ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್ – ಎಲೆಕ್ಟ್ರಾನು ಗಿರಕಿ ಅನುರಣನ‌ – ವರ್ಣಪಟಲ ದರ್ಶಕ ವ್ಯವಸ್ಥೆ ( spectroscopy) ಯಲ್ಲಿ ಬಳಸುವ ಒಂದು ಕಾರ್ಯವಿಧಾನ ಇದು. ಎಲೆಕ್ಟ್ರಾನಿನ ಗಿರಕಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಕಾಂತೀಯ ತಿರುಗುಬಲವನ್ನು ಆಧರಿಸಿ, ಅಣು ವೊಂದರಲ್ಲಿ ಎಲೆಕ್ಟ್ರಾನೊಂದು ಎಲ್ಲಿದೆ ಎಂದು ತಿಳಿಯುವಲ್ಲಿ ಈ ವಿಧಾನವು ಸಹಾಯ ಮಾಡುತ್ತದೆ.