Hooke’s law

ಹೂಕ್ಸ್ ಲಾ – ಹೂಕ್ ರ ನಿಯಮ – ಈ ನಿಯಮದ ಪ್ರಕಾರ ಒಂದು ವೇಳೆ ಒಂದು ವಸ್ತುವು ವಿರೂಪಗೊಂಡಿದೆಯೆಂದರೆ, ಅದರಲ್ಲಿ ಉಂಟಾದ ವಿರೂಪ ಅಥವಾ ಪೀಡನೆಯು ಅದರ ಮೇಲೆ ಹಾಕಿದ ಒತ್ತಡಕ್ಕೆ ನೇರ ಅನುಪಾತದಲ್ಲಿರುತ್ತದೆ. ಆದರೆ, ಒಂದು ಮಟ್ಟಕ್ಕಿಂತ ಹೆಚ್ಚಿನ ಒತ್ತಡ ಹಾಕಿದರೆ ಆ ವಸ್ತುವು ಹೂಕ್ ರ ನಿಯಮವನ್ನು ಪಾಲಿಸುವುದಿಲ್ಲ.

Homopolar crystal

ಹೋಮೋಪೋಲಾರ್ ಕ್ರಿಸ್ಟಲ್ – ಏಕಧ್ರುವ ಹರಳು ಅಥವಾ ಏಕಧ್ರುವ ಸ್ಫಟಿಕ) – ಕೇವಲ ಸಹಸಂಯೋಗ ( ಕೋವೇಲೆಂಟ್) ಬಂಧಗಳನ್ನು ಹೊಂದಿರುವ ಒಂದು ಹರಳು ಅಥವಾ ಸ್ಫಟಿಕ.

ಕನ್ನಡ ಗಾದೆಮಾತು – ಧೂಪ ಹಾಕಿದ್ರೆ ಪಾಪ ಹೋದೀತೆ?

ಪ್ರಾಸಬದ್ಧವಾದ ಮತ್ತು ಅರ್ಥಪೂರ್ಣವಾದ ಒಂದು ಕನ್ನಡ ಗಾದೆಮಾತು ಇದು‌. ಜನರು ಸುಳ್ಳು, ಮೋಸ, ಕಳವು, ಪರಪೀಡನೆ, ಜೀವಹಿಂಸೆ ಮುಂತಾದ ಪರಪೀಡನೆಗಳಲ್ಲಿ ತೊಡಗಿ (ಅಂದರೆ ಅನೇಕ ಪಾಪಗಳನ್ನು ಮಾಡಿ), ನಂತರ, ದೇವರ ಪೂಜೆಯನ್ನು ಧೂಪ ದೀಪಗಳೊಂದಿಗೆ ವಿಜೃಂಭಣೆಯಿಂದ ಮಾಡಿಬಿಟ್ಟರೆ, ಅವರು ಮಾಡಿದ ಪಾಪಕಾರ್ಯಗಳು ಮಾಯವಾಗಿಬಿಡುವವೇನು? ಖಂಡಿತ ಇಲ್ಲ. ಹೀಗಾಗಿ ‘ಪಾಪಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಎಷ್ಟು ಧೂಪ ಹಾಕಿ ಪೂಜೆ ಮಾಡಿದರೂ ಈ ಕೆಟ್ಟ ಕೆಲಸಗಳ ಪರಿಣಾಮ ಹೋಗುವುದಿಲ್ಲ’ ಎಂಬುದು ಈ ಗಾದೆಮಾತು ಕಲಿಸುವ ಜೀವನಪಾಠವಾಗಿದೆ.  Kannada […]

ಕುದುರೆ ಕಂಡ್ರೆ ಕಾಲ್ನೋವು, ಕನ್ನಡ ಕಂಡ್ರೆ ಕೈನೋವು?

ಇವತ್ತಿನ ಕನ್ನಡ ಪ್ರಸಂಗವನ್ನು ನಾನು ಬಹಳ ಖುಷಿಯಿಂದೇನೂ ಬರೆಯುತ್ತಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ತರಗತಿಯಲ್ಲಿ ನನಗೆ ಆದ ಆತಂಕಮಯ ಅನುಭವವೊಂದನ್ನು ನಿಮ್ಮೊಂದಿಗೆ ಹಂಚ್ಕೋತಿದ್ದೇನೆ‌. ಬೆಂಗಳೂರಿನ ಮಹಾರಾಣಿ ಕಾಲೇಜಿನ ಬಿ.ಎಸ್ಸಿ. ಪದವಿ ತರಗತಿಗಳಿಗೆ ಕನ್ನಡ ಪಾಠ ಮಾಡುವ ನಾನು, ಈಚೆಗೆ ವಿದ್ಯಾರ್ಥಿನಿಯರಿಗೆ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಕಿರುಪರೀಕ್ಷೆ ಕೊಟ್ಟಿದ್ದೆ. ಆ ಮಕ್ಕಳು ಮೂವತ್ತು ಅಂಕಗಳಿಗಾಗಿ ಒಂದೂಕಾಲು ಗಂಟೆ ಅವಧಿಯ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಅವಧಿಯು  ಮುಗಿಯುತ್ತಾ ಬಂದಂತೆ ಮಕ್ಕಳ ಒಂದು ವರ್ತನೆ ನನ್ನ ಗಮನ ಸೆಳೆಯಿತು; ಅದೇನೆಂದರೆ ಮುಖ […]

Homopolar generator‌( Faraday disc) 

– ಹೋಮೋಪೋಲಾರ್ ಜನರೇಟರ್ ( ಫ್ಯಾರಡೇ ಡಿಸ್ಕ್) 

– ಏಕಧ್ರುವ ವಿದ್ಯುದುತ್ಪಾದಕ ( ಫ್ಯಾರಡೇ ತಟ್ಟೆ) – ಒಂದು ಲೋಹದ ತಟ್ಟೆ ಹಾಗೂ ತನ್ನ ಮೇಲ್ಮೈಗೆ ಲಂಬಕೋನದಲ್ಲಿ ಸುತ್ತುತ್ತಿರುವ ಕಾಂತಕ್ಷೇತ್ರವನ್ನು ಹೊಂದಿರುವಂತಹ,  ‘ನೇರ ವಿದ್ಯುತ್’ ಉತ್ಪಾದಕ ಇದು. ಈ ತಟ್ಟೆಯ ಕೇಂದ್ರ ಮತ್ತು ತುದಿಗಳ ನಡುವೆ ವಿದ್ಯುತ್ ಚಾಲಕ ಶಕ್ತಿಯು ಪ್ರೇರಿತಗೊಳ್ಳುತ್ತದೆ.

Homogeneous reactor

ಹೋಮೋಜೀನಸ್ ರಿಯಾಕ್ಟರ್ – ಸಮಜಾತೀಯ ಅಣುಸ್ಥಾವರ – ಅಣುಸ್ಥಾವರವೊಂದರಲ್ಲಿ ನ್ಯೂಟ್ರಾನುಗಳ ವಿದಳನ ಕಾರ್ಯಕ್ಕಾಗಿ ವಿದಳನ ವಸ್ತು ಮತ್ತು ಮಂದಕಾರಕಗಳನ್ನು ಚೆನ್ನಾಗಿ ಬೆರೆಸಿದ್ದರೆ( ಅಂದರೆ ಸಮಜಾತೀಯ ಮಿಶ್ರಣವಾಗುವಂತೆ) ಅದು ಸಮಜಾತೀಯ ಅಣುಸ್ಥಾವರ ಅನ್ನಿಸಿಕೊಳ್ಳುತ್ತದೆ.

Holography

ಹೋಲೋಗ್ರಫಿ – ಮೂರು ಆಯಾಮಗಳ ಛಾಯಾಚಿತ್ರ ಗ್ರಹಣ – ಲೇಸರ್ ಬೆಳಕು ಹಾಗೂ ಛಾಯಾಚಿತ್ರ ಫಲಕಗಳನ್ನು ಬಳಸಿ ಒಂದು ವಸ್ತುವಿನ ಬಿಂಬವನ್ನು ಮೂರು ಆಯಾಮಗಳಲ್ಲಿ ದಾಖಲಿಸುವುದು ಮತ್ತು ಪ್ರದರ್ಶಿಸುವುದು.‌ ಹಂಗೇರಿಯ ಭೌತಶಾಸ್ತ್ರಜ್ಞರಾದ ಡೆನ್ನಿಸ್ ಗೇಬರ್ ಇದನ್ನು 1948ರಲ್ಲಿ ಕಂಡುಹಿಡಿದರು. ಇವರಿಗೆ ಈ ಸಂಶೋಧನೆಗಾಗಿ 1971ರಲ್ಲಿ ನೊಬೆಲ್ ಪ್ರಶಸ್ತಿ ಬಂತು.

Hologram

ಹೋಲೋಗ್ರಾಂ – (ಮೂರು ಆಯಾಮಗಳ) ಪೂರ್ಣಚಿತ್ರ ದಾಖಲೆ – ಪೂರ್ಣಚಿತ್ರ ಗ್ರಹಣದಲ್ಲಿ ಮೂರು ಆಯಾಮಗಳ ಬಿಂಬವನ್ನು ಪುನರುತ್ಪತ್ತಿ ಮಾಡುವಾಗ ಬಳಸುವ ಒಂದು ಛಾಯಾಚಿತ್ರ ದಾಖಲೆ.

Hole

ಹೋಲ್ – ರಂಧ್ರ – ಒಂದು ಘನವಸ್ತುವಿನ  ಕಿಂಡಿ ಚೌಕಟ್ಟಿನ (ಲ್ಯಾಟಿಸ್) ರಚನೆಯಲ್ಲಿ ಎಲೆಕ್ಟ್ರಾನೊಂದು ಇದ್ದು, ಈಗ ಖಾಲಿಯಾಗಿರುವ ಜಾಗ. ರಂಧ್ರವು ಒಂದು ‘ಸಂಚಾರಿ- ಧನಾತ್ಮಕ – ವಿದ್ಯುದಂಶ-ಒಯ್ಯಕ’ ದಂತೆ ಕೆಲಸ ಮಾಡುತ್ತದೆ.

ಕನ್ನಡ ಗಾದೆಮಾತು – ಹಂಚಿ ಉಂಡರೆ ಹಸಿವಿಲ್ಲ. 

ಮೂರೇ ಪದಗಳಿದ್ದರೂ ಮಾರುದ್ದದ ಪ್ರೀತಿಭಾವ ತುಂಬಿರುವ ಗಾದೆಮಾತು ಇದು. ಸಾಮಾನ್ಯವಾಗಿ ಅವರವರ ಊಟದ ಬುತ್ತಿಯನ್ನು ತರುವ ಎಂಟು-ಹತ್ತು  ಜನ ಒಂದೆಡೆ ಸೇರಿದ್ದಾರೆ  ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬರು ಜಾಸ್ತಿ, ಒಬ್ಬರು ಕಡಿಮೆ ಆಹಾರ ತಂದಿರಬಹುದು‌, ಇನ್ನೊಬ್ಬರು ಅಂದು ಬುತ್ತಿಯನ್ನೇ ತರದಿರಬಹುದು. ಆದರೆ ತಂದಿರುವುದನ್ನು ಅವರು ಎಲ್ಲರೂ ಹಂಚಿಕೊಂಡು ತಿಂದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ! ಹೆಚ್ಚು ಕಡಿಮೆಗಳು ಸೇರಿ ಏನೋ ಒಂದು ಸಮತೋಲನವೂ ಉಂಟಾಗುತ್ತದೆ, ಇದರೊಂದಿಗೆ ಒಟ್ಟಿಗೆ ಊಟ ಮಾಡಿದ/ತಿಂಡಿ ತಿಂದ ಸಂತೋಷವೂ ಇರುತ್ತದೆ ಮತ್ತು ಯಾರೂ ಹಸಿವಿನಿಂದ ನರಳುವುದಿಲ್ಲ. […]

Page 2 of 4

Kannada Sethu. All rights reserved.