Laevorotatory

ಲೇವೋರೊಟೇಟರಿ – ಎಡಮುರಿ – ಧ್ರುವೀಕರಣದ ಮೇಲ್ಮೈಯನ್ನು ಎಡದಿಂದ ಬಲಕ್ಕೆ ತಿರುಗಿಸುವುದು‌.

Label

ಲೇಬಲ್ – ಜಾಡುಪತ್ತೆ ಬೀಜಕೇಂದ್ರ – ಒಂದು ರಾಸಾಯನಿಕ ಕ್ರಿಯೆ ಅಥವಾ ಯಾವುದಾದರೂ ಒಂದು ಪ್ರಕ್ರಿಯೆಯನ್ನು ಜಾಡು ಹಿಡಿದು ಪರಿಶೀಲಿಸಲು ಬಳಸುವ ಒಂದು ಸ್ಥಿರ ಅಥವಾ ವಿಕಿರಣೀಯ ಬೀಜಕೇಂದ್ರ.

ಕನ್ನಡ ಗಾದೆಮಾತು – ಇಮ್ಮನದಿಂದ ಸುಮ್ಮನೆ‌ ಕೆಟ್ಟೆ. 

ಬಹಳ ಅಪರೂಪದ ಗಾದೆ ಮಾತು ಇದು‌. ನಮ್ಮ ಮನಸ್ಸು ಕೆಲವೊಮ್ಮೆ ಈ ದಾರಿಯೋ, ಆ ದಾರಿಯೋ, ಅದೋ ಇದೋ, ಆ ಕೆಲಸವೋ, ಈ ಕೆಲಸವೋ  ಎಂದು ಯೋಚಿಸಿ ಯೋಚಿಸಿ ದ್ವಂದ್ವಕ್ಕೆ ಬಿದ್ದು ಯಾವ ನಿರ್ಧಾರಕ್ಕೂ ಬರದೆ ಅಂದುಕೊಂಡ ಕೆಲಸ ಆಗುವುದೇ ಇಲ್ಲ.  ಇದು ಕೆಲಸದ ವಿಷಯದಲ್ಲಿ ಮಾತ್ರವಲ್ಲ, ಪ್ರಯಾಣ, ಸಂಬಂಧ ಎಲ್ಲ ವಿಷಯಗಳಲ್ಲೂ ನಿಜ.‌ ಹೀಗಾಗಿ ಇಮ್ಮನ ಅಂದರೆ, ಒಂದೇ ಬಾರಿಗೆ  ಎರಡು ಕಡೆ  ಎಳೆಯುವ ಮನಸ್ಸಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಸರಿಯಾದ ಹೊತ್ತಿನಲ್ಲಿ ಯಾವುದಾದರೂ ಒಂದು […]

ಮೆಂದು ವಡಾ!!?? ಅಲ್ಲ…ಅಯ್ಯಯ್ಯೋ…ಅದು ಮೆದು‌ವಡಾ!

 ಈಚೆಗೆ ನನಗೊಮ್ಮೆ ಮುಂಬೈಯಿಂದ ಗೋವಾಗೆ ಕೊಂಕಣ ರೈಲುಮಾರ್ಗದಲ್ಲಿ ಹೋಗುವ ‘ಮಾಂಡೊವಿ ಎಕ್ಸ್ ಪ್ರೆಸ್’ ಎಂಬ ಹೆಸರಿನ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಒದಗಿತ್ತು. ಬೆಟ್ಟಗಳು, ನದಿಗಳು, ಹಸಿರಾದ ಕಣಿವೆಗಳು, ಎತ್ತರದ ಸೇತುವೆಗಳು ಹಾಗೂ ಅನೇಕ ಸುರಂಗಗಳಿಂದ ಕೂಡಿದ ನಯನ ಮನೋಹರ ರೈಲು ಮಾರ್ಗ ಅದು‌. ಈ ಕಾರಣದಿಂದಾಗಿ ಹಗಲಿನಲ್ಲಿ ಈ ರೈಲಿನಲ್ಲಿ ಪಯಣಿಸುವುದು ಒಂದು ಸಂತಸದ ವಿಷಯ. ಇದರ ಜೊತೆಗೆ ಇನ್ನೊಂದು ಉಲ್ಲಾಸಕರ ವಿಷಯವೆಂದರೆ ಈ ರೈಲಿನಲ್ಲಿ ಬಗೆಬಗೆಯ ಬಹು ರುಚಿಕರವಾದ ತಾಜಾ ತಿಂಡಿಗಳು ಕೈಗೆಟಕುವ ಬೆಲೆಯಲ್ಲಿ […]

Kymograph

ಕೈಮೋಗ್ರಾಫ್ – ಅಲೆಮಾಪಕ – ನಿಯತಕಾಲಿಕ ಚಲನೆಗಳನ್ನು ಅದರಲ್ಲೂ ವಿಶೇಷವಾಗಿ ಸ್ನಾಯುಗಳಲ್ಲಿನ ನಿಯತಕಾಲಿಕ ಚಲನೆಗಳನ್ನು ದಾಖಲಿಸಲು ಬಳಸುವ ಒಂದು ಉಪಕರಣ.

Kovar

ಕೋವಾರ್ – ಕೋವಾರ್ – ಕಬ್ಬಿಣ, ಕೋಬಾಲ್ಟ್ ಮತ್ತು ನಿಕ್ಕಲ್ ಗಳು ಸೇರಿರುವಂತಹ ಒಂದು ಮಿಶ್ರಲೋಹದ ವ್ಯಾಪಾರೀ ಹೆಸರು ಇದು‌.‌ ಈ ಮಿಶ್ರಲೋಹದ ಗುಣವು ಗಾಜಿನಂತೆಯೇ ಇರುತ್ತದೆ. ಉಷ್ಣತೆಯಲ್ಲಿ ತುಂಬ ವ್ಯತ್ಯಾಸಗಳುಂಟಾಗುತ್ತವೆ ಎಂಬ ನಿರೀಕ್ಷೆ ಇರುವ ಸನ್ನಿವೇಶಗಳಲ್ಲಿ ಇದನ್ನು ಬಳಸುತ್ತಾರೆ.‌

Knudsen flow

ನುಡ್ಸೆನ್ ಫ್ಲೋ‌ – ನುಡ್ಸೆನ್ ಹರಿವು – ತಾನಿರುವ ಪಾತ್ರೆಯ ಅಳತೆಗಿಂತ ಹೆಚ್ಚು ಸರಾಸರಿ ಮುಕ್ತ ಚಲನೆಯುಳ್ಳ ಪರಮಾಣುಗಳ ಹರಿವು ಇದು‌.

Knock on collision

ನಾಕ್ ಆನ್ ಕೊಲಿಷನ್ – ನೂಕಿ ತಳ್ಳುವ ಢಿಕ್ಕಿ‌- ತುಂಬ ಹೆಚ್ಚಿನ ಶಕ್ತಿಯುಳ್ಳ ಕಣವು ಢಿಕ್ಕಿ ಹೊಡೆದದ್ದರಿಂದಾಗಿ‌ ಒಂದು ಮೂಲಭೂತ ಕಣ‌, ಅಥವಾ ಪರಮಾಣುವಿನ‌ ಬೀಜಕೇಂದ್ರವು ಚಲಿಸಲು ಪ್ರಾರಂಭಿಸಿದರೆ ಅಂತಹ ಢಿಕ್ಕಿಯನ್ನು ನೂಕಿ ತಳ್ಳುವ ಢಿಕ್ಕಿ ಎಂದು ಕರೆಯುತ್ತಾರೆ. ಎಲೆಕ್ಟ್ರಾನೊಂದು ತನ್ನ ಪಥದಿಂದ ತಳ್ಳಲ್ಪಡುವುದೂ ಇದೇ ಢಿಕ್ಕಿಯಿಂದ.

Knocking

ನಾಕಿಂಗ್ – ಹೊಡೆತ ಶಬ್ದ – ಕೆಲವು ಸನ್ನಿವೇಶಗಳಲ್ಲಿ ಕಿಡಿ-ಪೆಟ್ರೋಲು ಆಧಾರಿತ ಚಾಲಕಯಂತ್ರದಿಂದ ಹುಟ್ಟುವಂತಹ, ಲೋಹ ಕುಟ್ಟಿದಂತೆ ಕೇಳಿಸುವ ಶಬ್ದ. ದಹನಪಾತ್ರೆಯಲ್ಲಿನ ಇನ್ನೂ ಸುಟ್ಟಿಲ್ಲದ ಸ್ಫೋಟಕ ಮಿಶ್ರಣದ ಶೀಘ್ರ ದಹನದಿಂದ ಈ ಶಬ್ಧ ಹುಟ್ಟುತ್ತದೆ.

ಕನ್ನಡ ಗಾದೆಮಾತು – ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.

ವಿಶ್ವಜೀವನದ ಒಂದು  ವಿಚಿತ್ರ ಸಂಗತಿಯನ್ನು ಈ ಅಪರೂಪದ ಗಾದೆಮಾತು ಹೇಳುತ್ತದೆ. ಹಿಮಾಲಯ ಎಂಬುದು ತನ್ನ ಹೆಸರೇ ಸೂಚಿಸುವಂತೆ ಹಿಮದ ಮನೆ. ಅಲ್ಲಿ ಹಿಮದ ಹೆಚ್ಚಳ ಆಗುತ್ತಲೇ ಇರುತ್ತದೆ. ಹಾಗೆಯೇ ದಕ್ಷಯಜ್ಞದ ಸಂದರ್ಭದಲ್ಲಿ ಶಿವನ ಕೋಪದ ಫಲವಾಗಿ ಅವನ ಕೂದಲಿನಿಂದ  ಹುಟ್ಟಿದ ವೀರಭದ್ರನ ಆರ್ಭಟ ಬಹಳ ಹೆಚ್ಚು. ಅದು ಸದಾ ಹೆಚ್ಚುತ್ತಲೇ ಇರುವ ಸಂಗತಿ.  ನಮ್ಮನ್ನು ತುಂಬ ಯೋಚಿಸುವಂತೆ ಮತ್ತು ಬದುಕನ್ನು ಗಮನಿಸುವಂತೆ ಮಾಡುತ್ತದಲ್ಲವೆ ಈ ಗಾದೆಮಾತು? Kannada proverb – Himalayadalli hima hechchanthe. Veerabhadranalli avatara  […]

Page 2 of 4

Kannada Sethu. All rights reserved.