ಜೀವನದಲ್ಲಿ ಕೆಲವೊಮ್ಮೆ ಅವಘಡಗಳು, ಅಘಟಿತಗಳು ಘಟಿಸುತ್ತವೆ, ಕಷ್ಟ ನಷ್ಟಗಳು ಸಂಭವಿಸುತ್ತವೆ. ಆಗ ನಮಗೆ ಬೇಸರವಾಗುವುದು ಸಹಜ. ನಮ್ಮ ಮನಸ್ಸು ಆಗ ಮತ್ತೆ ಮತ್ತೆ ಆದ ನಷ್ಟದ ಬಗ್ಗೆ ಕೊರಗುತ್ತಾ, ಹಳಹಳಿಸುತ್ತಾ ಇರುತ್ತದೆ. ಆದರೆ ಆಗಿ ಹೋದದ್ದರ ಬಗ್ಗೆ ವಿಪರೀತ ಕೊರಗುವುದರಿಂದ ಪ್ರಯೋಜನವೇನೂ ಆಗುವುದಿಲ್ಲ. ಮತ್ತಷ್ಟು ಬೇಸರವಾಗುತ್ತದೆ ಅಷ್ಟೆ. ಆದುದರಿಂದ, ಆದಂತಹ ನಷ್ಟದ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಿ ಮುಂದೆ ಏನು ಮಾಡಬಹುದೆಂದು ಆಲೋಚಿಸಬೇಕು ನಾವು. ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ ಎಂಬ ಕನ್ನಡ ಗಾದೆಮಾತು ಇದೇ ವಿಷಯವನ್ನು ಕಣ್ಣಿಗೆ ಕಟ್ಟಿದಂತೆ ಹೇಳುತ್ತದೆ. ಚೆಲ್ಲಿದ ಹಾಲನ್ನು ಮತ್ತೆ ಬಳಿದುಕೊಂಡು ಬಳಸಲಾಗುವುದಿಲ್ಲ, ಹಾಗೆಯೇ ಆಗಿ ಹೋದಂತಹ ಮತ್ತು ಸರಿಪಡಿಸಲಾರದ ತಪ್ಪುಗಳ ಬಗ್ಗೆ ಚಿಂತಿಸುತ್ತಾ ಕೂರುವುದರಿಂದ ಏನೂ ಪ್ರಯೋಜನವಿಲ್ಲ. ಮುಂದೆ ಅವು ನಮ್ಮಿಂದ ಆಗದಂತೆ ಎಚ್ಚರ ವಹಿಸಬೇಕು ಅಷ್ಟೆ.

Chellida haalige aththu prayojanavilla (There is no use in crying over the spilt milk). This is a proverb which is very popular in English language also. In life how much ever careful we are mishaps and accidents do take place at times. In such times it is natural for us humans to lament about the happening and keep brooding about it. But the fact remains that any amount of crying and brooding will not reverse the damage which has already happened. So it is wise to get over this as soon as possible and think about what can be done at the present moment and for future.