ಕೇಳಲು ಆಕರ್ಷಕ ಎನಿಸುವಂತೆ ಪ್ರಾಸಬದ್ಧವಾಗಿರುವ ಮೇಲಿನ ಗಾದೆಮಾತು ಬಹು ಮುಖ್ಯವಾದ ಒಂದು ಜೀವನಮೌಲ್ಯವನ್ನು ಕಲಿಸುತ್ತದೆ. ನಮಗೆ ಅನ್ನ ಹಾಕಿದ ಮನೆ – ಅದು ನಮ್ಮ ಅಪ್ಪ-ಅಮ್ಮನ ಮನೆ, ನೆಂಟರ ಮನೆ, ಸ್ನೇಹಿತರ ಮನೆ, ಹಳೆಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ವಾರಾನ್ನ ಹಾಕುತ್ತಿದ್ದ ಮನೆ ಯಾವುದಾದರೂ ಆಗಬಹುದು ……. ಒಟ್ಟಿನಲ್ಲಿ ಯಾವ ಮನೆ ನಮ್ಮನ್ನು ಪೋಷಿಸಿರುತ್ತದೋ, ಅಲ್ಲಿ ನಾವು
ಕಳ್ಳತನ ಮಾಡಬಾರದು, ಆ ಮನೆಗೆ ತೊಂದರೆ ಆಗುವಂಥದ್ದೇನನ್ನೂ ಮಾಡಬಾರದು ಎಂಬುದು ಈ ಗಾದೆಮಾತಿನ ಅರ್ಥ. ಎಷ್ಟು ಉತ್ತಮ ಮೌಲ್ಯ ಅಲ್ಲವೇ ಇದು!
Kannada proverb : Anna haakida manege Kanna haakabeda( Do not steal in the home that has fed you). This proverb teaches a very important value of life. We need to deeply respectful and be ever grateful to the home which has fed us. May it be our parent’s home, a relative’s home, friend’s home or a philanthropist’s home, one should not trouble that abode or steal things from there. It teaches us the value of gratitude and respect.