ಆಧುನಿಕ ಮನಃಶಾಸ್ತ್ರವು ‘ನಮ್ಮ ಒಂದು ಆಲೋಚನೆಯು ಅದೇ ಬಗೆಯ ಇನ್ನೊಂದು ಆಲೋಚನೆಯನ್ನು ಆಕರ್ಷಿಸುತ್ತದೆ’ ಎಂದು ಸೈದ್ಧಾಂತಿಕವಾಗಿ ಹೇಳಿದ್ದನ್ನು ಪ್ರಸ್ತುತ ಗಾದೆಮಾತು ಆಡುನುಡಿಯಲ್ಲಿ ಹೇಳಿದೆ. ನಾವು ದಿನವಿಡೀ ಏನು ಆಲೋಚನೆ ಮಾಡುತ್ತೇವೋ ನಮ್ಮ‌ ಬದುಕು ಅದೇ ಆಗುತ್ತದೆ. ಹಾಡಿ ಹಾಡಿ ಅಭ್ಯಾಸವಾದಾಗ ಧ್ವನಿಯಲ್ಲಿ ರಾಗವು ಚೆನ್ನಾಗಿ ಹುಟ್ಟುವಂತೆ, ಸದಾ ‘ನನಗೆ ಆ ರೋಗ, ಈ ರೋಗ….ಅಯ್ಯೋ…’ ಎಂದು ಗೋಳಾಡುತ್ತಾ ನರಳುತ್ತಾ ಇರುವವರು ಕೊನೆಗೆ ರೋಗವೇ ತಾವಾಗಿಬಿಡುತ್ತಾರೆ! ಹೀಗಾಗಿ ನಾವು ಏನನ್ನು ಪುನರಾವರ್ತಿತವಾಗಿ ಮಾಡುತ್ತೇವೋ, ಯಾವುದರ ಕುರಿತು ಸದಾ ಮಾತಾಡುತ್ತೇವೋ ಅದರ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ.

Kannada proverb – Haadtha haadtha raaga, naraltha naraltha roga ( They kept on singing and became melodious, they kept on lamenting and got sick). Ultimately we become just like our dominating thoughts. This is a truth revealed by modern psychology. Very surprisingly this kannanda proverb says the same thing in a simple way. Therefore we need to take care about what we do and what we think all day.