ಗ್ರೂಪ್ ವೆಲಾಸಿಟಿ – ತಂಡ ವೇಗ ಅಥವಾ ಸಮೂಹ ವೇಗ – ಅಲೆಗಳ ತಂಡ (ಸಮೂಹ) ವೊಂದು ಚಲಿಸುವ ವೇಗ.
ಗ್ರೌಂಡ್ ವೈಯರ್ – ಭೂಸ್ಪರ್ಶ ತಂತಿ – ಒಂದು ವಿದ್ಯುತ್ ಉಪಕರಣ ಹಾಗೂ ಒಂದು ಭೂಸ್ಪರ್ಶಿತ ಉಪಕರಣಗಳನ್ನು ಜೋಡಿಸಲು ಬಳಸುವ ವಾಹಕ ತಂತಿ.
ಗ್ರೌಂಡ್ ವೇವ್ಸ್ – ಭೂಮಿಚಾರಿ ಅಲೆಗಳು – ಪ್ರಸಾರಕ ಹಾಗೂ ಸ್ವೀಕಾರಕಗಳ ಮಧ್ಯೆ ಇದ್ದು, ಭೂಮಿಯ ಮೇಲ್ಮೈಗೆ ಸಮೀಪವಾಗಿ ಪಯಣಿಸುವ ವಿದ್ಯುತ್ಕಾಂತೀಯ ( ರೇಡಿಯೋ) ಅಲೆಗಳು (ಹೋಲಿಕೆ -Sky wave – ಸ್ಕೈ ವೇವ್ – ಆಕಾಶಚಾರಿ ಅಲೆ).
ಗ್ರೌಂಡ್ ಸ್ಟೇಟ್ – ಕನಿಷ್ಠ ಶಕ್ತಿಸ್ಥಿತಿ – ಒಂದು ಪರಮಾಣು, ಅಣು ಅಥವಾ ಇನ್ಯಾವುದಾದರೂ ವ್ಯವಸ್ಥೆಯ ಕನಿಷ್ಠತಮ ಶಕ್ತಿಸ್ಥಿತಿ
ಗ್ರೌಂಡ್ ರಾಡ್ – ಭೂಸ್ಪರ್ಶ ಕಂಬಿ – ಉತ್ತಮವಾದ ಭೂಸ್ಪರ್ಶಕ್ಕಾಗಿ ಚೆನ್ನಾಗಿ ನೆಲದಲ್ಲಿ ನೆಟ್ಟಿರುವ ಒಂದು ವಾಹಕ ಕಂಬಿ.
ಗ್ರೌಂಡ್ ಫಾಲ್ಟ್ – ಭೂಸ್ಪರ್ಶ ದೋಷ – ಒಂದು ವಾಹಕಕ್ಕೆ ಅಚಾನಕ್ಕಾಗಿ ಭೂಸ್ಪರ್ಶ ಉಂಟಾಗುವ ಕ್ರಿಯೆ.
ಗ್ರೌಂಡಿಂಗ್ ಆರ್ ಅರ್ತಿಂಗ್ – ಭೂಸ್ಪರ್ಶ ಮಾಡಿಸುವಿಕೆ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವುದು.
ಗ್ರಿಡ್ ಬಯಾಸ್ – ತಂತಿಜಾಲ ವಿದ್ಯುತ್ ಸಾಮರ್ಥ್ಯ - ಸಾಮಾನ್ಯವಾಗಿ ಋಣಾತ್ಮಕವಾದ, ಏಕಪ್ರಕಾರವಾದ ವಿದ್ಯುತ್ ಅಂತಃಸಾಮರ್ಥ್ಯವನ್ನು ಉಷ್ಣವಿದ್ಯುತ್ ಕವಾಟದ ತಡೆತಂತಿಜಾಲಕ್ಕೆ ನೀಡುವುದು. ಈ ತಂತಿಜಾಲ ವಿದ್ಯುದಂಶವು ಯಾವ ಮೌಲ್ಯ ಹೊಂದಿರುತ್ತದೆಂದರೆ, ಸ್ಥಿರವಾಗಿರದ ವಿದ್ಯುತ್ತನ್ನು ಹಾಯಿಸಿದಾಗಲೂ ಕವಾಟವು ವಿದ್ಯುತ್ತನ್ನು ಕತ್ತರಿಸುವುದೂ ಇಲ್ಲ ಮತ್ತು (ಅಸ್ಥಿರತೆಯನ್ನು) ಪ್ರವಹಿಸಲು ಬಿಡುವುದೂ ಇಲ್ಲ.