ಕನ್ನಡ ಭಾಷೆಯಲ್ಲಿನ ಒಂದು ಪ್ರಸಿದ್ಧ ಗಾದೆಮಾತಿದು. ಸಮಾರಂಭಗಳಲ್ಲಿ ಆಗಮಿಸಿದವರಿಗೆ ನೀಡುವ ವಿಶೇಷ ಆಹಾರಕ್ಕೆ ಔತಣ ಎನ್ನುತ್ತಾರಲ್ಲವೇ. ಇಂತಹ ಔತಣವು ಸಾಮಾನ್ಯವಾಗಿ ಅಪರೂಪದ್ದೂ, ಅತ್ಯಂತ ರುಚಿಕರವಾದದ್ದೂ ಆಗಿರುತ್ತದೆ. ಈ ರೀತಿಯ ವಿಶೇಷ ಸಂದರ್ಭದ ಊಟಕ್ಕೆ ಅತಿಥೇಯರು ಅಥವಾ ಸಮಾರಂಭದ ಆಯೋಜಕರು ತಮ್ಮಿಚ್ಛೆಯಿಂದ ಆಹ್ವಾನ ನೀಡಿದಾಗ ಅದನ್ನು ಸ್ವೀಕರಿಸಲು ಹೋಗುವುದು ಗೌರವದಿಂದ ಬಾಳುವ, ಬದುಕುವ ಜನರ ರೀತಿಯಾಗಿರುತ್ತದೆ. ಆದರೆ ಔತಣವಿರುವ ಸುದ್ದಿ ಗೊತ್ತಾಗಿ ಅದಕ್ಕೆ ನಮ್ಮನ್ನು ಕರೆಯದಿದ್ದಾಗ, ನಾವು ಅದನ್ನು ಏರ್ಪಡಿಸಿದವರ ಬಳಿ ಹೋಗಿ ನಮ್ಮನ್ನು ಕರೆಯುವಂತೆ ನೇರವಾಗಿ ಅಥವಾ ಪರೋಕ್ಷವಾಗಿ ಬೇಡಿಕೊಳ್ಳುವುದು ಅಥವಾ  ದುಂಬಾಲು ಬೀಳುವುದು ನಮಗೆ ಶೋಭೆ ತರುವ ವರ್ತನೆಯಲ್ಲ. ಹೀಗೆ, ತಮ್ಮನ್ನು ಕರೆಯುವಂತೆ ಗೋಗರೆಯುವವರನ್ನು ಔತಣ ನೀಡುವವರು ಆಹ್ವಾನಿಸಿದರೂ, ನಂತರ  ಈ ವಿಷಯ ನಾಲ್ಕು ಜನರಿಗೆ ಗೊತ್ತಾದಾಗ `ನೋಡು, ಅತ್ತೂ ಕರೆದೂ ಔತಣ ಹಾಕಿಸಿಕೊಂಡರಂತೆ’ ಎಂದು ಅವರ ಬಗ್ಗೆ ಜನರು ಆಡಿಕೊಂಡು ನಗುವ ಸಾಧ್ಯತೆ ತುಂಬ ಹೆಚ್ಚು. ಹೀಗಾಗಿಯೇ, ಔತಣಕ್ಕಾಗಲೀ, ಪ್ರಶಸ್ತಿ-ಪುರಸ್ಕಾರಗಳಿಗಾಗಲೀ ಮಾನವಂತ ಸಜ್ಜನರು ಕಾಡುವುದು, ಬೇಡುವುದು, ಗೋಗರೆಯುವುದನ್ನು ಮಾಡುವುದಿಲ್ಲ.

Kannada proverb Aththuu karedu outhana haakisikondranthe(They begged and pleaded to get invited to the feast).

Invitation to feasts and parties naturally should be initiated by the host. If one begs and pleads directly or indirectly, to be invited, there is no dignity in it. So it is advised that one should never stoop to this level. Even if one gets to go to the feast or party after he/she begs and pleads, later people will laugh at his/her back. So, good things of life should be earned by our capacity and not to be got by begging. The Kannada proverb here depicts this life lesson very well.