ನಾವು ವ್ಯವಹಾರ ಪ್ರಪಂಚದಲ್ಲಿ ಬಳಸುವ ಕ್ರಿಶ್ಚಿಯನ್ ಕ್ಯಾಲೆಂಡರ್ ನಲ್ಲಿ ಜನವರಿ ಮೊದಲು ತಿಂಗಳು ತಾನೆ. ಈ ತಿಂಗಳಲ್ಲಿ ಎಲ್ಲರೂ ಹೊಸ ಕ್ಯಾಲೆಂಡರ್ ಕೊಳ್ಳುವುದರಲ್ಲಿ ಉದ್ಯುಕ್ತರಾಗ್ತಾರೆ. ಸರ್ಕಾರ, ವಿವಿಧ ಸಂಸ್ಥೆಗಳು, ವ್ಯಾಪಾರಕೇಂದ್ರಗಳು ತಮ್ಮ ತಮ್ಮ ಕ್ಯಾಲೆಂಡರ್ ಗಳನ್ನು ಮುದ್ರಿಸುತ್ತಾರೆ, ನಾವು ನಮಗೆ ಹೊಂದುವಂಥದನ್ನು ಕೊಂಡು ವರ್ಷವಿಡೀ ಬಳಸುತ್ತೇವೆ. ಸರಿ, ಅನೇಕ ಕನ್ನಡ ಅಧ್ಯಾಪಕರಂತೆ ನನ್ನನ್ನೂ ಕಾಡಿದ ಒಂದು ಪ್ರಶ್ನೆ ಅಂದರೆ ‘ಕ್ಯಾಲೆಂಡರ್ ಗೆ ಕನ್ನಡ ಪದ ಏನು? ‘ ಎಂಬುದು. ನಿಘಂಟಿನಲ್ಲಿ ನೋಡಿದರೆ ಪಂಚಾಂಗ ಎಂಬ ಪದ ಸಿಕ್ಕುತ್ತೆ. […]
ಗೈರೋಸ್ಟ್ಯಾಟ್ ಆರ್ ಗೈರೋಸ್ಟೆಬಿಲೈಝರ್ – ಭ್ರಮಣ ಸಂಸ್ಥಾಪಕ ಅಥವಾ ಸುತ್ತು ಸ್ಥಿತಿಸ್ಥಾಪಕ – ತುಸು ಪರಿವರ್ತನೆ ಮಾಡಲ್ಪಟ್ಟ ಒಂದು ಭ್ರಮಣ ದರ್ಶಕ ಇದು. ಇದರಲ್ಲಿ, ತಿರುಗುತ್ತಿರುವ ಚಕ್ರವನ್ನು ಒಂದು ಗಟ್ಟಿಯಾದ, ಅಲ್ಲಾಡದ ಆವರಣದಲ್ಲಿ ಊರಿರುತ್ತಾರೆ. ಅಕ್ಷವು ಒಂದೇ ಸಮನಾಗಿ ಇದ್ದಲ್ಲೇ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಇದನ್ನು ಬಳಸುತ್ತಾರೆ.
ಗೈರೋಸ್ಕೋಪ್ – ಭ್ರಮಣ ದರ್ಶಕ – ತುಂಬ ವೇಗವಾಗಿ ಸುತ್ತುತ್ತಿರುವ ಚಕ್ರ ಅಥವಾ ಸುತ್ತ ಸುತ್ತುತ್ತಿರುವ ಬೆಳಕಿನ ಪುಂಜವನ್ನು ಹೊಂದಿರುವ ಒಂದು ಉಪಕರಣ. ಒಂದು ವಸ್ತುವು ತಾನು ಇರಬೇಕಾದ ದಿಕ್ಕಿನಿಂದ ಬೇರೆ ಕಡೆಗೆ ಸರಿದದ್ದನ್ನು ಪತ್ತೆ ಹಚ್ಚಲು ಈ ಉಪಕರಣವನ್ನು ಬಳಸುತ್ತಾರೆ.
ಗೈರೋಮ್ಯಾಗ್ನೆಟಿಕ್ ರೇಶ್ಯೋ – ಭ್ರಮಣ ಕಾಂತೀಯ ಅನುಪಾತ – ಒಂದು ಪರಮಾಣು ಅಥವಾ ಬೀಜಕೇಂದ್ರದ ಕಾಂತೀಯ ಸಾಮರ್ಥ್ಯ ಹಾಗೂ ಅದರ ಕೋನೀಯ ದ್ರವ್ಯವೇಗ (ಯಾಂಗುಲಾರ್ ಮೊಮೆಂಟಮ್)ಗಳಿಗಿರುವ ಅನುಪಾತ.
ಗೈರೋಮ್ಯಾಗ್ನೆಟಿಕ್ ಎಫೆಕ್ಟ್ಸ್ – ಭ್ರಮಣ ಕಾಂತೀಯ ಪರಿಣಾಮಗಳು – ಒಂದು ವಸ್ತುವಿನ ಕಾಂತೀಕರಣಕ್ಕೂ ಅದರ ಭ್ರಮಣಕ್ಕೂ (ಸುತ್ತುವಿಕೆಗೂ) ಇರುವ ಸಂಬಂಧದ ಗಮನಿಕೆ.
ಗೈಡೆಡ್ ಮಿಸೈಲ್ – ನಿರ್ದೇಶಿತ ಕ್ಷಿಪಣಿ – ಒಂದೋ ಪೂರ್ವನಿಶ್ಚಿತ ಅಥವಾ ತನ್ನೊಳಗಿನ ಸ್ವಯಂ ಪ್ರತಿಕ್ರಯಿಸುವ ಉಪಕರಣಗಳಿಂದಾಗಿ ಅಥವಾ ರೇಡಿಯೋ (ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ) ಆದೇಶಗಳಿಂದ ತನ್ನ ಗುರಿಯ ಕಡೆಗೆ ನಿರ್ದೇಶಿತಗೊಂಡ ಕ್ಷಿಪಣಿ.