ಮೊದಲೇ ಕಷ್ಟದಲ್ಲಿರುವವರಿಗೆ ಇನ್ನಷ್ಟು ಕಷ್ಟ ಬಂದರೆ ಈ ಗಾದೆಮಾತನ್ನು ಬಳಸುತ್ತಾರೆ. ನೋಡಿಕೊಳ್ಳುವವರು ಯಾರೂ ಇಲ್ಲದ ಕೋಳಿಯೊಂದು, ಅಲ್ಲಿ ಇಲ್ಲಿ ಬಿದ್ದಿರಬಹುದಾದ ಕಾಳುಗಳನ್ನು ಎಷ್ಟೋ ಕಷ್ಟದಿಂದ ಹುಡುಕಿ ತಿನ್ನುತ್ತಾ ಇದ್ದಾಗ, ಯಾರಾದರೂ ಅದರ ಕಾಲು ಬೇರೆ ಮುರಿದುಬಿಟ್ಟರೆ ಅದಕ್ಕೆ ಹೇಗಾಗಬೇಡ! ಇದೇ ರೀತಿಯಲ್ಲಿ ಬಡವರ ಮನೆಯ ದುಡಿಯುವ ವ್ಯಕ್ತಿ ಅಪಘಾತಕ್ಕೊಳಗಾದರೆ, ತುಂಬಿದ ಮನೆಯ ಜವಾಬ್ದಾರಿ ವಹಿಸಿಕೊಂಡ ಪರಿಶ್ರಮಿಯ ಕೆಲಸ ಹೋದರೆ, ಪರಿಸ್ಥಿತಿ ಬಹಳ ದುರ್ಭರ ಆಗುತ್ತದೆ ಅಲ್ಲವೆ? ಅಂತಹ ಸಂದರ್ಭಗಳಲ್ಲಿ ಇದನ್ನು ನೋಡಿದ ಅವರ ಪರಿಚಿತರು ‘ಅಯ್ಯೋ ಪಾಪ’ ಅನ್ನುತ್ತಾ ಬಳಸುವ ಗಾದೆ ಮಾತು ಇದು.
Kannada proverb – Aaykondu thinno koli kaalu murdange (A hen which was ready scurrying for food lost its leg).
Sometimes life can throw mortals into very difficult situations. A breadwinner of a poor family may lose his job, head of a large, not-so-well-to-do family may meet with an accident and so on. It is like a scurrying poor hen, which has no one to care for and was searching for foodgrains, lost its leg too, because someone cut its leg! It is very sad. Isn’t it? But sometimes life is like that! Therefore this proverb has come in usage.