ವಸಂತ, ಮೋಹನ, ನವೀನ, ಅರುಣ, ಕಿರಣ, ಪ್ರಜ್ವಲ್ – ಇಂತಹ ಪದಗಳ ವಿಶೇಷತೆ ಬಲ್ಲಿರಾ? ಇದನ್ನು ಗಂಡು ಮಗು ಮತ್ತು ಹೆಣ್ಣುಮಗು ಇಬ್ಬರಿಗೂ ಇಡಬಹುದು. ಬಹುದು ಏನು, ಇಡುತ್ತಾರೆ ಸಹ. ಕೆಲವೊಮ್ಮೆ ಇಂತಹ ಹೆಸರುಗಳು ಗೊಂದಲ ಮಾಡಿಬಿಡುತ್ತವೆ. ಉದಾಹರಣೆಗೆ ‘ಶರುರಾಜ್’ ಎಂಬ ಹೆಸರು. ನಾನು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಒಮ್ಮೆ, ಚುನಾವಣಾ ಕೆಲಸಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಇವರನ್ನು ಪುರುಷ ಎಂದು ಭಾವಿಸಿ ಆಯ್ಕೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಅವರು ಒಬ್ಬ ಮಹಿಳೆ! ಇದೇ ರೀತಿಯಲ್ಲಿ ನಾನು […]
ಇಂಪಲ್ಸ್ ( ಇಂಪಲ್ಸಿವ್ ಫೋರ್ಸ್) – ಹಠಾತ್ತಾದ ಕ್ರಿಯೆ (ಹಠಾತ್ತಾಗಿ ವರ್ತಿಸುವ ಬಲ) – ಢಿಕ್ಕಿ ಹೊಡೆದಾಗ ಆಗುವಂತೆ ತುಂಬ ಕಡಿಮೆ ಕಾಲದಲ್ಲಿ ವರ್ತಿಸುವ ಬಲ.
ಇಂಪೀರಿಯಲ್ ಯೂನಿಟ್ಸ್ – ರಾಜಪ್ರಭುತ್ವದ ಮೂಲಮಾನಗಳು – ಗಜ ( ಯಾರ್ಡ್) ಮತ್ತು ಪೌಂಡ್ ಗಳ ಮೇಲೆ ಆಧಾರಿತವಾದ ಅಳತೆಯ ವ್ಯವಸ್ಥೆ. IPS – ಇಂಚು – ಪೌಂಡ್ – ಸೆಕೆಂಡ್ ವ್ಯವಸ್ಥೆಯು ಈ ರಾಜಪ್ರಭುತ್ವದ ಮೂಲಮಾನಗಳ ಮೇಲೆ ಆಧಾರಿತವಾದ ಅಳತೆ ವ್ಯವಸ್ಥೆಯಾಗಿದೆ.
ಇಂಪೀಡೆನ್ಸ್ ಬ್ರಿಡ್ಜ್ – ಅಡ್ಡಿಯ ಸೇತುವೆ – ವ್ಹೀಟ್ ಸ್ಟೋನ್ ವಿದ್ಯುನ್ಮಂಡಲಕ್ಕೆ ತುಂಬ ಹೋಲಿಕೆ ಇರುವ ಒಂದು ವಿದ್ಯುತ್ ಉಪಕರಣ. ಇದನ್ನು ಅಡ್ಡಿಗಳನ್ನು ತುಲನೆ ಮಾಡಲು ಬಳಸಲಾಗುತ್ತದೆ.
ಇಂಪೀಡೆನ್ಸ್ ( ಸಿಂಬಲ್ Z) – ಅಡ್ಡಿ ( ಸಂಕೇತ Z) – ವಿದ್ಯುನ್ಮಂಡಲವೊಂದು ಪರ್ಯಾಯ ವಿದ್ಯುತ್ ಗೆ ಒಡ್ಡುವ ಪ್ರತಿರೋಧದ ಅಳತೆ.
ಇಮ್ಮರ್ಶನ್ ಆಬ್ಜೆಕ್ಟಿವ್ – ಮುಳುಗಿಸಿಟ್ಟ ಮಸೂರ – ಸೂಕ್ಷ್ಮದರ್ಶಕದಲ್ಲಿ ಇರುವಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಒಂದು ರೀತಿಯ ವಸ್ತುಮಸೂರ ಇದು. ( ವಸ್ತು ಮಸೂರ = ನೋಡುತ್ತಿರುವ ವಸ್ತುವಿಗೆ ಅತ್ಯಂತ ಹತ್ತಿರ ಇರುವ ಮಸೂರ).
ಇಂಪ್ಯಾಕ್ಟ್ ವೆಲಾಸಿಟಿ – ಅಪ್ಪಳಿಸುವ ವೇಗ – ಮುಂದಕ್ಕೆ ಚಿಮ್ಮಿಸಿದಂತಹ ವಸ್ತುವು( ಉದಾಹರಣೆಗೆ ಕ್ಷಿಪಣಿ ) ಅಪ್ಪಳುಸುವ ಕ್ಷಣದಲ್ಲಿ ಹೊಂದಿರುವಂತಹ ದಿಶಾವೇಗ. ಇದನ್ನು ಅಪ್ಪಳಿಸುವ ದಿಕ್ವೇಗ ಎಂದೂ ಕರೆಪದಪ್ರಯೋಗ
ಇಂಪ್ಯಾಕ್ಟ್ ಸ್ಟ್ರೆಸ್ – ಆಘಾತಮೂಲೀ ಒತ್ತಡ – ಏಕಘಟಕ ವಿಸ್ತೀರ್ಣದ ಮೇಲೆ ಇದ್ದಕ್ಕಿದ್ದಂತೆ ಬಿದ್ದ ಹೊರೆಯಿಂದಾಗಿ ಅನುಭವಕ್ಕೆ ಬರುವ ಬಲ.