ಕನ್ನಡ ಭಾಷೆಯ ಒಂದು ಅಪರೂಪದ ಗಾದೆಮಾತು ಇದು‌. ನಮ್ಮ ಬಗ್ಗೆ ಹಾಗೂ ನಮ್ಮ ಸಹಜೀವಿಗಳ ಬಗ್ಗೆ ನಮಗೆ ತಾಳ್ಮೆ ಮತ್ತು ಕ್ಷಮಾಗುಣವನ್ನು ಕಲಿಸುವ ವಿವೇಕದ ಮಾತು.‌ ಮಾತಾಡುವವರು‌ ಮಾತಿನ ಓಘದಲ್ಲಿಯೋ, ಸರಿಯಾಗಿ ಯೋಚಿಸದೆಯೋ ಮಧ್ಯೆ

ಒಂದೊಂದು ತಪ್ಪು ಶಬ್ದ ಆಡಬಹುದು. ಹಾಗೆಯೇ ದಾರಿ ಮೇಲೆ ನಡೆಯುವವರು ಕಲ್ಲು ತಾಗಿಯೋ, ಚಪ್ಪಲಿ ಜಾರಿಯೋ ಒಮ್ಮೊಮ್ಮೆ ಎಡವಬಹುದು.‌ ಹೀಗೆಂದ ಮಾತ್ರಕ್ಕೆ ಮುಂದೆ ಅವರು ನಡೆಯಲೇಬಾರದು, ಮಾತಾಡಲೇಬಾರದು ಎಂದು ಅರ್ಥ ಅಲ್ಲ, ಅಲ್ಲವೇ?

ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಬೇಕು…ಸಾಗಲು ಬಿಡಬೇಕು. ‌ಅದೇ ಬದುಕು. ಏನಂತೀರಿ?

Kannada proverb  – Adonu tapthane, nadeyonu edavthane ( One who is talking may falter in his speech, and one who is walking may miss a step).

This is a rare proverb of Kannada which teaches us to be patient about ourselves, our loved ones, and people in general. We, just ordinary humans tend to make mistakes while talking or may miss a step while walking. That should not keep us from doing our duty or jobs. Isn’t it? We need to be a little kinder and blinder to our mistakes and other’s mistakes, so that life’s journey can go on. Isn’t it? This proverb reminds us that human beings do have their imperfections and we have to bear with them. A wise piece of advice from our elders. What you say?