ಇಂಟರ್ನ್ಯಾಷನಲ್ ಡೇಟ್ ಲೈನ್ – ಅಂತಾರಾಷ್ಟ್ರೀಯ ದಿನಾಂಕ ರೇಖೆ – ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಒಂದು ಕಲ್ಪಿತ ರೇಖೆ. ಇದು ಪೆಸಿಫಿಕ್ ಸಾಗರದ ಮೂಲಕ ಚಲಿಸುತ್ತಾ 180 ಡಿಗ್ರಿ ಅಕ್ಷಾಂಶವನ್ನು ಅನುಸರಿಸುತ್ತದೆ. ಒಂದು ದಿನದ ಪ್ರಾರಂಭ ಮತ್ತು ಕೊನೆಯನ್ನು ಗುರುತಿಸಲು ಈ ರೇಖೆಯನ್ನು ಇಟ್ಟುಕೊಳ್ಳಬಹುದೆಂದು ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾಗಿದೆ.