Inline holography

ಇನ್ಲೈನ್ ಹೋಲೋಗ್ರಫಿ –  ಏಕರೇಖೆಯ ಪೂರ್ಣಚಿತ್ರಗ್ರಹಣ – ಒಂದು ಚಿಕ್ಕ ವಸ್ತುವಿನಿಂದ ಚದುರಿಸಲ್ಪಟ್ಟ ಅಥವಾ ಹಬ್ಬಿಸಲ್ಪಟ್ಟ ಅಲೆಗಳೊಂದಿಗೆ ಲೇಸರ್ ಕಿರಣಗಳು ಅಡ್ಡ ಹಾಯ್ದು ಉತ್ಪತ್ತಿಯಾದ ಪೂರ್ಣಚಿತ್ರ.

Infra red stars

ಇನ್ಫ್ರಾರೆಡ್ ಸ್ಟಾರ್ಸ್ – ಅಧೋಕೆಂಪು ನಕ್ಷತ್ರಗಳು – ಅಧೋಕೆಂಪು ವಿಕಿರಣವನ್ನು ತಮ್ಮ ಮುಖ್ಯ ಹೊರಸೂಸುವಿಕೆಯಾಗಿ‌ ಹೊಂದಿರುವ ಆಕಾಶಕಾಯಗಳು. ಧೂಳಿನ ಮೋಡಗಳಿಂದ ಸುತ್ತುವರಿದಿರುವ ನಕ್ಷತ್ರಗಳಿವು ಎನ್ನಲಾಗುತ್ತದೆ.

ಕನ್ನಡ ಗಾದೆಮಾತು – ಕಷ್ಟವಿಲ್ಲದೆ ಇಷ್ಟ ಈಡೇರಲ್ಲ.

ಮನುಷ್ಯನು ಇಷ್ಟಪಟ್ಟ ಸಂಗತಿಗಳು ಅವನಿರುವಲ್ಲಿಗೇ ತಾನಾಗಿ ಬಂದುಬಿಡುವುದಿಲ್ಲ‌.  ಅವಕ್ಕಾಗಿ ನಾವು ಬಹಳ ಪರಿಶ್ರಮ ಪಡಬೇಕಾಗುತ್ತದೆ.‌  ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳ ಗಳಿಕೆ, ಉದ್ಯೋಗದಲ್ಲಿ ಉನ್ನತ ಹಂತ ಪಡೆಯುವಿಕೆ, ಹೆಚ್ಚಿನ ವಿದ್ಯಾರ್ಹತೆ, ಸಮಾಜದಲ್ಲಿ ಗೌರವಾರ್ಹ ಸ್ಥಾನಮಾನ – ಇವೆಲ್ಲಕ್ಕೂ ಛಲ ಬಿಡದ ನಿರಂತರ ಪರಿಶ್ರಮ ಬೇಕು‌.‌ ‘ಇಲ್ಲ, ನನಗೆ ಇಷ್ಟೆಲ್ಲ ಕಷ್ಟ ಪಡಲು ಆಗುವುದಿಲ್ಲ’ ಎನ್ನುವವರಿಗೆ ಯಶಸ್ಸೆಂಬ ದೇವತೆ ಒಲಿಯುವುದಿಲ್ಲ. ಹೀಗಾಗಿ ಈ ಗಾದೆಮಾತು ಒಂದು ವಾಸ್ತವಿಕ ವಿಷಯವನ್ನು ಹಾಗೂ ಯಶಗಳಿಕೆಯ ಬಗೆಗೆ ಒಂದು ಕಿವಿಮಾತನ್ನು ಹೇಳುತ್ತದೆ ಅನ್ನಬಹುದು‌. Kannada […]

ಅರಸು, ಹರಸು….ಅಯ್ಯೋ…. ಅ-ಹ-ಕಾರವೇ‌‌‌‌‌…ನಿನ್ನ ಕಾಟ ಲೇಸು ಲೇಸು!

ಹಿಂದೆಯೂ ಈ ಅಂಕಣದಲ್ಲಿ ಕನ್ನಡ ತರಗತಿಗಳು ಮತ್ತು ಸಾರ್ವಜನಿಕ‌ ಸಭೆಗಳಲ್ಲಿ ಉಂಟಾಗುವ ‘ಅ-ಹ ಕಾರದ ಹಾಹಾಕಾರ’ದ ಬಗ್ಗೆ ನಾನು ಬರೆದಿದ್ದೇನೆ. ನಮ್ಮ ನಾಡಿನ ಕೆಲವು ಭಾಗಗಳಲ್ಲಿ ಈ ಉಚ್ಚಾರ ಸಮಸ್ಯೆ ಎಷ್ಟು ಗಾಢವಾಗಿದೆ ಅಂದರೆ ವರ್ಷವರ್ಷಕ್ಕೂ, ನಮ್ಮ ತರಗತಿಗಳಲ್ಲಿ ಆಗಾಗ ಇದು ತಲೆದೋರುತ್ತಲೇ ಇರುತ್ತದೆ.  ಕಳೆದ ವಾರ ನನ್ನ ಬಿ.ಎಸ್ಸಿ. ಪದವಿಯ ಕನ್ನಡ ಭಾಷಾ ಚಟುವಟಿಕೆಯ ತರಗತಿಯೊಂದರಲ್ಲಿ ‘ನಾನಾರ್ಥಕ ಪದಗಳ’ ಬಗ್ಗೆ ಪಾಠ ಮಾಡುತ್ತಿದ್ದೆ. ಆಗ ‘ಅರಸು’ ಎಂಬ ಒಂದು ಪದ ಕೊಟ್ಟು ಇದಕ್ಕಿರುವ ನಾನಾರ್ಥಗಳನ್ನು ಹೇಳಿ […]

Infrasound

ಇನ್ಫ್ರಾಸೌಂಡ್ – ಅಧೋಶಬ್ಧ – 16 ಹರ್ಟ್ಝ್ ಗಿಂತ ಕಡಿಮೆ ಆವರ್ತನ ಇರುವ ಮಾಧ್ಯಮವೊಂದರಲ್ಲಿನ ಕಂಪನಗಳು. ಇವನ್ನು ಕಿವಿಯು ಒಂದು ನಿರಂತರವಾದ ಶಬ್ಧ ಎಂದು ಗ್ರಹಿಸುವುದಿಲ್ಲ, ಬದಲಾಗಿ ಶಬ್ಧಮಿಡಿತಗಳ ಸರಣಿಯಾಗಿ ಗ್ರಹಿಸುತ್ತದೆ.

Infrared detector 

ಇನ್ಫ್ರಾರೆಡ್ ಡಿಟೆಕ್ಟರ್ – ಅಧೋಕೆಂಪು ಪತ್ತೆಯಂತ್ರ – ಅಧೋಕೆಂಪು ವಿಕಿರಣವನ್ನು ಗಮನಿಸಲು‌ ಮತ್ತು ಅಳೆಯಲು ಬಳಸುವಂತಹ ಒಂದು ಉಷ್ಣ ಉಪಕರಣ.

Infrared radiation

ಇನ್ಫ್ರಾರೆಡ್ ರೇಡಿಯೇಷನ್ – ಅಧೋಕೆಂಪು ವಿಕಿರಣ – ಅಣು ಮಟ್ಟದಲ್ಲಿ ಉಂಟಾಗುವಂತಹ ವಿದ್ಯುದಂಶದ ಚಲನೆಯಿಂದ ಉತ್ಪತ್ತಿಯಾಗುವ ವಿಕಿರಣಗಳಿವು.

Infrared ( IR)

ಇನ್ಫ್ರಾರೆಡ್ ( IR) – ಅಧೋಕೆಂಪು – ಕಣ್ಣಿಗೆ ಕಾಣಿಸುವಂತಹ ವರ್ಣಪಟಲದಲ್ಲಿನ ಕೆಂಪು ಬಣ್ಣದ ಆಚೆಯ ವಿಕಿರಣ. 

Inertial system

ಇನರ್ಷಿಯಲ್ ಸಿಸ್ಟಂ – ಜಡತ್ವ ವ್ಯವಸ್ಥೆ – ಒಂದು ವಸ್ತುವು ಯಾವುದೇ ಬಾಹ್ಯ ಬಲಗಳ ಪರಿಣಾಮದ ಗೋಜಿಲ್ಲದೆ ಸ್ಥಿರವಾದ ದಿಕ್ವೇಗದಲ್ಲಿ ಚಲಿಸುತ್ತಿರುವಂತೆ ನೋಡಲು, ಒಬ್ಬ ವೀಕ್ಷಕನಿಗೆ ಸಾಧ್ಯವಾಗುವ ಒಂದು ನಿರ್ದೇಶಕ ಚೌಕಟ್ಟು.

ಕನ್ನಡ ಗಾದೆ ಮಾತು – ಹಸನ್ಮುಖಿ ಸದಾ ಸುಖಿ‌

ಎರಡೇ ಪದಗಳಿದ್ದರೂ ಎಷ್ಟೆಲ್ಲ ಅರ್ಥ ಇರುವ ಗಾದೆ ಮಾತು ಇದು! ಸದಾ ನಗೆಮೊಗದಿಂದ ಇರುವ ವ್ಯಕ್ತಿಯನ್ನು ಹಸನ್ಮುಖಿ ಎನ್ನುತ್ತಾರೆ. ಇಂತಹ ವ್ಯಕ್ತಿಗೆ ಬದುಕಿನ ಕಷ್ಟ, ಸವಾಲು, ಬೇಸರಗಳ ಕಡಲನ್ನು ದಾಟುವ ಸಂದರ್ಭದಲ್ಲಿ ಮುಗುಳ್ನಗುತ್ತಾ ಇರುವಂತಹ ಸಾಮರ್ಥ್ಯ ಇರುತ್ತದೆ. ಇದು ಅವನಲ್ಲಿ/ಅವಳಲ್ಲಿ ಮಾತ್ರವಲ್ಲ, ತನ್ನ ಬಳಿ ಬರುವ, ತಾನು ಭೇಟಿ ಮಾಡುವ ಪ್ರತಿ ವ್ಯಕ್ತಿಯ ಮನಸ್ಸಿನಲ್ಲೂ ಸಂತೋಷ, ನಿರಾತಂಕ ಭಾವವನ್ನು ಹುಟ್ಟಿಸುತ್ತದೆ. ಬದುಕಿನ ನಿಜ ಗೆಲುವು ಅಂದರೆ ಹಸನ್ಮುಖವೇ. ಇಂತಹ ವ್ಯಕ್ತಿಯು ಸದಾಸುಖಿಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ.  ತನ್ನ […]

Page 2 of 3

Kannada Sethu. All rights reserved.