Aclastic

ವಕ್ರಗೊಳಿಸದ ಗುಣ – ವಸ್ತುಗಳಲ್ಲಿರುವ ಒಂದು ಗುಣಲಕ್ಷಣ. ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕನ್ನು ವಕ್ರೀಭವನಕ್ಕೆ(ರಿಫ್ರ್ಯಾಕ್ಷನ್) ಒಳಪಡಿಸದ ಒಂದು ಗುಣವಿದು.

Activation

ವಿಕಿರಣ ಪ್ರಚೋದನೆ _ ಒಂದು ವಸ್ತುವಿನಲ್ಲಿ ವಿಕಿರಣ(ರೇಡಿಯೇಷನ್)ವನ್ನು ಪ್ರಚೋದಿಸುವ ಪ್ರಕ್ರಿಯೆ.

ಆಕಾಶ ನೋಡಕ್ಕೆ ನೂಕಾಟ ಯಾತಕ್ಕೆ?

ಇದು ಕನ್ನಡದ ಒಂದು ಸ್ವಾರಸ್ಯಕರವಾದ ಗಾದೆಮಾತು. ನಾವು ತಲೆ ಎತ್ತಿದರೆ ಸಾಕು ನಮಗೆ ಕಾಣುವ ಆಕಾಶ ನೋಡಲಿಕ್ಕಾಗಿ, ಒಬ್ಬರನ್ನೊಬ್ಬರು ತಳ್ಳಿ ನೂಕಾಡಿ ನೋಡುವ ಅಗತ್ಯ ಏನಿದೆ? ಆರಾಮವಾಗಿ ಆಕಾಶ ನೋಡಬಹುದಲ್ಲವೇ? ಇದೇ ಈ ಗಾದೆಯ ಅರ್ಥ. ಮೇಲ್ನೋಟಕ್ಕೆಯೇ ಗೋಚರವಾಗುವ ಈ ಅರ್ಥದ ಹಿಂದಿನ ಮರ್ಮ ಏನೆಂದರೆ, ಜೀವನದಲ್ಲಿ ನಾವು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಇಚ್ಛಿಸಿದರೆ,

Absolute zero 

ಪರಮ ಶೂನ್ಯ – ಸೈದ್ಧಾಂತಿಕವಾಗಿ ಸಾಧ್ಯವಾಗಬಹುದಾದ ಅತಿ ಕನಿಷ್ಠ ಉಷ್ಣತೆ.

ಗುರುತಿನ ಚೀಟಿಯ ಪ್ರಸಂಗ

ನಾನು ಸದ್ಯದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಒಂದು ಭಾಗವಾದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ, ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಯ ಭಾಗವಾಗಿ ನಾನು ನನ್ನ ವಿದ್ಯಾರ್ಥಿನಿಯರೊಂದಿಗೆ, ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡುವ ಪ್ರಯತ್ನದಲ್ಲಿ ತೊಡಗಿರುತ್ತೇನೆ. ಬೆಂಗಳೂರಿಗರು ವ್ಯಾಪಕವಾಗಿ ಬಳಸುವ `ಕಂಗ್ಲೀಷನ್ನು'(ಅಂದರೆ, ಕನ್ನಡ ಇಂಗ್ಲಿಷ್ ಸೇರಿದ ಕನ್ನಡದ ಒಂದು ಭಾಷಾರೂಪವನ್ನು) ಕಡಿಮೆ ಬಳಸಬೇಕು ಎಂಬ ಉದ್ದೇಶವು ಸಹ ಇದರ ಹಿಂದೆ ಇದೆ ಅನ್ನಿ.

Acoustics

ಶಬ್ಧವಿಜ್ಞಾನ – ಶಬ್ಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.

Adhesion

ಅಂಟಿಕೊಳ್ಳುವಿಕೆ – ಒಂದರಂತೆ ಒಂದಿಲ್ಲದ ಕಣಗಳು ಅಥವಾ  ಮೇಲ್ಮೈ ಗಳು ಪರಸ್ಪರ ಅಂಟಿಕೊಳ್ಳುವ ಪ್ರವೃತ್ತಿ.

Alpha particles

ಆಲ್ಫಾ ಕಣಗಳು – ಎರಡು ಪ್ರೋಟಾನುಗಳು ಮತ್ತು ಎರಡು ನ್ಯೂಟ್ರಾನುಗಳು ಒಟ್ಟಿಗೆ ಬೆಸೆದುಕೊಂಡು ಉಂಟಾಗಿರುವ ಕಣ. ಹೀಲಿಯಂ ಅಣುವಿನ ಬೀಜಕೇಂದ್ರಕ್ಕೆ ಸಮನಾದದ್ದು.

Amorphous solid

ಆಕಾರರಹಿತ ಘನವಸ್ತು – ಹರಳುಗಟ್ಟದಿರುವಂತಹ ಘನವಸ್ತು. ಇದಕ್ಕೆ ನಿಶ್ಚಿತ ಆಕಾರ ಇರುವುದಿಲ್ಲ.

Antimatter 

ಪ್ರತಿ ಕಣ – ಒಂದು ಕಣವು ಹೊಂದಿರುವಷ್ಟೇ ದ್ರವ್ಯರಾಶಿ ಮತ್ತು ಗಿರಕಿ(ಸ್ಪಿನ್)ಗಳನ್ನು ಹೊಂದಿದ್ದರೂ  ಅದಕ್ಕೆ ವಿರುದ್ಧವಾದ ವಿದ್ಯುದಂಶವನ್ನು ಹೊಂದಿರುವ ಕಣ.

Page 112 of 113

Kannada Sethu. All rights reserved.