತ್ತಿ ಆಗಾಗ ಈ ‘ವರ್ತ್ನೆ’ ಪದವನ್ನು ಬಳಸುವುದನ್ನು ಕೇಳಿಸಿಕೊಂಡಿದ್ದೆ ನಾನು.‌ ದಿನಾಲೂ ಒಬ್ಬರ ಹತ್ತಿರವೇ ಹೂ ಪಡೆದು ತಿಂಗಳ ಕೊನೆಯಲ್ಲಿ ಅದರ ಹಣದ ಲೆಕ್ಕ ಚುಕ್ತಾ […]

Page 3 of 3

Kannada Sethu. All rights reserved.