Kiloton weapon

ಕಿಲೋಟಾನ್ ವೆಪನ್ – ಕಿಲೋಟಾನ್ ಆಯುಧ – ಸಾವಿರ ಟನ್ ‘ಟಿ ಎನ್ ಟಿ'( ಟ್ರೈ ನೈಟ್ರೋ ಟಾಲಿನ್) ಸ್ಫೋಟ ಸಾಮರ್ಥ್ಯವುಳ್ಳ ಒಂದು ಅಣುಶಕ್ತಿ ಆಯುಧ.

Kilowatt hour ( symbol kWh)

ಕಿಲೋವ್ಯಾಟ್ ಅವರ್ ( ಸಿಂಬಲ್ kWh) – ಕಿಲೋವ್ಯಾಟ್ ಅವರ್ ( ಸಂಕಥೆತ kWh) – ವಿದ್ಯುಚ್ಛಕ್ತಿ ಯ ವ್ಯಾಪಾರೀ ಮೂಲಮಾನ. ಇದು 1 ಗಂಟೆಗೆ 1000 ವ್ಯಾಟ್ ಗಳನ್ನು ಬಳಸಿಕೊಳ್ಳುವುದಕ್ಕೆ ಸಮ.

Kerr magneto optic effect

ಕರ್ ಮ್ಯಾಗ್ನೆಟೋ ಆಪ್ಟಿಕ್ ಎಫೆಕ್ಟ್ ‌ – ಕರ್ ಕಾಂತ ದೃಶ್ಯಬೆಳಕು ಪರಿಣಾಮ – ವಿದ್ಯುತ್ ಕಾಂತವೊಂದರ ಉಜ್ಜಿ ಹೊಳಪುಗೊಳಿಸಿದ ಧ್ರುವವೊಂದರ ಮೂಲಕ ಪ್ರತಿಫಲಿತವಾದಾಗ, ತಾನು ಬೀಳುತ್ತಿರುವ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಲಂಬವಾಗಿ ಧ್ರುವೀಕೃತವಾಗುವಂತಹ ಬೆಳಕು‌ ಅಂಡಾಕಾರದಲ್ಲಿ ಧ್ರುವೀಕೃತಗೊಳ್ಳುತ್ತದೆ.

Kerr effect 

ಕರ್ ಎಫೆಕ್ಟ್ – ಕರ್ ಪರಿಣಾಮ – ಒಂದು ಪ್ರಬಲವಾದ ವಿದ್ಯುತ್ ಕ್ಷೇತ್ರದಲ್ಲಿಟ್ಟಾಗ  ಕೆಲವು ಸಮವರ್ತಿ ವಸ್ತುಗಳು ಇಮ್ಮಡಿ ವಕ್ರೀಭವನದ ಪರಿಣಾಮವನ್ನು ಪ್ರದರ್ಶಿಸುತ್ತವೆ.  ಉದಾ:- ಬೆನ್ ಝೀನ್. ಈ ಪರಿಣಾಮವು ವಿದ್ಯುತ್ ಕ್ಷೇತ್ರದ ದ್ವಿಘಾತಕ್ಕೆ ಸಮಾನುಪಾತದಲ್ಲಿರುತ್ತದೆ. ಸ್ಕಾಟ್ಲೆಂಡ್ ನ ಜಾನ್ ಕರ್ ಎಂಬ ವಿಜ್ಞಾನಿಯು ಹತ್ತೊಂಬತ್ತನೆಯ ಶತಮಾನದಲ್ಲಿ ಕಂಡುಹಿಡಿದ ಪರಿಣಾಮ ಇದು.

Kernel

ಕರ್ನೆಲ್ – ಪರಮಾಣು ತಿರುಳು – ತನ್ನ ಎಲ್ಲಾ ಅಂಚಿನೆಲಕ್ಟ್ರಾನುಗಳನ್ನು ಕಳೆದುಕೊಂಡ ಪರಮಾಣುಗಳನ್ನು ಪರಮಾಣು ತಿರುಳು ಎನ್ನುತ್ತಾರೆ‌.

ಕನ್ನಡ ಗಾದೆಮಾತು – ಅಂಬಲಿ‌ ಕುಡಿದರೂ ಇಂಬಾಗಿ ಕುಡಿ‌.

ಅಂಬಲಿ ಎಂಬುದು ರಾಗಿ ಹಸಿಹಿಟ್ಟಿಗೆ      ಒಂದಿಷ್ಟು ನೀರು ಮತ್ತು ತುಸು ಉಪ್ಪು ಹಾಕಿ ಬೇಯಿಸಿದ ಗಂಜಿಯಂತಹ ಸರಳ ಆಹಾರ.‌ ಇದನ್ನು ಸಾಮಾನ್ಯವಾಗಿ ಬಡವರ ಊಟ ಎನ್ನುತ್ತಾರೆ. ಇಂತಹ ಅಂಬಲಿಯನ್ನು ಕುಡಿದರೂ ಇಂಬಾಗಿ ಅಂದರೆ ಖುಷಿ, ಪ್ರೀತಿ, ಸಂತೋಷದಿಂದ ಕುಡಿಯಬೇಕು ಎಂದು ಮೇಲಿನ ಗಾದೆಮಾತು ಹೇಳುತ್ತದೆ. ಜೀವನದಲ್ಲಿ ಪ್ರೀತಿ, ನೆಮ್ಮದಿ ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ಹೇಳುವ ಜಾಣ್ಣುಡಿ ಇದು.‌ ಮೃಷ್ಟಾನ್ನ ಭೋಜನವನ್ನು ಅಸಂತೋಷದಿಂದ, ಹಂಗಿನಲ್ಲಿದ್ದೇನೆ ಎಂಬ ಭಾವದಿಂದ, ಚಿಂತೆಯೇ ಮಂತಾದ ಕಾರ್ಮೋಡಗಳು ಮನಸ್ಸನ್ನು ಕವಿದ […]

ಕನ್ನಡ ಪದಗಳ ಲೋಕದಲ್ಲಿ ಇನ್ನೊಂದು ಸುತ್ತು….’ಇಂಡೆಂಟ್’ ಗೆ ಕನ್ನಡ ಪದ ಹುಡುಕಿದ್ದು.

ನಮ್ಮ ವಿಶ್ವವಿದ್ಯಾಲಯ ( ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ) ಅಥವಾ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಮಯದಲ್ಲಿ, ವಿವಿಧ ಅಧ್ಯಯನ ವಿಭಾಗಗಳಿಂದ ಪಡೆಯಲಾಗುವ ಬಹಳ ಮುಖ್ಯವಾದ ಒಂದು ಮಾಹಿತಿ ಅಂದರೆ  “ನಿಮ್ಮ ವಿಭಾಗಕ್ಕೆ ಎಷ್ಟು ಪ್ರಶ್ನೆಪತ್ರಿಕೆಗಳ ಅಗತ್ಯ ಇದೆ?” ಎಂಬುದು‌. ಇದನ್ನು ಇಂಗ್ಲಿಷ್ ನಲ್ಲಿ indent ಎನ್ನುತ್ತಾರೆ. ಈ ‘ಇಂಡೆಂಟ್’ ಎಂಬ ಪದವನ್ನು ಸಾಮಾನ್ಯವಾಗಿ ಹಾಗೆಯೇ ಬಳಸಿಬಿಡುತ್ತಾರೆ, ಇದಕ್ಕೆ  ಕನ್ನಡ ಪದವನ್ನು ಬಳಸಲೇಬೇಕೆಂಬ ತುಡಿತ ಕಛೇರಿಗಳಲ್ಲಿ ಕಾಣುವುದಿಲ್ಲ. ನನ್ನ ಮನಸ್ಸಿಗೋ ಯಾವುದಾದರೊಂದು ಸಾಮಾನ್ಯ ಬಳಕೆಯ ಇಂಗ್ಲಿಷ್ […]

Kenotron

ಕೆನೋಟ್ರಾನ್ – ಕೆನೋಟ್ರಾನು – ಹೆಚ್ಚಿನ ನಿರ್ವಾತವುಳ್ಳ ಒಂದು ದ್ವಿದ್ವಾರ. ಇದನ್ನು ಪ್ರಬಲ ಪರಿವರ್ತಕವಾಗಿ ಕೆಲಸ ಮಾಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.‌

Keplarian telescope

ಕೆಪ್ಲೇರಿಯನ್ ಟೆಲಿಸ್ಕೋಪ್ – ಕೆಪ್ಲರ್ ದೂರದರ್ಶಕ‌ – ಅತ್ಯಂತ ಸರ್ವೇಸಾಮಾನ್ಯವಾದ ವಕ್ರೀಭವನ ದೂರದರ್ಶಕ ಇದು( ಎರಡು ಮಸೂರಗಳನ್ನು ಹೊಂದಿರುತ್ತದೆ).

Kelvin statement ( Second law of thermodynamics)

ಕೆಲ್ವಿನ್ ಸ್ಟೇಟ್ ಮೆಂಟ್( ಸೆಕೆಂಡ್ ಲಾ ಆಫ್ ಥರ್ಮೋಡೈನಮಿಕ್ಸ್) –

ಕೆಲ್ವಿನ್ ರ ಹೇಳಿಕೆ –  ( ಉಷ್ಣಚಲನಾ ಶಾಸ್ತ್ರದ ಎರಡನೆಯ ನಿಯಮ) – ಶುದ್ಧಾಂಗ ಪರಿಪೂರ್ಣವಾದ ಒಂದು ತಾಪಯಂತ್ರವನ್ನು ನಿರ್ಮಿಸಲು ಸಾಧ್ಯವಿಲ್ಲ( ಉಷ್ಣತೆಯ ನಷ್ಟವು ಇದಕ್ಕೆ ಕಾರಣ).

Page 1 of 3

Kannada Sethu. All rights reserved.