ನಮ್ಮ ಜೀವನಾನುಭವದಲ್ಲಿ ನಾವು ಗಮನಿಸಿಯೇ ಇರುವಂತೆ, ಒಂದು ಹೊತ್ತು ಊಟ ಇಲ್ಲದದ್ದರೆ

 ಹೇಗೋ ತಾಳಿಕೊಂಡುಬಿಡುತ್ತೇವೆ, ಆದರೆ ಯಾರಾದರೂ ನಮಗೆ ಒಂದೇ ಸಮ, ಕಿರಿಕಿರಿ ಅನ್ನಿಸುವಂತೆ ಉಪದ್ರವ ಕೊಡುತ್ತಿದ್ದರೆ ತಾಳಿಕೊಳ್ಳುವುದು ತುಂಬ ಕಷ್ಟ. ‌ಸದಾ ಮಾತಾಡುವ  ವಾಚಾಳಿಗಳು, ತಾನು ಮಾರುವ ವಸ್ತುವನ್ನು ಕೊಂಡುಕೋ, ಕೊಂಡುಕೋ ಎಂದು ಮೂರು ಹೊತ್ತೂ ದುಂಬಾಲು ಬೀಳುವ ಮಾರಾಟಗಾರರು, ಸದಾ ಗೋಳು ಹೇಳುತ್ತಾ ಸಾಲ ಕೇಳುತ್ತಲೇ ಇರುವವರು….ಇಂತಹವರ ಉಪದ್ರವವನ್ನು ತಡೆದುಕೊಳ್ಳುವುದು ಕಷ್ಟ. ಯಾವಾಗಲೂ ಗುಂಯ್ಗುಡುತ್ತಾ ಕಿರಿಕಿರಿ ಮಾಡುವ ಸೊಳ್ಳೆಗಳದ್ದೂ ಉಪದ್ರವವೇ. ಇಂತಹದ್ದನ್ನು ಸಹಿಸುವುದು ಒಂದು ಹೊತ್ತು ಊಟ ಇಲ್ಲದೆ ಇರುವುದಕ್ಕಿಂತ ಕಷ್ಟ ಎಂಬುದು ಈ ಗಾದೆಮಾತಿನ ಅರ್ಥ. ಹೀಗಿರುವಾಗ ನಾವು ಯಾರಿಗೂ ಉಪದ್ರವ ಕೊಡುವವರಾಗಬಾರದು ಎಂದು ಬೇರೆ ಹೇಳಬೇಕಾಗಿಲ್ಲ, ಅಲ್ಲವೇ? 

Kannada proverb – Upavaasa irabahudu, upadrava thalalaagadu( You can stay hungry, but it is impossible to bear nagging troubles.)

In life’s long journey we observe that, one or two meals we can skip in our day and some how bear it. But if someone continuously nag us for something or the other it becomes very difficult to bear. A nagging spouse, a pestering salesman, or a troublesome relative are nothing but a pain in the neck. The take home lesson from this Kannada proverb is, we need to check on ourselves that, whether we have these troulbe causing qualities in us! We should be careful not to have it in us.