Imaginary number

ಇಮ್ಯಾಜಿನರಿ ನಂಬರ್ – ಕಲ್ಪಿತ ಸಂಖ್ಯೆ – -1 ರ ವರ್ಗಮೂಲದ ಗುಣಕವಾಗಿರುವ ಒಂದು‌ ಸಂಖ್ಯೆ‌. ಇದನ್ನು ‘i’ ಯಿಂದ ಸೂಚಿಸಲಾಗುತ್ತದೆ‌.

Image force 

ಇಮೇಜ್ ಫೋರ್ಸ್ – ಪ್ರತಿಬಿಂಬ ಬಲ ಅಥವಾ ಪ್ರತಿ ಬಲ‌ – ಒಂದು ವಿದ್ಯುದಂಶವು ತನ್ನ ಸಮೀಪ ಇರುವ ವಾಹಕಗಳು ಅಥವಾ ಅವಾಹಕಗಳಲ್ಲಿ ಪ್ರಚೋದಿಸುವ ವಿದ್ಯುದಂಶಗಳಿಂದಾಗಿ, ಆ ವಿದ್ಯುದಂಶದ ಮೇಲೆ ಉಂಟಾಗುವ ಅಥವಾ ವರ್ತಿಸುವ ಬಲ.

Image

ಇಮೇಜ್ – ಬಿಂಬ – ಮಸೂರ, ಕನ್ನಡಿ ಅಥವಾ ಇನ್ಯಾವುದಾದರೂ ದೃಶ್ಯಸಂಬಂಧೀ ಉಪಕರಣದಿಂದ ಮೂಡಿಸಿದಂತಹ,  ವಸ್ತುವೊಂದರ ರೂಪ.

Illuminance (Ellumination), symbol ‘E’

ಇಲ್ಯೂಮಿನೆನ್ಸ್ ( ಇಲ್ಯೂಮಿನೇಷನ್), ಸಿಂಬಲ್ ‘E’ – ಪ್ರಕಾಶ, ಸಂಕೇತ ‘E’ – ಕಣ್ಣಿಗೆ ಕಾಣುವ ಬೆಳಕಿನ ರೂಪದಲ್ಲಿರುವ ಶಕ್ತಿ. ಇದನ್ನು lux ಎಂಬ ಮೂಲಮಾನದಿಂದ ಅಳೆಯುತ್ತಾರೆ.

Ignition temperature

ಇಗ್ನಿಷನ್ ಟೆಂಪರೇಚರ್ – ಉರಿ ಹತ್ತುವ ಉಷ್ಣಾಂಶ – ಒಂದು ವಸ್ತುವು ಹತ್ತಿಕೊಂಡು ಉರಿಯಲು ಬೇಕಾದಂತಹ ಉಷ್ಣಾಂಶ.

ಕನ್ನಡ ಗಾದೆಮಾತು‌ – ಆನೆಯಂಥದೂ ಮುಗ್ಗರಿಸ್ತದೆ.

ನಮ್ಮ ಹಿರಿಯರ ಅನುಭವದ ಸಾರ ಈ ಗಾದೆಮಾತು.  ಮನುಷ್ಯರು ತಮ್ಮ ವಯಸ್ಸು, ಸ್ಥಾನಮಾನ, ವಿದ್ಯೆ, ಅಧಿಕಾರ ಇಂತಹ ಸಮೃದ್ಧಿಗಳನ್ನು ನೆಚ್ಚಿಕೊಂಡು, ನೆಮ್ಮಿಕೊಂಡು ತಮ್ಮಿಂದ ಎಂದೂ ಯಾವ ತಪ್ಪೂ ಆಗುವುದಿಲ್ಲ ಎಂದು ಭಾವಿಸಿದರೆ ಅದು ವಿವೇಕದ ನಡೆ ಅಲ್ಲ. ಯಾವಾಗಲೂ ಗಂಭೀರವಾಗಿ ಹೆಜ್ಜೆಹಾಕುವ (ಗಜಗಾಂಭೀರ್ಯ ಎಂಬ ನುಡಿಗಟ್ಟೇ ಇದೆಯಲ್ಲವೆ ಕನ್ನಡದಲ್ಲಿ), ಕಾಡಿನ ಕೀರ್ತಿಕಲಶದಂತಹ, ದೈತ್ಯಗಾತ್ರದ ಪ್ರಾಣಿ ಆನೆಯೂ ಸಹ, ನಡೆಯುವಾಗ ಕೆಲವೊಮ್ಮೆ ಮುಗ್ಗರಿಸಬಹುದು‌.‌ ಹಾಗೆಯೇ ಬಹಳ ವಿವೇಕಿಗಳು, ವಿದ್ವಾಂಸರು ಅನ್ನಿಸಿಕೊಂಡ ಅನುಭವಸ್ಥ ಮನುಷ್ಯರೂ ಸಹ ಕೆಲವು ಸಲ ತಪ್ಪು ಮಾಡುವ ಸಾಧ್ಯತೆ […]

ಹೊಟ್ಟೆಕಿಚ್ಚು ಸರಿ. ‘ಹೊಟ್ಟೆಕಚ್ಚು’ ಅಂದ್ರೆ ಏನು!?

‘ಅಸೂಯೆ’ ಎಂಬ ಪದಕ್ಕೆ ಹೊಟ್ಟೆಕಿಚ್ಚು, ಹೊಟ್ಟೆಯುರಿ, ಮತ್ಸರ( ಇಂಗ್ಲಿಷ್ ನಲ್ಲಿ jealousy) ಎಂಬ ಸಂವಾದಿ ಪದಗಳಿರುವುದು ನಮಗೆ ಗೊತ್ತಲ್ಲವೆ? ಮೊನ್ನೆ ಒಂದು ಪುಸ್ತಕದ ವಿಷಯಕ್ಕಾಗಿ ನನಗೆ ಕರೆ ಮಾಡಿದ್ದ ಲೇಖಕ ಮಿತ್ರ ಹಾಡ್ಲಹಳ್ಳಿ ನಾಗರಾಜ್ ಅವರು ಮಾತಿನ ಮಧ್ಯೆ ‘ಹೊಟ್ಟೆಕಚ್ಚು’ ಎಂಬ ಪದವನ್ನು ಬಳಸಿದರು‌. ಆ ಪದದ ಬಗ್ಗೆ ಕುತೂಹಲ ಹುಟ್ಟಿ ನಾನು ಅದರ ಅರ್ಥ ಕೇಳಿದಾಗ ‘ಹೊಟ್ಟೆಯಲ್ಲಿ ಜಂತುಹುಳು ಮುಂತಾದ ಹುಳುಗಳ ಬಾಧೆಯಿಂದ ಮಕ್ಕಳು ಹೊಟ್ಟೆನೋವಿಂದ ನರಳುತ್ತಾರಲ್ಲ, ಅದನ್ನು ನಮ್ಮ ಕಡೆ ಹೊಟ್ಟೆಕಚ್ಚು ಅಂತಾರೆ’ ಅಂದರು. […]

Ideal gas( Perfect gas)

ಐಡಿಯಲ್ ಗ್ಯಾಸ್ ( ಪರ್ಫೆಕ್ಟ್ ಗ್ಯಾಸ್) – ಆದರ್ಶ ಅನಿಲ ( ಪರಿಪೂರ್ಣ ಅನಿಲ) – ಬಾಯ್ಲ್ ನ ನಿಯಮವನ್ನು ಪಾಲಿಸುವ ಅನಿಲ. ಇದಕ್ಕೆ ತನ್ನ ಪರಿಮಾಣದ ಮೇಲೆ ಯಾವ ಅವಲಂಬನೆಯೂ ಇರದಂತಹ ಆಂತರಿಕ ಶಕ್ತಿ ಇರುತ್ತದೆ.

Ideal crystal

ಐಡಿಯಲ್ ಕ್ರಿಸ್ಟಲ್ – ಆದರ್ಶ ಸ್ಫಟಿಕ ಅಥವಾ ಆದರ್ಶ ಹರಳು – ಪರಿಪೂರ್ಣ ಹಾಗೂ ಅನಂತ ಎಂದು‌ ಪರಿಗಣಿಸಲಾದ ಹರಳು ರಚನೆ.

Iconoscope

ಐಕೋನೋಸ್ಕೋಪ್ – ಸಮಬಿಂಬ ದರ್ಶಕ – ಇದು ಒಂದು ರೀತಿಯ ದೂರದರ್ಶನ ಯಂತ್ರದ ಛಾಯಾಗ್ರಾಹಕ ಕೊಳವೆ‌. ಇದರಲ್ಲಿ ತುಂಬ ಹೆಚ್ಚು ವೇಗವನ್ನು ಹೊಂದಿರುವ ಎಲೆಕ್ಟ್ರಾನು ಕಿರಣಪುಂಜವು ಬೆಳಕಿಗೆ ಸ್ಪಂದಿಸುವ ಚಿತ್ರಸಮೂಹವನ್ನು ಹಾಯ್ದು ಬರುತ್ತದೆ‌‌. ಈ ಚಿತ್ರಸಮೂಹಕ್ಕೆ ವಿದ್ಯುತ್ ಸಂಗ್ರಹ ಮಾಡುವ ಸಾಮರ್ಥ್ಯ ಇರುತ್ತದೆ.

Page 1 of 3

Kannada Sethu. All rights reserved.