Integrating meter 

ಇಂಟಿಗ್ರೇಟಿಂಗ್ ಮೀಟರ್ – ಸಂಕಲನ ಮಾಪಕ – ಅಳೆದಂತಹ ಒಂದು‌ ಪರಿಮಾಣವನ್ನು ಕಾಲಕ್ಕೆ ಸಂಬಂಧಿಸಿದ ರೀತಿಯಲ್ಲಿ ಸಂಕಲಿಸುವ ಉಪಕರಣ.

International date line

ಇಂಟರ್ನ್ಯಾಷನಲ್ ಡೇಟ್ ಲೈನ್ – ಅಂತಾರಾಷ್ಟ್ರೀಯ ದಿನಾಂಕ ರೇಖೆ – ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಒಂದು ಕಲ್ಪಿತ ರೇಖೆ. ಇದು ಪೆಸಿಫಿಕ್‌ ಸಾಗರದ ಮೂಲಕ ಚಲಿಸುತ್ತಾ 180 ಡಿಗ್ರಿ ಅಕ್ಷಾಂಶವನ್ನು ಅನುಸರಿಸುತ್ತದೆ. ಒಂದು ದಿನದ ಪ್ರಾರಂಭ ಮತ್ತು ಕೊನೆಯನ್ನು ಗುರುತಿಸಲು ಈ‌ ರೇಖೆಯನ್ನು ಇಟ್ಟುಕೊಳ್ಳಬಹುದೆಂದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾಗಿದೆ.

Interaction

ಇಂಟರ್ಯಾಕ್ಷನ್ – ಅಂತರ್ ಕ್ರಿಯೆ – ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತುಗಳ ಅಥವಾ ವ್ಯವಸ್ಥೆಗಳ ಪರಸ್ಪರ 

 ಪರಿಣಾಮ. ಇದರಲ್ಲಿ ಗುರುತ್ವಾಕರ್ಷಣೆಯ, ವಿದ್ಯುತ್ ಕಾಂತೀಯ, ಪ್ರಬಲ ಹಾಗೂ ದುರ್ಬಲ ಎಂದು ನಾಲ್ಕು ವಿಧಗಳಿರುತ್ತವೆ.

Insulator 

ಇನ್ಸ್ಯುಲೇಟರ್ – ಪ್ರತಿರೋಧಕ – ತುಂಬ ಹೆಚ್ಚು ವಿದ್ಯುತ್ ಪ್ರತಿರೋಧವನ್ನು ಹೊಂದಿರುವ ವಸ್ತು. ಬಹುತೇಕ ಅಲೋಹ ವಸ್ತುಗಳು (ಲೋಹವಲ್ಲದ ವಸ್ತುಗಳು) ಒಳ್ಳೆಯ ವಿದ್ಯುತ್ ನಿರೋಧಕಗಳಾಗಿರುತ್ತವೆ.

Integrated circuit

 ಇಂಟಿಗ್ರೇಟೆಡ್‌ ಸರ್ಕ್ಯೂಟ್ – ಸಂಕಲಿತ ವಿದ್ಯುನ್ಮಂಡಲ – ಅನೇಕ ಬೇರೆ ಬೇರೆ ಅಂಗಗಳು‌ ತನ್ನೊಳಗೆ ಒಂದು ಘಟಕವಾಗುವಂತೆ ಸಂಕಲಿಸಿದ ವಿನ್ಯಾಸ ಇರುವಂತಹ ವಿದ್ಯುನ್ಮಂಡಲ.

ಕನ್ನಡ ಗಾದೆಮಾತು – ನೀಡಿದ ಕೈಗೆ ನೆರವಾಗಬೇಕು. 

ಉತ್ತಮವಾದ ಜೀವನ ಮೌಲ್ಯವೊಂದನ್ಬು ಸರಳವಾಗಿ ಹೇಳುವ ಗಾದೆಮಾತು ಇದು. ನಮಗೆ ಅನ್ನ ನೀಡಿದ ಕೈಯಾಗಲಿ, ಸಹಾಯ ನೀಡಿದ ಕೈಯಾಗಲಿ ಆ ಸಮಯದಲ್ಲಿ ನಮಗೆ ಅಮೂಲ್ಯವಾದ ಉಪಕಾರ ಮಾಡಿರುತ್ತದೆ. ಆ ಕೈ ಅಂದರೆ ಅಂತಹ ಕೊಡುಗೈ ಮನಸ್ಸಿನ ವ್ಯಕ್ತಿಗಳು ಕಷ್ಟದಲ್ಲಿದ್ದಾಗ ಅಥವಾ ನಮ್ಮ ಸಹಾಯವು ಅವರಿಗೆ ಬೇಕಾದ ಪರಿಸ್ಥಿತಿ ಬಂದಾಗ, ನಾವು ಅವಶ್ಯವಾಗಿ ಈ‌ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ, ಅವರಿಗೆ ಅಗತ್ಯವಾಗಿರುವ ಸೇವೆಯನ್ನು ನೀಡಬೇಕು. ಉಪಕಾರ ಸ್ಮರಣೆಯ ಮೌಲ್ಯವನ್ನು ಹೇಳಿಕೊಡುವಂತಹ ಉತ್ತಮ ಗಾದೆಮಾತಿದು. Kannada proverb – Needida kaige […]

 “ಚಾರುಲತ ಅಂದರೆ ಏನಮ್ಮ ಮಗು?”

ಶೈಕ್ಷಣಿಕ ವರ್ಷ ಪ್ರಾರಂಭ ಆದಾಗ ನಾವು ಅಧ್ಯಾಪಕರು ಹೊಸ ಹೊಸ ವಿದ್ಯಾರ್ಥಿಗಳನ್ನು ಭೇಟಿ ಮಾಡ್ತೇವೆ. ಹೊಸ ಹೊಸ ಮುಖಗಳು, ಹೊಸ ಹೊಸ ಹೆಸರುಗಳು, ಹೊಸ ಹೊಸ ಅನುಭವಗಳು.  ಹೀಗೆಯೇ ಮೊನ್ನೆ ಒಂದು ತರಗತಿಯಲ್ಲಿ ಹಾಜರಿ ಹಾಕ್ತಾ ಇದ್ದಾಗ ‘ಚಾರುಲತ’  ಎಂಬ ಹೆಸರನ್ನು ಕರೆದೆ. ಒಬ್ಬಳು ಹುಡುಗಿ ಓಗೊಟ್ಟಳು.‌ ‘ತನ್ನ ಹೆಸರಿನ ಅರ್ಥವು ಈ ಕಿಶೋರಿಗೆ ಗೊತ್ತಿರಬಹುದೇ?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಮೂಡಿ, “ಚಾರುಲತ ಅಂದರೆ ಏನಮ್ಮ ಮಗು?” ಎಂದು  ಅವಳನ್ನು ನಾನು ಕೇಳಿದೆ. ಆ ಪ್ರಶ್ನೆಯನ್ನು […]

Insulator, thermal

ಇನ್ಸ್ಯುಲೇಟರ್, ಥರ್ಮಲ್ – ಪ್ರತಿರೋಧಕ, ಉಷ್ಣತಾ –

ಉಷ್ಣತೆಯನ್ನು ಸರಾಗವಾಗಿ‌ (ಕೂಡಲೇ ಎಂಬಂತೆ) ತಮ್ಮೊಳಗೆ ಮತ್ತು ತಮ್ಮ ಮೂಲಕ ಹರಿಯಲು ಬಿಡದ ವಸ್ತುಗಳು.

Insulation, electrical

ಇನ್ಸ್ಯುಲೇಷನ್, ಎಲೆಕ್ಟ್ರಿಕಲ್ – ಪ್ರತಿರೋಧ, ವಿದ್ಯುತ್ತೀಯ – (ರಕ್ಷಣೆಗಾಗಿ ಅಥವಾ ಮಂಡಲ ಮೊಟಕಾಗದಂತೆ ( ಶಾರ್ಟ್ ಸರ್ಕ್ಯೂಟ್ ಆಗದಂತೆ) ತಡೆಯಲಿಕ್ಕಾಗಿ) ವಿದ್ಯುತ್ ವಾಹಕಗಳಿಗೆ ಹೊದಿಸಲು ಅಥವಾ ಅವುಗಳನ್ನು ಪ್ರತ್ಯೇಕಿಸಲು ಅವಾಹಕ ವಸ್ತುಗಳನ್ನು ಬಳಸುವುದು.

Instantaneous value

ಇನ್ಸ್ಟೆಂಟೇನಿಯಸ್  ವ್ಯಾಲ್ಯೂ – ತಾಕ್ಷಣಿಕ ಮೌಲ್ಯ – ವೇಗೋತ್ಕರ್ಷ, ವಿದ್ಯುತ್, ವಿದ್ಯುತ್ ಬಲ ಮುಂತಾದ ಕ್ಷಣಭಿನ್ನ ಪರಿಮಾಣಕ್ಕೆ ಸಂಬಂಧಿಸಿದಂತೆ ಕಾಲದ ಒಂದು ನಿರ್ದಿಷ್ಟ ಕ್ಷಣದಲ್ಲಿ ಅದರ ಮೌಲ್ಯ.

Page 1 of 3

Kannada Sethu. All rights reserved.