ಮೊನ್ನೆ ಹೀಗೇ ತತ್ರಾಪಿ ಮಾತಾಡ್ತಾ (ಅದೂ ಇದೂ, casual ಎಂಬ ಅರ್ಥದಲ್ಲಿ) ನನ್ನ ಚಿಕ್ಕ ಮಗಳು “ಅಮ್ಮ ಸೀ ಶೆಲ್ ಗೆ ಕಪ್ಪೆಚಿಪ್ಪು ಅಂತಾರಲ್ಲ, ಯಾಕೆ? ಕಪ್ಪೆಚಿಪ್ಪಲ್ಲಿ ಕಪ್ಪೆ ಇರಲ್ಲ ಅಲ್ವಾ?” ಅಂತ ಕೇಳಿದಳು. ಅವಳ ಪ್ರಶ್ನೆ ನನ್ನನ್ನ ತುಂಬ ಯೋಚನೆಗೆ ಹಚ್ತು. ಸಮುದ್ರ ದಂಡೆಗೆ ಹೋದವರು ಅಲ್ಲಿ ಬಿದ್ದಿರುವ ವಿವಿಧ ಅಳತೆ, ಬಣ್ಣಗಳ ಚಿಪ್ಪುಗಳನ್ನು ನೋಡಿದಾಗ ಅವನ್ನು ಆರಿಸಿಕೊಳ್ಳುವುದು, ತಮ್ಮ ಸಮುದ್ರ ಪ್ರವಾಸದ ನೆನಪಿಗಾಗಿ ಮನೆಗೆ ತಂದು ಇಟ್ಟುಕೊಳ್ಳುವುದು ಹೀಗೆ ಮಾಡುತ್ತಾರೆ ಅಲ್ಲವೆ? ಇಂಥವನ್ನು ಕನ್ನಡದಲ್ಲಿ […]
ಹಿಪ್ಸೋಮೀಟರ್ – ಕುದಿಬಿಂದು ಮಾಪಕ – ಒಂದು ದ್ರವದ ಕುದಿಬಿಂದುವನ್ನು ಅಳೆಯಲು ಬಳಸುವ ಉಪಕರಣ. ಆವಿಯ ಉಷ್ಣತೆಯಲ್ಲಿ ಉಷ್ಣಮಾಪಕಗಳ ಮೇಲೆ ಗುರುತುಗಳನ್ನು ಮಾಡಲು ಸಹ ಇದನ್ನು ಬಳಸುತ್ತಾರೆ.
ಹೈಪರಾನ್ – ಹೈಪರಾನು – ತುಂಬ ಕಡಿಮೆ ಹೊತ್ತು ಅಸ್ತಿತ್ವದಲ್ಲಿರುವ ಒಂದು ಮೂಲಭೂತ ಕಣ. ಇದು ಬೇರ್ಯಾನುಗಳ ಪಟ್ಟಿಗೆ ಸೇರುತ್ತದೆ ಮತ್ತು ಸೊನ್ನೆಯಲ್ಲದ ವಿಲಕ್ಷಣತೆ (strangeness)ಯನ್ನು ಹೊಂದಿರುತ್ತದೆ.
ಹೈಪರ್ ಮೆಟ್ರೋಪಿಯಾ (ಹೈಪರೋಪಿಯಾ) – ದೂರದೃಷ್ಟಿ ದೋಷ – ಒಂದು ದೃಷ್ಟಿದೋಷ. ಇದರಲ್ಲಿ ಅಕ್ಷಿಪಟಲದ ಮೇಲೆ ಹತ್ತಿರದ ವಸ್ತುಗಳ ಬಿಂಬವು ಸರಿಯಗಿ ಬೀಳದಿರುವುದರಿಂದ ಅವು ಸರಿಯಾಗಿ ಕಾಣುವುದಿಲ್ಲ. ಉಬ್ಬುಮಸೂರ ( ಕಾನ್ವೆಕ್ಸ್ ಲೆನ್ಸ್) ಇರುವ ಕನ್ನಡಕವನ್ನು ಹಾಕಿಕೊಂಡು ಈ ದೋಷವನ್ನು ಸರಿಪಡಿಸಬೇಕು.
ಹೈಪರ್ ಫೈನ್ ಸ್ಟ್ರಕ್ಚರ್ – ಅತಿ ಸೂಕ್ಷ್ಮ ರಚನೆ – ವರ್ಣಪಟಲದ ಗೆರೆ ಅಥವಾ ಪಟ್ಟಿಯಲ್ಲಿ, ಪರಮಾಣುವಿನ ಶಕ್ತಿಮಟ್ಟವನ್ನು ಪರಮಾಣು ಬೀಜಕೇಂದ್ರವು ಪರಿಣಮಿಸಿದಾಗ ಉಂಟಾಗುವ ತುಂಬ ಸೂಕ್ಷ್ಮವಾದ ಗೆರೆಗಳು.
ಹೈಪರ್ ಛಾರ್ಜ್ – ಅತಿ ವಿದ್ಯುದಂಶ – ಬೇರಿಯಾನ್ಸ್ ಎಂಬ ಅಂತರ್ ಪರಮಾಣು ಅಂದರೆ ಪರಮಾಣುವಿನ ಒಳಗಿರುವ ಕಣಗಳ ಒಂದು ಗುಣಲಕ್ಷಣವನ್ನು ಹೇಳಲು ಬಳಸುವ ಪದ ಇದು. ಪರಮಾಣುಗಳ ಒಳಗೆ ಪ್ರಬಲ ಅಂತರ್ ಕ್ರಿಯೆಗಳು ಉಂಟಾಗುವ ಸಂದರ್ಭಗಳಲ್ಲಿ ಕೆಲವು ಸಲ ನಿರೀಕ್ಷಿತ ಒಡೆಯುವಿಕೆಗಳು ನಡೆಯದೆ ವಿಚಿತ್ರ ಪರಿಸ್ಥಿತಿ ನಿರ್ಮಾಣ ಆದಾಗ, ಅದನ್ನು ವಿವರಿಸಲು ಬಳಸುವ ಒಂದು ಪರಿಮಾಣಾತ್ಮಕ ( ಕ್ವಾಂಟೈಜ್ಡ್) ಗುಣಲಕ್ಷಣ. ಅತಿ ವಿದ್ಯುದಂಶವು ದುರ್ಬಲ ಅಂತರ್ ಕ್ರಿಯೆಗಳಲ್ಲಿ ವಿನಿಮಯಗೊಳ್ಳುವುದಿಲ್ಲ.