“ಏನ್ ಮೇಡಂ! ಇಷ್ಟೊಂದ್ ಕನ್ನಡ ಮಾತಾಡ್ತೀರಲ್ಲ!”

ಕನ್ನಡ ಅಧ್ಯಾಪಕಿಯಾದ ನನ್ನ ವೃತ್ತಿಜೀವನದಲ್ಲಿ ಒಮ್ಮೊಮ್ಮೆ ಕನ್ನಡ ಭಾಷೆಯ ಕಾರಣದಿಂದಲೇ ಕೆಲವು ಅಚ್ಚರಿಯ ಸಂಗತಿಗಳು ಜರುಗ್ತವೆ‌. ಇದೋ ಇಲ್ಲಿದೆ ಅಂತಹ ಒಂದು ಪ್ರಸಂಗ. ಈಚೆಗೆ ನಾನು ನಮ್ಮ ವಿಶ್ವವಿದ್ಯಾಲಯದ ಉತ್ತರಪತ್ರಿಕೆಗಳ ಸಂರಕ್ಷಣ ಘಟಕದಲ್ಲಿ ಕೆಲಸ ಮಾಡ್ತಿದ್ದೆ. ಎಲ್ಲ ಅಧ್ಯಾಪಕರೂ ಮೌಲ್ಯಮಾಪನ ಮಾಡಲು ಆ ಘಟಕಕ್ಕೆ ಬಂದು ಉತ್ತರಪತ್ರಿಕೆಗಳನ್ನು ಘಟಕದಿಂದ ತೆಗೆದುಕೊಳ್ಳೋದು, ಮೌಲ್ಯಮಾಪನ ಮಾಡಿ ಮರಳಿಸೋದು – ಇವನ್ನ ಮಾಡ್ತಾ ಇರ್ತಾರೆ. ಈ ಘಟಕಕ್ಕೆ ನಿರ್ಬಂಧಿತ ಪ್ರವೇಶ ಇರುತ್ತೆ‌.‌ ಹಾಗಾಗಿ ಬಾಗಿಲಿಗೆ ಒಂದು ಭಾರವಾದ ಮೇಜನ್ನೋ, ಇಳಿಮೇಜನ್ನೋ ( […]

Knife edge

ನೈಫ್ ಎಡ್ಜ್ – ಕತ್ತಿ ಮೊನೆ – ಕೇಟರ್ ರ ಆಂದೋಲಕ ಮಾಪಕ ಮುಂತಾದವುಗಳಲ್ಲಿ ಬಳಸುವ ಒಂದು ಚೂಪಾದ ಅಲಗು‌. ಇದರ ಚೂಪುತುದಿಯಿಂದಾಗಿ ಇದು ಸಂಪರ್ಕ ಉಂಟುಮಾಡುವ ಎರಡು ಭಾಗಗಳ ಪ್ರದೇಶವು ಅತಿ ಕನಿಷ್ಠ ಮಟ್ಟದಲ್ಲಿರುತ್ತದೆ.

Klystron

ಕ್ಲಿಸ್ಟ್ರಾನ್ – ಅಲೆ ಜನಕ – ಮೈಕ್ರೋವೇವ್ ( ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ)ಪ್ರದೇಶದಲ್ಲಿ ವಿದ್ಯುತ್ಕಾಂತೀಯ ಅಲೆಗಳನ್ನು ಉತ್ಪಾದಿಸಲು ಬಳಸುವ ಸಾಧನ.

Kinetic theory of gases

ಕೈನೆಟಿಕ್ ಥಿಯರಿ ಆಫ್ ಗ್ಯಾಸಸ್ – ಅನಿಲಗಳ ಚಲನ ಸಿದ್ಧಾಂತ – ಅನಿಲಗಳ ವರ್ತನೆಯನ್ನು ವಿವರಿಸುವ ಒಂದು ಸಿದ್ಧಾಂತ. ಪ್ರತಿಯೊಂದು ಅನಿಲದ ಅಣುವೂ ಸಹ ಚಲಿಸುತ್ತಿರುತ್ತದೆ ಎಂಬ ಊಹೆಯನ್ನು ಆಧರಿಸಿರುವ ಸಿದ್ಧಾಂತವಿದು.

Kinetic momentum

ಕೈನೆಟಿಕ್ ಮೊಮೆಂಟಮ್ – ಚಲನಾತ್ಮಕ ದ್ರವ್ಯವೇಗ – ಒಂದು ಕಣದ ಚಲನೆಯಿಂದಾಗಿ ಅದು ಹೊಂದಿರುವ ದ್ರವ್ಯ ವೇಗ.

Kinetic friction

ಕೈನೆಟಿಕ್ ಪ್ರಿಕ್ಷನ್ – ಚಲನಾತ್ಮಕ ಘರ್ಷಣೆ – ಒಂದು ವಸ್ತುವು ಇನ್ನೊಂದು ವಸ್ತುವಿನ ಮೇಲೆ ಚಲಿಸುತ್ತಿರುವಾಗ ಅದರ ಮೇಲೆ ವರ್ತಿಸುತ್ತಿರುವಂತಹ ಘರ್ಷಣೆಯ ಬಲ.

ಕನ್ನಡ ಗಾದೆಮಾತು – ಕಂಡದ್ದು ಕಂಡ ಹಾಗೆ ಹೇಳಿದರೆ ಕೆಂಡದಂಥಾ ಕೋಪ.

ಮನುಷ್ಯರ ಅಂತರಂಗದಲ್ಲಿನ ಒಂದು ವಿಲಕ್ಷಣ ಸ್ವಭಾವವನ್ಬು ಈ ಗಾದೆಮಾತು ಬಿಚ್ಚಿ ತೋರಿಸುತ್ತದೆ.  ಜನರಿಗೆ ತಾವು ಮಾಡುವ ಕೆಲವು ತಪ್ಪುಗಳು – ಉದಾಹರಣೆಗೆ, ಬಳಗದವರಲ್ಲಿ     ತಾರತಮ್ಯ ಮಾಡುವುದು, ಬೇರೆಯವರ ಸಮಯದ ಬಗ್ಗೆ ನಿರ್ಲಕ್ಷ್ಯ ತೋರುವುದು, ಮಾತು ಕೊಟ್ಟು ಉಳಿಸಿಕೊಳ್ಳದಿರುವುದು, ಅನಗತ್ಯವಾಗಿ ಸಿಟ್ಟು ಮಾಡಿಕೊಳ್ಳುವುದು, ಕಾರಣವಿಲ್ಲದೆ ಒರಟಾಗಿ ನಡೆದುಕೊಳ್ಳುವುದು….ಇಂಥವು – ಮತ್ತು  ಅವುಗಳಿಂದ ಬೇರೆಯವರಿಗೆ ಆಗುವ ತೊಂದರೆಗಳ  ಬಗ್ಗೆ ಅರಿವಿರುವುದಿಲ್ಲ ಎಂದಲ್ಲ. ಇರುತ್ತದೆ‌. ಆದರೆ, ಎದುರಿಗಿರುವವರು ಆ ತಪ್ಪುಗಳನ್ನು ಬಾಯಿಬಿಟ್ಟು ಹೇಳಿದರೆ, ಅಥವಾ ಬೆರಳಿಟ್ಟು ತೋರಿಸಿಬಿಟ್ಟರೆ ಮಾತ್ರ ಅವರಿಗೆ ವಿಪರೀತ ಕೋಪ […]

 “ಅಮ್ಮಾ, ಅದು ಕೊರೆಮೊಗ್ಗು”!

ಅಚ್ಚಗನ್ನಡದ ಗ್ರಾಮೀಣ ಪದವೊಂದು ನನಗೆ ಪರಿಚಯವಾದದ್ದರ ಕುರಿತಾಗಿದೆ ಈ ವಾರದ ಕನ್ನಡ ಪ್ರಸಂಗ. ನನಗೆ ಮಲ್ಲಿಗೆ, ಸಂಪಿಗೆ, ಜಾಜಿಯಂತಹ ಪರಿಮಳಭರಿತ ಹೂಗಳೆಂದರೆ ಬಹಳ ಇಷ್ಟ.  ಬೇರೆಯವರು ಮುಡಿದದ್ದನ್ನು ನೋಡಿ ಸಂತೋಷ ಪಡುವುದು, ಹೂವಿನ ಮಾರುಕಟ್ಟೆಯಲ್ಲಿ ಈ ಹೂಗಳನ್ನು/ಹೂ ಮಾಲೆಗಳನ್ನು ಓರಣವಾಗಿ ಜೋಡಿಸಿರುವುದನ್ನು ನೋಡಿ ಆನಂದಿಸುವುದು , ನಾನು ಕೂಡ ಅವುಗಳನ್ನು ಹೆರಳಲ್ಲಿ ಮುಡಿದು ಸಂಭ್ರಮಿಸುವುದು ಇವನ್ನೆಲ್ಲ ಮಾಡುತ್ತಿರುತ್ತೇನೆ. ಬೆಂಗಳೂರಿನಲ್ಲಿ ಈಗ ಚಳಿಗಾಲ ಅಲ್ಲವೆ? ಹೀಗಾಗಿ ಮಲ್ಲಿಗೆ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬಾರದೆ ಇರುವುದರಿಂದಾಗಿ ಅದರ ಬೆಲೆ ಜಾಸ್ತಿ. […]

 Kinetic energy ( K.E.)

ಕೈನೆಟಿಕ್ ಎನರ್ಜಿ‌- ( K. E.) – ಚಲನ ಶಕ್ತಿ( K.E.) – ತಾನು ಚಲಿಸುತ್ತಿರುವುದರಿಂದಾಗಿ ಒಂದು ವಸ್ತುವು ಹೊಂದಿರುವ ಶಕ್ತಿ.

Kinescope

ಕೈನ್ ಸ್ಕೋಪ್ – ಚಲಚಿತ್ರ ದರ್ಶಕ – ದೂರದರ್ಶನದ ಚಿತ್ರಕೊಳವೆ.

Page 3 of 4

Kannada Sethu. All rights reserved.