ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಛೆ ಇರುವವರು ಇಟ್ಟುಕೊಳ್ಳಬಾರದ ಒಂದು ಅಭ್ಯಾಸದ ಬಗ್ಗೆ ಗಮನ ಸೆಳೆಯುವ, ಕನ್ನಡದ ಒಂದು ಗಾದೆಮಾತು ಇದು. ನಾವು ಸೇವಿಸುವ ಎರಡು ಊಟಗಳ/ತಿಂಡಿಗಳ ನಡುವೆ ಸುಮಾರು ಐದು ಗಂಟೆಯ ಬಿಡುವು ಇರಬೇಕೆಂದು ಆರೋಗ್ಯತಜ್ಞರು ಹೇಳುತ್ತಾರೆ. ಏಕೆಂದರೆ ತೆಗೆದುಕೊಂಡ ಆಹಾರವನ್ನು ಜೀರ್ಣವಾಗಿಸಿ ಅದರಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಿಸಲು ನಮ್ಮ ಜೀರ್ಣಾಂಗಗಳಿಗೆ ಅಷ್ಟು ಸಮಯಾವಕಾಶ ಬೇಕಾಗುತ್ತದೆ. ಆದರೆ ನಾವು ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇದ್ದರೆ ನಮ್ಮ ಜೀರ್ಣಾಂಗಗಳ ಮೇಲೆ ನಿರಂತರ ಒತ್ತಡ ಬಿದ್ದು ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಕೆಡುತ್ತದೆ. ಅದಕ್ಕಾಗಿಯೇ ಆಗಷ್ಟು, ಈಗಷ್ಟು ಉಣ್ಣಬಾರದು, ಹೀಗೆ ಮಾಡಿದರೆ ಮನುಷ್ಯ ರೋಗಿಷ್ಟನಾಗುತ್ತಾನೆ ಎಂಬ ಬುದ್ಧಿಮಾತನ್ನು, ಈ ಪ್ರಾಸಯುತ ಗಾದೆಮಾತಿನ ಮೂಲಕ ನಮ್ಮ ಹಿರಿಯರು ಹೇಳಿದ್ದಾರೆ.
Kannada proverb – Aagashtu undu eegashtu undu rogishtanaada ( He kept on eating now and then, therefore ended up as a patient).
It is a well known fact that there should be a gap of five hours or so between our two meals. Doctors and health experts keep stressing on this fact. This time gap is needed to assimilate the food we have consumed ; our digestive system needs this time period to carry out its activities in a proper way. But there are people who keep on eating throughout the day. Nowadays the terms ‘binge eating’, and ‘ stress eating’ are used to recognize this bad habit. If we want to protect our health, we need to give up the habit of incessant eating. Our ancestors have done well in giving this advice in a nutshell, i.e. in the form of a catchy proverb.