ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ ವಿವೇಕದ ಬಗ್ಗೆ ನಮ್ಮೊಳಗೆ ಗೌರವ ಮೂಡುತ್ತದಲ್ಲವೇ?

Kannada proverb: Hasidu unadirabeda, hasiyade unabeda ( Do not stay without food when you are hungry and do not eat when you are not hungry).

This proverb is nothing but a health tip given by our elders in the Kannada speaking land. It says, do not go without food when you are hungry and do not eat when you are not hungry. If we take healthy food at the right time and maintain time discipline in our food consumption, we can keep illnesses away to a great extent. The fact that the modern medicine field approves what is said in this proverb, increases respect in our hearts we have towards our ancient forefathers.