Helium  Neon laser

ಹೀಲಿಯಂ ನಿಯಾನ್ ಲೇಸರ್ – ಹೀಲಿಯಂ ‌ನಿಯಾನ್ ತೀಕ್ಷ್ಣ ಬೆಳಕು‌ – ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು ಬಳಸುವ ಪರಮಾಣೀಯ ತೀಕ್ಷ್ಣ ಬೆಳಕು.

Helix

ಹೆಲಿಕ್ಸ್ – ಸುರುಳಿ – ನೈಸರ್ಗಿಕವಾಗಿ ದೊರೆಯುವ ಅನೇಕ ದೊಡ್ಡ ಗಾತ್ರದ ಅಣುಗಳು, ಉದಾಹರಣೆಗೆ, ಪ್ರೋಟೀನುಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳು ಸುರುಳಿಯಾಕಾರದಲ್ಲಿರುತ್ತವೆ.

Helioscope

ಹೀಲಿಯೋಸ್ಕೋಪ್ – ಸೂರ್ಯದರ್ಶಕ – ಸೂರ್ಯನನ್ನು ಗಮನಿಸಲು ಬಳಸುವ ದೂರದರ್ಶಕ. ಸೂರ್ಯನ ತೀಕ್ಷ್ಣಪ್ರಕಾಶದಿಂದಾಗಿ ಗಮನಿಸುವವರ ಕಣ್ಣುಗಳಿಗೆ ಅಪಾಯವಾಗದಂತೆ ಇದನ್ನು ವಿನ್ಯಾಸ ಮಾಡಿರುತ್ತಾರೆ.

Heliocentric

ಹೀಲಿಯೋಸೆಂಟ್ರಿಕ್ – ಸೂರ್ಯಕೇಂದ್ರಿತ – 

ಅ. ಸೂರ್ಯನನ್ನು ಕೇಂದ್ರವಾಗಿ‌ ಉಳ್ಳಂಥದ್ದು

ಆ. ಸೂರ್ಯನ ಕೇಂದ್ರದಿಂದ ಅಳೆಯಲ್ಪಟ್ಟದ್ದು

Heliocentric

ಹೀಲಿಯೋಮೀಟರ್ – ಸೂರ್ಯಮಾಪಕ‌ – ವಿಶೇಷ ವಿನ್ಯಾಸದಿಂದ ಸಿದ್ಧವಾದ, ಸೀಳಿದ ಮಸೂರವನ್ನು ಹೊಂದಿರುವ ದೂರದರ್ಶಕ. ಇದನ್ನು ಸೂರ್ಯನ ವ್ಯಾಸವನ್ನು ಮತ್ತು ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಾರೆ. 

ಕನ್ನಡ ಗಾದೆಮಾತು – ಕೋಣನ ಮುಂದೆ ಕಿನ್ನರಿ ಬಾರಿಸಿದ್ಹಂಗೆ

ಎಮ್ಮೆ, ಕೋಣಗಳ ಮನಸ್ಸಲ್ಲಿ‌ ಏನಿದೆಯೋ ಹೇಳಬಲ್ಲವರಾರು? ಆದರೆ ನಾವು ಮನುಷ್ಯರು ನಮ್ಮ ಸಹಜೀವಿಗಳ  ಮೊದ್ದುತನಕ್ಕೋ, ಪೆದ್ದುತನಕ್ಕೋ, ಅರಸಿಕತೆಗೋ ಈ‌ ಪ್ರಾಣಿಗಳನ್ನು ರೂಪಕವಾಗಿ ತೆಗೆದುಕೊಂಡು ಪರಸ್ಪರ ಲೇವಡಿ ಮಾಡಿಕೊಳ್ಳುವುದು ಮಾತ್ರ ಕಾಲಾನುಕಾಲದಿಂದಲೂ ತಪ್ಪಿಲ್ಲ. ‘ಕಿನ್ನರಿ ಎಂಬ ವಾದ್ಯವನ್ನು ಕೋಣನ ಮುಂದೆ ನುಡಿಸಿದರೆ/ಬಾರಿಸಿದರೆ ಏನೂ ಪ್ರಯೋಜನ ಇಲ್ಲ, ಅದು ಆ ವಾದ್ಯದ ನಾದ ಮಾಧುರ್ಯವನ್ನು ಕೇಳಿಸಿಕೊಳ್ಳುವುದೂ ಇಲ್ಲ, ಅದಕ್ಕೆ ಸ್ಪಂದಿಸುವುದೂ ಇಲ್ಲ’ – ಈ ಚಿಂತನೆಯಿಂದ ಹೊರಟ ಗಾದೆಮಾತಿದು. ಅಸೂಕ್ಷ್ಮ ಜನರ ಮುಂದೆ, ಅರಸಿಕರ ಮುಂದೆ ಕಲಾಪ್ರಸ್ತುತಿ ಮಾಡುವುದರಿಂದ ಅಥವಾ […]

“ಇಲ್ಲಿ ‘ಕಬ್ಬಿನ ಜ್ಯೂಸ್’ ದೊರೆಯುತ್ತದೆ”  ಯಾಕೆ ಈ ಪದ ಬಳಕೆ!?

ನಾನು ವಾಸಿಸುವ ಬೆಂಗಳೂರು ನಗರದ ಬಡಾವಣೆಯಾದ ಹಂಪಿನಗರದಲ್ಲಿಮೊನ್ನೆ, ಮನೆಸಾಮಾನು ತರಲೆಂದು ಅಂಗಡಿಗೆ ಹೋಗಿದ್ದಾಗ ಒಂದು‌ ಪ್ರಕಟಣಾ ಫಲಕ ನನ್ನ ಕಣ್ಣಿಗೆ ಬಿತ್ತು. “ಇಲ್ಲಿ ಕಬ್ಬಿನ ಜ್ಯೂಸ್ ದೊರೆಯುತ್ತದೆ” ಎಂದು ಸಾರುತ್ತಿದ್ದ ಫಲಕವದು. ನೋಡಿದರೆ ಅದು ಒಂದು ಕಬ್ಬಿನ ಹಾಲಿನ ಅಂಗಡಿಯಾಗಿತ್ತು. ಅಲ್ಲೇ ಪಕ್ಕದಲ್ಲಿ  ಇದ್ದ ಇನ್ನೊಂದು ಫಲಕದಲ್ಲಿ ‘Sugar cane juice available’ ಎಂಬ ಪ್ರಕಟಣೆ ಇತ್ತು‌.‌ ಅಂದರೆ ಇದರ ಅರ್ಥ ನಮ್ಮ ಬೆಂಗಳೂರು ಕನ್ನಡ  ‘ಕಂಗ್ಲಿಷ್’ ಆಗಿಬಿಟ್ಟು ಬಹಳ ದಿನವಾಗಿದೆ ಎಂದು!     ಕಾಲಾಂತರದಿಂದ ನಾವು […]

Helical antenna

ಹೆಲಿಕಲ್ ಆಂಟೆನಾ – ಸುರುಳಿಯಾಕಾರದ ಆಕರ್ಷಣತಂತಿ‌ – ಸುರುಳಿಯಾಕಾರವನ್ನು ಹೊಂದಿರುವ ಒಂದು ಆಕರ್ಷಣ ತಂತಿ.

Heisenberg’s uncertainty principle

ಹೈಸನ್ಬರ್ಗ್ಸ್ ಅನ್ಸರ್ಟೈನಿಟಿ ಪ್ರಿನ್ಸಿಪ್ಲ್ – ಹೈಸನ್ ಬರ್ಗ್ ರ ಅನಿಶ್ಚಿತತಾ ಸಿದ್ಧಾಂತ ‌- ಪರಮಾಣುವಿನೊಳಗಿರುವ ಒಂದು ಕಣದ ಸ್ಥಾನಬಿಂದು ಮತ್ತು ದ್ರವ್ಯವೇಗವನ್ನು ಏಕಕಾಲಕ್ಕೆ ಹಾಗೂ ಕರಾರುವಾಕ್ಕಾಗಿ ಅಳೆಯಲು ಸಾಧ್ಯವೇ ಇಲ್ಲ. ಸರಳವಾಗಿ ಹೇಳಬೇಕೆಂದರೆ ಒಂದು ಕಣದ ಸ್ಥಳ ಮತ್ತು ವೇಗವನ್ನು ಏಕಕಾಲಕ್ಕೆ ಗೊತ್ತುಪಡಿಸಿಕೊಳ್ಳಲು ಸಾಧ್ಯ ಇಲ್ಲ.

Hecto

ಹೆಕ್ಟೊ – ಹೆಕ್ಟೊ – 10 ಎಂಬ ಸಂಖ್ಯೆಯ 2ರ  ಘಾತವನ್ನು ಸೂಚಿಸುವ ಪದ. 

Page 1 of 3

Kannada Sethu. All rights reserved.