ವಿಮಾನ ನಿಲ್ದಾಣ, ದೊಡ್ಡ ದೊಡ್ಡ ವಾಣಿಜ್ಯ , ಬೆಂಗಳೂರಿನ ‘ನಮ್ಮ ಮೆಟ್ರೊ’ ರೈಲು ವ್ಯವಸ್ಥೆ ಇಲ್ಲೆಲ್ಲ ನಾವು, ತಾನೇ ಮೇಲಕ್ಕೆ ಕೆಳಕ್ಕೆ ಚಲಿಸುತ್ತಾ ಜನರ ಹತ್ತುವಿಕೆ, ಇಳಿಯುವಿಕೆಗಳನ್ನು ಸುಲಭ ಮಾಡುವ ‘ಎಸ್ಕೆಲೇಟರ್’ ಗಳನ್ನು ಬಳಸುತ್ತೇವಲ್ಲ? ಅದನ್ನು ನೋಡಿದಾಗೆಲ್ಲ ‘ಇದಕ್ಕೆ ಕನ್ನಡದಲ್ಲಿ ಏನಂತಾರೆ?’ ಅನ್ನುವ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಏಳುತ್ತಿತ್ತು. ಈಚೆಗೆ, ನಮ್ಮ ಪರಿಚಿತರಾದ ‘ಲೈಟಿಂಗ್ ಕೃಷ್ಣಪ್ಪ’ ಎಂಬ ಬೆಳಕು ಕರ್ಮಿ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಗಲು ನಿಮಿತ್ತವಾದರು. ಲೈಟಿಂಗ್ ಕೃಷ್ಣಪ್ಪ ನಮ್ಮ ನಾಟ್ಯ ಸಂಸ್ಥೆ […]
ಕ್ಯಾಪ್ ಲೈನ್ – ಕ್ಯಾಪ್ ಲೈನ್ – ಕಾಂತೀಯ ಬಲರೇಖೆಗಳ ಒಂದು ಮೂಲಮಾನ. ಇದು 6000 ಮಾಕ್ಸ್ವೆಲ್ ಗಳಿಗೆ ಸಮ.
ಕೇಯಾನಿಕ್ ಆಟಮ್ – ಕೇಯಾನೀಯ ಪರಮಾಣು – ಒಂದು ಸಾಧಾರಣ ಬೀಜಕೇಂದ್ರದ ಸುತ್ತ ಋಣಾತ್ಮಕ ವಿದ್ಯುದಂಶವುಳ್ಳ ಕೇಯಾನು ಸುತ್ತುತ್ತಿದ್ದರೆ ಅಂತಹ ಪರಮಾಣುವನ್ನು ಕೇಯಾನೀಯ ಪರಮಾಣು ಎನ್ನುತ್ತಾರೆ.
ಕೇಯಾನು – ಒಂದು ಕೆ-ಮೆಸಾನು ( ಮೆಸಾನು = ಎಲೆಕ್ಟ್ರಾನುಗಳಿಗಿಂತ ಭಾರವಾದ ಆದರೆ ಪ್ರೋಟಾನುಗಳಿಗಿಂತ ಹಗುರವಾದ ಮೂಲಭೂತ ಕಣಗಳು)
ಜಂಕ್ಷನ್ ರೆಕ್ಟಿಫೈಯರ್ – ಕೂಡುಬಿಂದು ಪರಿವರ್ತಕ – ಅರೆವಾಹಕ ಕೂಡುಬಿಂದುವನ್ನು ಆಧರಿಸಿದ ಪರಿವರ್ತಕ.
ಜಂಕ್ಷನ್ ಡಿಟೆಕ್ಟರ್ – ಕೂಡುಬಿಂದು ಪತ್ತೆಯಂತ್ರ – ಹಿಮ್ಮುಖ ವಿದ್ಯುತ್ ಸಾಮರ್ಥ್ಯವುಳ್ಳ ಅರೆವಾಹಕ ಕೂಡುಸ್ಥಳದಲ್ಲಿನ ವಿದ್ಯುತ್ ಪಾತದ ಕೂಡುಬಿಂದುವಿನಲ್ಲಿ ವಿದ್ಯುತ್ ವಿಕಿರಣವನ್ನು ಅಳೆಯುವ ಉಪಕರಣ.
Like us!
Follow us!