ಹಾರ್ಡ್ ಫೆರ್ರೋಮ್ಯಾಗ್ನೆಟಿಕ್ ಮೆಟೀರಿಯಲ್ಸ್ – ಕಠಿಣ ಪ್ರಬಲ ಅಯಸ್ಕಾಂತೀಯ ವಸ್ತುಗಳು – ಬಾಹ್ಯ ಕಾಂತಕ್ಷೇತ್ರವನ್ನು ತೆಗೆದ ನಂತರವೂ ತಮ್ಮ ಅಯಸ್ಕಾಂತತೆಯನ್ನು ಉಳಿಸಿಕೊಳ್ಳುವ ನಿಕ್ಕಲ್ ನಂತಹ ಕೆಲವು ವಸ್ತುಗಳು.
ಹೇಲೋ – ಪ್ರಭಾಮಂಡಲ – ಸೂರ್ಯ ಅಥವಾ ಚಂದ್ರನ ಸುತ್ತ ಕೆಲವು ಸಲ ಕಾಣಸಿಗುವ ಪ್ರಕಾಶಮಾನವಾದ ಹೊಳೆಯುವ ಉಂಗುರ. ಇದಕ್ಕೆ ಕಾರಣವೇನೆಂದರೆ ಭೂಮಿಯ ವಾತಾವರಣದಲ್ಲಿನ ಕಣಗಳು ಆ ಆಕಾಶಕಾಯಗಳ ಬೆಳಕನ್ನು ಹಬ್ಬಿಸುವ ಪ್ರಕ್ರಿಯೆ ( ಡಿಪ್ರ್ಯಾಕ್ಷನ್).
ಹಾಲ್ ಮೊಬಿಲಿಟಿ – ಹಾಲ್ ರ ಚಲನಗುಣ – ಕಾಂತಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರ ಎರಡಕ್ಕೂ ಲಂಬಕೋನದಲ್ಲಿ ಚಲಿಸುವ ವಿದ್ಯುತ್ ಕಣಗಳ ಹರಿವಿನ ಪ್ರಮಾಣ.
ಹಾಲ್ ವಾಕ್ಸ್ ಎಫೆಕ್ಟ್ - ಹಾಲ್ ವಾಕ್ ರ ಪರಿಣಾಮ - ನಿರ್ವಾತದಲ್ಲಿರುವ, ಋಣಾತ್ಮಕವಾಗಿ ವಿದ್ಯುತ್ ಕರಣಗೊಂಡಿರುವ ವಸ್ತುವು ಅತಿನೇರಳೆ ಕಿರಣಗಳಿಗೆ ಇದಿರುಗೊಂಡಾಗ (ತೆರೆದುಕೊಂಡಾಗ) ವಿದ್ಯುದಂಶವನ್ನು ಕಳೆದುಕೊಳ್ಳುತ್ತೆ.
ಹ್ಯಾಲೀಸ್ ಕಾಮೆಟ್ – ಹ್ಯಾಲೀ ಧೂಮಕೇತು – ಹದಿನೆಂಟನೆಯ ಶತಮಾನದಲ್ಲಿ ದ್ದ ಎಡ್ಮಂಡ್ ಹ್ಯಾಲಿ ಎಂಬ, ಇಂಗ್ಲಿಷ್ ಖಗೋಳ ಶಾಸ್ತ್ರಜ್ಞರು 1705 ರಲ್ಲಿ ಕಂಡುಹಿಡಿದ, 76 ವರ್ಷಗಳ ಭ್ರಮಣ ಕಾಲಾವಧಿ ಇರುವ ಒಂದು ಪ್ರಕಾಶಮಾನವಾದ ಧೂಮಕೇತು. 1910 ಮತ್ತು 1986 ರಲ್ಲಿ ಇದು ಬಂದಿತ್ತು. ಗ್ರಹಗಳು ಸೂರ್ಯನ ಸುತ್ತ ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಈ ಧೂಮಕೇತು ಸುತ್ತುತ್ತದೆ.
ಹಾಲ್ ಎಫೆಕ್ಟ್ – ಹಾಲ್ ಪರಿಣಾಮ - ಅಡ್ಡಡ್ಡವಾಗಿರುವ ಬಲವಾದ ಕಾಂತಕ್ಷೇತ್ರ ಇರುವಾಗ ಒಂದು ವಾಹಕ ಅಥವಾ ಅರೆವಾಹಕದಲ್ಲಿ ವಿದ್ಯುತ್ ಕಾಂತೀಯ ಬಲವು ಉತ್ಪತ್ತಿ ಆಗುವುದು. ಇದನ್ನು ಕಂಡುಹಿಡಿದ ವಿಜ್ಞಾನಿ – ಎಡ್ವಿನ್ ಹರ್ಬರ್ಟ್ ಹಾಲ್(1855-1938) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞ.
ಅರ್ಧ ಅಗಲ – ಒಂದು ವರ್ಣಪಟಲ ರೇಖೆಯ ಅಗಲದ ಅರ್ಧ ಅಥವಾ ಕೆಲವು ಸಂದರ್ಭಗಳಲ್ಲಿ, ಅದರ ಪೂರ್ತಿ ಅಗಲವನ್ನು ಅರ್ಧ ಎತ್ತರದಲ್ಲಿ ಅಳೆಯುವಂಥದ್ದು.
ಹಾಫ್ ವೇವ್ ರೆಕ್ಟಿಫೈಯರ್ – ಅರ್ಧ ಅಲೆ ಏಕದಿಶಾಕಾರಕ – ವಿದ್ಯುತ್ತನ್ನು ಒಂದೇ ದಿಕ್ಕಿಗೆ ಹರಿಯುವಂತೆ ಮಾಡುವ ಉಪಕರಣ. ಇದು ವಿದ್ಯುತ್ ಅಲೆಯ ಅರ್ಧಭಾಗವನ್ನು ಮಾತ್ರ ಹರಿಯಲು ಬಿಟ್ಟು ಇನ್ನುಳಿದ ಅರ್ಧ ಭಾಗವನ್ನು ತಡೆಯುತ್ತದೆ.