ಉತ್ತಮವಾದ ಜೀವನ ಮೌಲ್ಯವೊಂದನ್ಬು ಸರಳವಾಗಿ ಹೇಳುವ ಗಾದೆಮಾತು ಇದು. ನಮಗೆ ಅನ್ನ ನೀಡಿದ ಕೈಯಾಗಲಿ, ಸಹಾಯ ನೀಡಿದ ಕೈಯಾಗಲಿ ಆ ಸಮಯದಲ್ಲಿ ನಮಗೆ ಅಮೂಲ್ಯವಾದ ಉಪಕಾರ ಮಾಡಿರುತ್ತದೆ. ಆ ಕೈ ಅಂದರೆ ಅಂತಹ ಕೊಡುಗೈ ಮನಸ್ಸಿನ ವ್ಯಕ್ತಿಗಳು ಕಷ್ಟದಲ್ಲಿದ್ದಾಗ ಅಥವಾ ನಮ್ಮ ಸಹಾಯವು ಅವರಿಗೆ ಬೇಕಾದ ಪರಿಸ್ಥಿತಿ ಬಂದಾಗ, ನಾವು ಅವಶ್ಯವಾಗಿ ಈ‌ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿ, ಅವರಿಗೆ ಅಗತ್ಯವಾಗಿರುವ ಸೇವೆಯನ್ನು ನೀಡಬೇಕು. ಉಪಕಾರ ಸ್ಮರಣೆಯ ಮೌಲ್ಯವನ್ನು ಹೇಳಿಕೊಡುವಂತಹ ಉತ್ತಮ ಗಾದೆಮಾತಿದು.

Kannada proverb – Needida kaige neravagabeku (We need to help the hand which served us).

This proverb teaches a value of life. In the course of our lives, people like parents, teachers, relatives and friends would have helped us in many ways, for instance, serving us food or taking care of our emotional needs. When such persons are in distress or difficulty we should be the first ones to help them. This is a small ‘thanks giving’ for what was given to us by them. A good value to remember. Isn’t it?