Kelvin effect

ಕೆಲ್ವಿನ್ ಎಫೆಕ್ಟ್ – ಕೆಲ್ವಿನ್ ಪರಿಣಾಮ – ಒಂದು ವಾಹಕದ ತಂತಿಯುದ್ದಕ್ಕೂ ಇರುವಂತಹ ತಾಪಮಾನದ ಏರಿಳಿತ ಶ್ರೇಣಿಯು ಆ ತಂತಿಯುದ್ದಕ್ಕೂ ವಿದ್ಯುತ್ ಸಾಮರ್ಥ್ಯದ ಏರಿಳಿತ ಶ್ರೇಣಿಯನ್ನುಂಟುಮಾಡುತ್ತದೆ‌.

Kelvin balance

ಕೆಲ್ವಿನ್ ಬ್ಯಾಲೆನ್ಸ್ – ಕೆಲ್ವಿನ್ ತ್ರಾಸ – ವಿದ್ಯುತ್ ಚಲನಾ ಅಮ್ಮೀಟರ್, ವೋಲ್ಟ್ ಮೀಟರ್ ಅಥವಾ ವ್ಯಾಟ್ ಮೀಟರ್. ಇದರಲ್ಲಿ ವಿದ್ಯುತ್ ಕಾಂತೀಯ ಬಲಗಳು ಚಲಿಸುತ್ತಿರುವ ಭಾರದಿಂದಾಗಿ ಗುರುತ್ವಕ್ಕೆ ಸಂಬಂಧಿಸಿದಂತೆ ಸಮತೋಲನಗೊಳಿಸಲ್ಪಡುತ್ತವೆ.

ಕನ್ನಡ ಗಾದೆಮಾತು – ಮೂರ್ಕಾಸಿನ ಗಳಿಕೆ, ಆರ್ಕಾಸಿನ‌ ಬಳಕೆ.

ನಾವು ನಮ್ಮ ಹಣಕಾಸನ್ನು ಬಳಸುವ ವಿಷಯದಲ್ಲಿ ನಮಗೆ ಎಚ್ಚರಿಕೆ ನೀಡುವ ಒಂದು ಗಾದೆ ಮಾತು ಇದು. ಯಾವಾಗಲೂ ನಾವು ಗಳಿಸಿದ ಹಣಕ್ಕಿಂತ ಬಳಸುವ ಹಣ ಹೆಚ್ಚಾಗಬಾರದು. ಮೂರು ಕಾಸನ್ನು ಗಳಿಸಿ‌ ಆರುಕಾಸನ್ನು ಬಳಸಿದರೆ ನಾವು ಸಾಲದ ಶೂಲಕ್ಕೆ ಅಥವಾ ಅತೃಪ್ತಿ – ಆತಂಕಗಳ ಕೂಪಕ್ಕೆ ಬೀಳಬೇಕಾಗುತ್ತದೆ. ಅಂದರೆ, ನಾವು ಗಳಿಸಿದ ಹಣಕ್ಕಿಂತ ಹೆಚ್ಚು ಹಣವನ್ನು ಎಂದೂ ಬಳಸಬಾರದು ಎಂಬ ವಿವೇಕವನ್ನು ಈ ಗಾದೆಮಾತು ನಾಲ್ಕೇ ಪದಗಳಲ್ಲಿ ಹೇಳುತ್ತದೆ. ‘ಸ್ಪೆಂಡ್ ಬಿಲೋ ಯುವರ್ ಮೀನ್ಸ್ (ನೀವು ಬಳಸಬಹುದಾದದ್ದಕ್ಕಿಂತ ಕಡಿಮೆ […]

ಬೋಂಬೆ ಮಿಠಾಯಿ, ಬೊಂಬಾಯ್ ಬೋಂಡ, ಬೋಂಬೆ ರವೆ, ಬೋಂಬೆ ಬಝಾರ್, ಬಾಯಿ ಬೊಂಬಾಯಿ ……….. ಕನ್ನಡಿಗರ  ‘ಬೋಂಬೆ’ ಪೂರ್ವಪದವನ್ನು ಕುರಿತ ಪ್ರೀತಿ

ನಾನು ಈ ಬರಹದ ಶೀರ್ಷಿಕೆಯಲ್ಲಿ ಬಳಸಿರುವ ಪದಗಳನ್ನು ಕನ್ನಡ ನಾಡಿನಲ್ಲಿ ಬಹಳ ಸಲ ಕೇಳುತ್ತೇವೆ, ಅಲ್ಲವೆ? ಬೋಂಬೆ ಹಲ್ವಾ, ಬೋಂಬೆ ರವಾ, ಬೋಂಬೆ ಮಿಠಾಯಿ, ಬೋಂಬೆ ಟಾಕೀಸ್,  ಬೊಂಬಾಯ್ ಮಾಮ……ಕನ್ನಡ ಭಾಷೆಯಲ್ಲಿ ಎಷ್ಟೆಲ್ಲ ಪದಗಳು ಈ ಬೋಂಬೆ ಪದದಿಂದ ಪ್ರಾರಂಭವಾಗುತ್ತವೆ ಎಂದರೆ ಅಚ್ಚರಿಯಾಗುತ್ತದೆ! ಇದಕ್ಕೆ ಕಾರಣ ಏನಿರಬಹುದು ಎಂದು ಒಂದಿಷ್ಟು ವಿಚಾರಿಸಿ, ಓದಿ ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬಂದವು.  1.ಕನ್ನಡ ನಾಡಿನ ಏಕೀಕರಣಕ್ಕೆ ಮುಂಚೆ ಧಾರವಾಡ, ಬೆಳಗಾವಿ, ಬಿಜಾಪುರ ಮೊದಲಾದ ಪ್ರದೇಶಗಳು ಬ್ರಿಟಿಷ್ ಭಾರತದ ಬೋಂಬೆ […]

Kelvin, symbol K

ಕೆಲ್ವಿನ್, ಸಿಂಬಲ್ K – ಕೆಲ್ವಿನ್, ಸಂಕೇತ K – ಉಷ್ಣಚಲನೆಯ ತಾಪಮಾನದ ಎಸ್.ಐ. ಮೂಲಮಾನ ಇದು. ನೀರಿನ ತ್ರಿಬಿಂದು*ವಿನ 273.16 ರಲ್ಲಿ ಒಂದು ಭಾಗಕ್ಕೆ ಸಮ ಇದು‌. ಲಾರ್ಡ್ ಕೆಲ್ವಿನ್ ಎಂಬ ಬ್ರಿಟಿಷ್ ಗಣಿತಜ್ಞರ ನೆನಪಿನಲ್ಲಿ ‌ಇಟ್ಟ ಹೆಸರು. 

*ನೀರಿನ ತ್ರಿಬಿಂದು = ನೀರಿನ ಘನ, ದ್ರವ ಹಾಗೂ ಅನಿಲ ಸ್ಥಿತಿಗಳು ಸಮತೋಲನದಲ್ಲಿರುವಂತಹ ಒಂದು ಬಿಂದು.

K – electron

ಕೆ – ಎಲೆಕ್ಟ್ರಾನ್ : ಕೆ.ಎಲೆಕ್ಟ್ರಾನು – ಪರಮಾಣುವಿನ ಬೀಜಕೇಂದ್ರಕ್ಕೆ ಅತ್ಯಂತ ಹತ್ತಿರವುಳ್ಳ ಸುತ್ತುಪಥ( ಕಕ್ಷೆ) ಯಲ್ಲಿರುವ ಎರಡು ಎಲೆಕ್ಟ್ರಾನುಗಳಲ್ಲಿ ಒಂದು.

Keeper

ಕೀಪರ್ – ಕಾಂತರಕ್ಷಕ‌ – ಶಾಶ್ವತ ಅಯಸ್ಕಾಂತವೊಂದನ್ನು ಬಳಸದೆ ಇಟ್ಟಿದ್ದಾಗ ಅದರ ಧ್ರುವಗಳನ್ನು ಬೆಸೆಯಲು ಬಳಸುವಂತಹ ಮೃದುಕಬ್ಬಿಣದ ಒಂದು ತುಂಡು. ಇದು ಕಾಂತಶಕ್ತಿಯ ಸೋರುವಿಕೆಯನ್ನು ತಡೆಯುವುದರ ಮೂಲಕ ಅಯಸ್ಕಾಂತೀಕರಣವನ್ನು ರಕ್ಷಿಸಿಟ್ಟಿರುತ್ತದೆ. 

Kayser

ಕೇಸರ್ – ಅಲೆಯ ಸಂಖ್ಯೆಯ ಮೂಲಮಾನವಾಗಿ ಸ್ವೀಕೃತವಾದ ಒಂದು ಹೆಸರು. ಒಂದು ಸೆಂಟಿಮೀಟರ್ ನಲ್ಲಿ ಇರುವಂತಹ ಅಲೆಗಳ ಸಂಖ್ಯೆ ಇದು‌.

Katharometer

ಕ್ಯಾಥರೋಮೀಟರ್ -ಉಷ್ಣವಾಹಕತಾ ಮಾಪಕ – ಎರಡು ಅನಿಲಗಳ ಉಷ್ಣವಾಹಕತೆಗಳನ್ನು ಆ ಅನಿಲಗಳು ಸುತ್ತುವರಿದಿರುವಂತಹ ಕಾದ ಸುರುಳಿಗಳು ಕಳೆದುಕೊಳ್ಳುವ ಉಷ್ಣತೆಗಳನ್ನು ತುಲನೆ ಮಾಡುವ ಮೂಲಕ ಅಳೆಯುವಂತಹ ಒಂದು ಉಪಕರಣ.

ಕನ್ನಡ ಗಾದೆಮಾತು – ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ?

ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು. ಪುಟಾಣಿ ಅಳಿಲೊಂದು ಏರಿದರೆ ಬೃಹತ್ ಗಾತ್ರದ ಅರಳಿಮರ ಅಲ್ಲಾಡುವುದಿಲ್ಲ. ಹಾಗೆಯೇ ಜೀವನದಲ್ಲಿ ಶ್ರದ್ಧಾಭಕ್ತಿಗಳಿಂದ ಸಾಧನೆ ಮಾಡುತ್ತಿರುವವರು, ಕೆಲಸಕ್ಕೆ ಬಾರದ ಟೀಕೆಗಳು, ನಾಲಗೆ ಸಡಿಲ ಇರುವವರು ಆಡುವ ಅಬದ್ಧ ಮಾತುಗಳು, ಜೀವನದಲ್ಲಿ ದಿನಾ ಬರುತ್ತಲೇ ಇರುವ ಸಣ್ಣ ಪುಟ್ಟ ಕಿರಿಕಿರಿ-ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ಅವುಗಳಿಂದ ವಿಚಲಿತರಾಗಿ ತಮ್ಮ ಸಾಧನೆಯನ್ನು ನಿಲ್ಲಿಸಬಾರದು, ಅರಳಿಮರದಂತೆ ಅವರು ಗಟ್ಟಿಯಾಗಬೇಕು. ಅಲ್ಲವೆ?  ಒಂದು ಮುಖ್ಯ ಜೀವನಕೌಶಲ್ಯವನ್ನು ಈ ಗಾದೆಮಾತು ಸಮರ್ಪಕವಾಗಿ ಹೇಳಿದೆ ಅನ್ನಿಸುತ್ತೆ. Kannada […]

Page 2 of 3

Kannada Sethu. All rights reserved.