ಮನುಷ್ಯ ಅಂದರೆ ಅವನ ಮಾಡಿಕೊಂಡ ಅಭ್ಯಾಸಗಳ ಮೊತ್ತ ಅನ್ನುತ್ತಾರೆ. ಆಟ ಆಡಿದಂತೆ ಬೇಜವಾಬ್ದಾರಿಯಿಂದ ಜೀವನ ಮಾಡುತ್ತಾ ಬೇರೆಯವರು ಮಾಡಿ ಇರಿಸಿದ್ದನ್ನು ಆರಾಮಾಗಿ ತಿನ್ನುತ್ತಾ ಜೀವನ ಮಾಡುವವರು, ಎಂದಾದರೂ ಕಷ್ಟ ಪಟ್ಟು ತಾವೇ ಅಟ್ಟು( ಅಡಿಗೆ ಮಾಡಿ) ಊಟ ಮಾಡುತ್ತಾರೆಯೇ? ಇಲ್ಲ. ಅವರು ಆ ಸಾಮರ್ಥ್ಯವನ್ನೇ ಬೆಳೆಸಿಕೊಂಡಿರುವುದಿಲ್ಲ. ಜನರ ಜೀವನ ಕ್ರಮ, ಅಭ್ಯಾಸಗಳನ್ನು ದೀರ್ಘ ಕಾಲ ಗಮನಿಸಿ ನಮ್ಮ ಹಿರಿಯರು ಬಳಕೆಗೆ ತಂದಿರುವ ಗಾದೆ ಮಾತು ಇದು, ಅವರ ಅನುಭವದ ಸಾರ. ಇದರಿಂದ ನಾವು ಕಲಿಯುವುದು ಬಹಳ ಇದೆ.
Kannada proverb – Aadi unda mai attu undeethe? ( will someone who always ate food cooked by others easily, cook food for themselves?)
We human beings are the bundle of our habits. If we are used to an easy life, over time, we will lose our ability to face difficulties. If we are used to eat food without even giving a thought about earning it or cooking it, it is very unlikely that we will have the ability or knowhow to cook our own food. This proverb has emerged out of a very experienced mindset. There is a lot to learn from this.