ಪರಮಾಣು – ಒಂದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಬಲ್ಲಷ್ಟು ಪ್ರಮಾಣದಲ್ಲಿರುವಂತಹ ಮೂಲವಸ್ತುವಿನ ಅತಿ ಚಿಕ್ಕ ಭಾಗ.
ಕ್ಯಾಮೆರಾಕಿಂಡಿ – ಒಂದು ಛಾಯಾಗ್ರಾಹಕ ಯಂತ್ರ(ಕ್ಯಾಮೆರಾ)ದ ಮಸೂರದಲ್ಲಿ ಬೆಳಕನ್ನು ಒಳಗೆ ಬಿಟ್ಟುಕೊಳ್ಳುವ ಕಿಂಡಿ. ಎಷ್ಟು ಬೆಳಕು ಒಳಗೆ ಬರುತ್ತದೆ ಎಂಬುದು ಈ ಮಸೂರದ ವ್ಯಾಸವನ್ನು ಅವಲಂಬಿಸಿರುತ್ತದೆ.
ದೂರಬಿಂದು – ಒಂದು ಗ್ರಹ, ಧೂಮಕೇತು ಅಥವಾ ಕೃತಕ ಉಪಗ್ರಹದ ಕಕ್ಷೆಯಲ್ಲಿ ಸೂರ್ಯನಿಂದ ಗರಿಷ್ಠ ದೂರದಲ್ಲಿರುವ ಬಿಂದು.
ಕಣ್ಣು ದ್ರವ – ಕಣ್ಣಿನಲ್ಲಿ ಕಣ್ಣುಗುಡ್ಡೆಯ ಹಿಂದಿನ ಪಾರದರ್ಶಕ ಭಾಗ ಮತ್ತು ಮಸೂರದ ನಡುವೆ ಇರುವ ದ್ರವ.
ನಿರ್ವಾತಕಾರಕ – ನಿರ್ವಾತ ರೇಚಕ(ಪಂಪು)ಗಳಲ್ಲಿ, ಭಾಗಶಃ ನಿರ್ವಾತವನ್ನುಂಟು ಮಾಡಲು ಬಳಸುವ ಉಪಕರಣ.
ಅಸಮಗುಣಿ – ತನ್ನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಭೌತಿಕ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಸ್ತು ಅಥವಾ ಮಾಧ್ಯಮ.
ಶೂನ್ಯೀಕರಣ – ಒಂದು ಕಣ ಮತ್ತು ಅದರ ವಿರುದ್ಧ ಕಣಗಳು ಒಂದಕ್ಕೊಂದು ಸಂಘರ್ಷಿಸಿದಾಗ ಉಂಟಾಗುವ ಸಂಪೂರ್ಣ ವಿನಾಶ.
ಧನ ವಿದ್ಯುದ್ವಾರ – ಎಲೆಕ್ಟ್ರಾನುಗಳನ್ನು ಆಕರ್ಷಿಸುವ ಧನಾತ್ಮಕ ವಿದ್ಯುತ್ ತುದಿಗೋಡೆ.
Like us!
Follow us!