ಹೆವಿ ವಾಟರ್ – ತನ್ನಲ್ಲಿ, ಜಲಜನಕದ ಜಾಗದಲ್ಲಿ( ಅಂದರೆ ಅದರ ಬದಲಾಗಿ) ಡ್ಯೂಟೇರಿಯಂ ಅನ್ನು ಹೊಂದಿರುವ ಜಲ ಅಥವಾ ನೀರು. ಪ್ರಕೃತಿ ಸಹಜ ನೀರಿನಲ್ಲಿ ಭಾರಜಲದ ಪ್ರಮಾಣ 1:5000.
ಹೆವಿ ಹೈಡ್ರೋಜನ್ ಆರ್ ಡ್ಯೂಟೇರಿಯಂ – ಭಾರ ಜಲಜನಕ ಅಥವಾ ಡ್ಯೂಟೇರಿಯಂ – ದ್ರವ್ಯರಾಶಿ ಸಂಖ್ಯೆ 2 ಆಗಿರುವ, ಜಲಜನಕದ ಒಂದು ಸಮರೂಪಿ.
ಹೀಟ್ ಪಂಪ್ – ತಾಪ ರೇಚಕ – ಉಷ್ಣತೆಯು ಕಡಿಮೆ ಇರುವ ಪ್ರದೇಶದಿಂದ ಉಷ್ಣತೆಯು ಹೆಚ್ಚು ಇರುವ ಪ್ರದೇಶಕ್ಕೆ ಉಷ್ಣತೆಯನ್ನು ವರ್ಗಾಯಿಸುವ ಉಪಕರಣ. ಉದಾಹರಣೆಗೆ ತಂಪು ಪೆಟ್ಟಿಗೆ (ರೆಫ್ರಿಜಿರೇಟರ್).
ಹೀಟ್ ಎಕ್ಸಚೇಂಜರ್ – ತಾಪ ವಿನಿಮಯಕ – ಒಂದು ದ್ರವದಿಂದ ಮತ್ತೊಂದು ದ್ರವಕ್ಕೆ ತಾಪವನ್ನು ವರ್ಗಾಯಿಸುವ ಉಪಕರಣ. ಇದು ಕೊಳವೆಗಳ ಒಂದು ಸರಣಿಯನ್ನು ಹೊಂದಿರುತ್ತದೆ. ಕಾರಿನ ತಂಪುಕಾರಕ ಯಂತ್ರ (ರೇಡಿಯೇಟರ್) ಇದಕ್ಕೊಂದು ಉದಾಹರಣೆ.
ಹೀಟ್ ಇಂಜಿನ್ – ತಾಪಯಂತ್ರ (ಉಷ್ಣ ಚಲನಾ ಯಂತ್ರ) – ಉಷ್ಣತೆಯನ್ನು ಕಾರ್ಯವಾಗಿ ಪರಿವರ್ತಿಸುವ ಒಂದು ಯಂತ್ರ.
ಹೀಟ್ ಕೆಪ್ಯಾಸಿಟಿ – ಉಷ್ಣತಾ ಸಾಮರ್ಥ್ಯ ಅಥವಾ ತಾಪ ಸಾಮರ್ಥ್ಯ – ಒಂದು ವಸ್ತುವಿನ ತಾಪಮಾನವನ್ನು ಒಂದು ಏಕಘಟಕ ಅಳತೆಗೆ ಏರಿಸಲು ಬೇಕಾಗಿರುವ ಶಕ್ತಿ. ಇದನ್ನು ಸಾಮಾನ್ಯವಾಗಿ ಜೌಲ್ಸ್ ಪರ್ ಕೆಲ್ವಿನ್ ನಲ್ಲಿ ಹೇಳಲಾಗುತ್ತದೆ.
ಹೀಟ್ – ಉಷ್ಣತೆ – ಹೆಚ್ಚು ತಾಪಮಾನವುಳ್ಳ ಪ್ರದೇಶದಿಂದ ಕಡಿಮೆ ತಾಪಮಾನವುಳ್ಳ ಪ್ರದೇಶಕ್ಕೆ ವರ್ಗಾವಣೆಯಾಗುವ ಶಕ್ತಿಯನ್ನು ಸಾಮಾನ್ಯವಾಗಿ ಉಷ್ಣತೆ ಎಂಬ ಹೆಸರಿನಿಂದ ಕರೆಯುತ್ತಾರೆ.
Like us!
Follow us!