ನಗರ ಅಥವಾ ಪೇಟೆಯ ರಸ್ತೆಗಳಲ್ಲಿ ಓಡಾಡುವಾಗ ‘ಉಪಹಾರ ಗೃಹ’ ಎಂಬ ಪದವನ್ನು, ಮತ್ತು ಆಹ್ವಾನ ಪತ್ರಿಕೆಗಳಲ್ಲಿ ‘ಸಭೆಗೆ ಮುಂಚೆ ಲಘು ಉಪಹಾರದ ವ್ಯವಸ್ಥೆ ಇದೆ’ ಎಂಬ ಪದಪ್ರಯೋಗಗಳನ್ನು ನಾವೆಲ್ಲ ಗಮನಿಸಿರುತ್ತೇವಲ್ಲ.‌.‌ ಅದನ್ನು ನೋಡಿದಾಗೆಲ್ಲ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಚಿಮ್ಮುತ್ತಿತ್ತು. ಇದು ಉಪಹಾರವೋ ಉಪಾಹಾರವೋ ಎಂಬ ಪ್ರಶ್ನೆ ಅದು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ‌ನಿಘಂಟನ್ನು ನೋಡಿದಾಗ ಗೊಂದಲ ತಿಳಿಯಾಯಿತು.‌‌ ನಿಘಂಟಿನಲ್ಲಿ ಉಪಹಾರಕ್ಕೂ ಉಪಾಹಾರಕ್ಕೂ ತಿಂಡಿ, ಅಲ್ಪಾಹಾರ ಎಂದೇ ಅರ್ಥವಿದೆ (ಬೇರೆ ಅರ್ಥಗಳ ಜೊತೆಗೆ).

ಒಂದೇ ಅರ್ಥ ಇರುವ ಎರಡು ಪದಗಳು ತಮ್ಮಲ್ಲಿನ‌ ಹ್ರಸ್ವ, ದೀರ್ಘಗಳು ವ್ಯತ್ಯಾಸ ಆದರೂ ಒಂದೇ ಅರ್ಥವನ್ನು ಹೊಂದಿರುವ ಅಪರೂಪದ ಉದಾಹರಣೆ ಇದು.