ಇಂಡಕ್ಷನ್ ಮೋಟಾರ್ – ವಿದ್ಯುತ್ಪ್ರೇರಣಾ ಮೋಟಾರು- ಪರ್ಯಾಯ ವಿದ್ಯುತ್ ನ ವಿದ್ಯುತ್ ಯಂತ್ರ( ಮೋಟಾರು). ಇದರಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿದಂತಹ ಬದಲಾಗುತ್ತಿರುವ ಕಾಂತಕ್ಷೇತ್ರವು, ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಿರುವ ಸುರುಳಿಯಲ್ಲಿ ವಿದ್ಯುತ್ತನ್ನು ಪ್ರೇರಿಸುತ್ತದೆ.
ಇಂಡಕ್ಷನ್ ಹೀಟಿಂಗ್ – ವಿದ್ಯುತ್ ಮೂಲಕ ಕಾಯಿಸುವಿಕೆ – ಬದಲಾಗುತ್ತಿರುವ ವಿದ್ಯುತ್ಕಾಂತೀಯ ಕ್ಷೇತ್ರದಿಂದಾಗಿ ಪ್ರೇರಿಸಲ್ಪಡುವ ವಿದ್ಯುತ್ ಪ್ರವಾಹಗಳಿಂದ ( ಇವನ್ನು ಎಡ್ಡಿ ಕರೆಂಟ್ ಎಂದು ಕರೆಯುತ್ತಾರೆ) ಒಂದು ವಿದ್ಯುತ್ ವಾಹಕವನ್ನು ಕಾಯಿಸುವುದು. ಸಾಮಾನ್ಯವಾಗಿ ಇದು ಶಕ್ತಿನಷ್ಟದ ಸನ್ನಿವೇಶವಾಗಿದ್ದರೂ,
ಕರಗಿಸುವಿಕೆ, ಬೆಸುಗೆ ಹಾಕುವಿಕೆ ಮುಂತಾದವುಗಳನ್ನು ಮಾಡಲು ಇದು ತುಂಬ ಉಪಯುಕ್ತವಾಗಿದೆ.
ಇಂಡಕ್ಷನ್ ಫರ್ನೇಸ್ – ವಿದ್ಯುತ್ಪ್ರೇರಣಾ ಕುಲುಮೆ – ವಿದ್ಯುತ್ ಕಾಂತೀಯ ಪ್ರೇರಣೆಯ ಸಹಾಯದಿಂದ ವಿದ್ಯುಚ್ಛಕ್ತಿಯನ್ನು ತಾಪವಾಗಿ ಪರಿವರ್ತಿಸಲು ಬಳಸುವಂತಹ ಉಪಕರಣ.
ಇಂಡಕ್ಷನ್ ಕಾಯಿಲ್ – ವಿದ್ಯುತ್ ಪ್ರೇರಣಾ ಸುರುಳಿ – ಒಂದು ರೀತಿಯ ಪರಿವರ್ತಕ. ಇದನ್ನು ಕಡಿಮೆ ವಿದ್ಯುತ್ ಸಾಮರ್ಥ್ಯವುಳ್ಳ ಆಕರದಿಂದ ಹೆಚ್ಚಿನ ವಿದ್ಯುತ್ ಸಾಮರ್ಥ್ಯ ವುಳ್ಳ ವಿದ್ಯುತ್ ಚಿಮ್ಮುವಿಕೆ( pulses) ಗಳನ್ನು ಉತ್ಪತ್ತಿ ಮಾಡಲು ಉಪಯೋಗಿಸುತ್ತಾರೆ.
ಇಂಡಕ್ಟೆನ್ಸ್ ಮೀಟರ್ – ವಿದ್ಯುತ್ ಪ್ರೇರಕತಾ ಮಾಪಕ – ಒಂದು ವಿದ್ಯುನ್ಮಂಡಲದ ಸ್ವಯಂಪ್ರೇರಕತೆಯನ್ನು ಅಥವಾ ಜೋಡಿ ಮಾಡಲ್ಪಟ್ಟ ಎರಡು ವಿದ್ಯುನ್ಮಂಡಲಗಳ ಪರಸ್ಪರ ಪ್ರೇರಕತೆಯನ್ನು ಕಂಡು ಹಿಡಿಯಲು ಬಳಸುವ ಒಂದು ವಿದ್ಯುತ್ ಉಪಕರಣ.
ಇಂಡಕ್ಷನ್ – ವಿದ್ಯುತ್ ಪ್ರೇರಣೆ – ಒಂದು ಕಾಂತಕ್ಷೇತ್ರದಿಂದಾಗಿ ಒಂದು ವಸ್ತುವಿನ ಸ್ಥಿತಿಯಲ್ಲಿ ಆದ ಬದಲಾವಣೆ.
ಇಂಡಕ್ಟೆನ್ಸ್ – ವಿದ್ಯುತ್ ಪ್ರೇರಕತೆ – ಒಂದು ವಿದ್ಯುನ್ಮಂಡಲ ಅಥವಾ ಉಪಕರಣ ಭಾಗದ ವಿದ್ಯುತ್ ಪ್ರೇರಿಸುವ ಗುಣ ಇದು. ಇದರಿಂದಾಗಿ, ವಿದ್ಯುನ್ಮಂಡಲದಲ್ಲಿ ಹರಿಯುತ್ತಿರುವ ವಿದ್ಯುತ್ ಬದಲಾದಾಗ ವಿದ್ಯುತ್ ಚಾಲಕ ಶಕ್ತಿಯ ಉತ್ಪಾದನೆಯಾಗುತ್ತದೆ.
ಇಂಡಿಕೇಟರ್ ಡಯಾಗ್ರಮ್ – ಸೂಚಕ ಚಿತ್ರ – ಒಂದು ಚಾಲಕಯಂತ್ರದ ಗುಂಡುಕಂಬ (ಸಿಲಿಂಡರ್)ದೊಳಗಿರುವ ಚಲಿಸುವ ಭಾಗವು( ಪಿಸ್ಟನ್) ರೇಖಿಸಿದ ರೇಖಾಕಾರದ ಚಿತ್ರ. ಈ ಚಿತ್ರವನ್ನು ಚಾಲಕಯಂತ್ರದ ಕಾರ್ಯದಕ್ಷತೆಯನ್ನು ಅಂದಾಜು ಮಾಡಲು ಬಳಸುತ್ತಾರೆ.